ಆರೋಗ್ಯ ಕ್ಷೇತ್ರದಲ್ಲಿ ಡಾ ಮಂಜುನಾಥ್ ಸೇವೆ ಅನನ್ಯ. ಅವರನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತುಕತೆ ಆದಾಗ ಅವರ ಮಗ ನನ್ನ ಪ್ರಶ್ನೆ ಮಾಡಿದ್ದರು. 'ನಾವು ನೆಮ್ಮದಿಯಾಗಿದ್ದೇವೆ, ರಾಜಕೀಯ ಯಾಕೆ ನಮಗೆ' ಎಂದಿದ್ದರು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರು (ಮಾ.14): ಆರೋಗ್ಯ ಕ್ಷೇತ್ರದಲ್ಲಿ ಡಾ ಮಂಜುನಾಥ್ ಸೇವೆ ಅನನ್ಯ. ಅವರನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತುಕತೆ ಆದಾಗ ಅವರ ಮಗ ನನ್ನ ಪ್ರಶ್ನೆ ಮಾಡಿದ್ದರು. 'ನಾವು ನೆಮ್ಮದಿಯಾಗಿದ್ದೇವೆ, ರಾಜಕೀಯ ಯಾಕೆ ನಮಗೆ' ಎಂದಿದ್ದರು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.

Add Asianetnews Kannada as a Preferred SourcegooglePreferred

ದೇಶದಲ್ಲಿ, ಆರೋಗ್ಯ ಸೇವೆಯಲ್ಲಿ ಅವರಿಂದ ಇನ್ನೂ ದೊಡ್ಡ ಮಟ್ಟಿನ ಸೇವೆ ಬೇಕು ಅಂತ ನನಗನಿಸಿದೆ. ನಮ್ಮ ಮೇಲೆ ಏನು ಬೇಕಾದರೂ ಮಾತಾಡಿ. ಆದರೆ ಡಾ ಮಂಜುನಾಥ್ ಅವರ ಬಗ್ಗೆ ಮಾತಾಡುವ ಅರ್ಹತೆ ನಿಮಗಿಲ್ಲ ಎಂದು ಪರೋಕ್ಷವಾಗಿ ಸಂಸದ ಡಿಕೆ ಸುರೇಶ್ ಗೆ ತಿವಿದರು.

ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಯಾರೋ ನನಗೆ ಗೊತ್ತಿಲ್ಲ ಎಂದ ಡಿಕೆ ಸುರೇಶ್`!

ನಾನು ದೂರದೃಷ್ಟಿ ಇಟ್ಟುಕೊಂಡಿದ್ದೇನೆ, ನಮ್ಮ ಪಕ್ಷಕ್ಕೆಕ ಹಿನ್ನೆಡೆಯಾಗಲು ಬಿಡುವುದಿಲ್ಲ. ನಾನೇ ಡಾ ಮಂಜುನಾಥ್ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದೇನೆ ಹೊರತು ಅವರಾಗಿಯೇ ಚುನಾವಣೆಗೆ ನಿಂತಿದ್ದಲ್ಲ. ಅಂತಹವರ ವಿರುದ್ಧ ನೀವು ಏನೇ ಟೀಕೆ ಮಾಡಿದ್ರೂ ನಿಮ್ಮ ಗರ್ವ, ದುರಾಹಂಕಾರಕ್ಕೆ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ. ನೀವು ಎಷ್ಟು ಮನೆ ಹಾಳುಮಾಡಿದ್ದೀರಿ ಅನ್ನೋದು ನನಗೆ ಗೊತ್ತಿದೆ ಎಂದು ಸಂಸದ ಡಿಕೆ ಸುರೇಶ್ ಗೆ ಟಾಂಗ್ ಕೊಟ್ಟರು. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷವನ್ನು ಬೆಂಬಲಿಸುವಂತೆ ನೆರೆದಿದ್ದ ಮಹಿಳಾ ಕಾರ್ಯಕರ್ತರಿಗೆ ಎಚ್‌ಡಿ ಕುಮಾರಸ್ವಾಮಿ ಕರೆ ನೀಡಿದರು.

ರಾಯಚೂರು: ಬೆಳಗ್ಗೆ 11 ಕ್ಕೆ ನಡೆಯಬೇಕಿದ್ದ ಗ್ಯಾರಂಟಿ ಸಮಾವೇಶ 1 ಗಂಟೆಯಾದ್ರೂ ಸಿಎಂ, ಡಿಸಿಎಂ ಸುಳಿವಿಲ್ಲ!