ಬಂಗಾಳದಲ್ಲಿ ಕೆಂಪು ಪಾರ್ಟಿಗಳನ್ನು ಇನ್ನಷ್ಟು ಶಕ್ತಿಹೀನರನ್ನಾಗಿ ಮಾಡಲು ಮುಸ್ಲಿಂ ತುಷ್ಟೀಕರಣದ ಆಟ ಆರಂಭಿಸಿದರು. ಬಂಗಾಳದಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಈ ಬಾಂಗ್ಲಾದೇಶಿ ಅಕ್ರಮ ವಲಸಿಗರ ಓಲೈಕೆಯ ಪಾಲಿಟಿಕ್ಸ್‌ನಿಂದ. 

ಬೆಂಗಳೂರು (ಅ. 23): 3 ದಶಕಗಳ ಕಮ್ಯುನಿಸ್ಟ್‌ ಆಡಳಿತದ ನಂತರ ಬಂಗಾಳಿಗಳು ಹವಾಯಿ ಚಪ್ಪಲಿ ಹಾಕಿ ಹಳೆ ಕಾರ್‌ನಲ್ಲಿ ಓಡಾಡುವ ಹೋರಾಟಗಾರ್ತಿ ಮಮತಾ ಮೇಲೆ ವಿಶ್ವಾಸವಿಟ್ಟು ಅಧಿ​ಕಾರ ಕೊಟ್ಟಿದ್ದರು. ಮಮತಾ ಕೆಂಪು ಪಾರ್ಟಿಗಳಿಗಿಂತ ಹೆಚ್ಚು ಸಮಾಜವಾದಿ ಆರ್ಥಿಕ ನಿಲುವುಗಳನ್ನು ತೋರಿಸುತ್ತಿದ್ದಾರೆ. ಆದರೆ ಅಭಿವೃದ್ಧಿವಂಚಿತ ಬಂಗಾಳಿ ಯುವಕರಿಗೆ 10 ವರ್ಷಗಳಲ್ಲಿ ಏನನ್ನಾದರೂ ಕೆಲಸ ಮಾಡಿ ತೋರಿಸುವ ಉತ್ಸಾಹ, ಇಚ್ಛಾಶಕ್ತಿ ತೋರಿಸಲಿಲ್ಲ.

Add Asianetnews Kannada as a Preferred SourcegooglePreferred

ಬದಲಾಗಿ ಕೆಂಪು ಪಾರ್ಟಿಗಳನ್ನು ಇನ್ನಷ್ಟುಶಕ್ತಿಹೀನರನ್ನಾಗಿ ಮಾಡಲು ಮುಸ್ಲಿಂ ತುಷ್ಟೀಕರಣದ ಆಟ ಆರಂಭಿಸಿದರು. ಬಂಗಾಳದಲ್ಲಿ ಬಿಜೆಪಿಗೆ ಪ್ರವೇಶ ಸಿಕ್ಕಿದ್ದೇ ಈ ಬಾಂಗ್ಲಾದೇಶಿ ಅಕ್ರಮ ವಲಸಿಗರ ಓಲೈಕೆಯ ಪಾಲಿಟಿಕ್ಸ್‌ನಿಂದ. 34 ವರ್ಷ ಕೆಂಪು ಪಕ್ಷಗಳು ಕೇವಲ ರಾಜಕೀಯ ಅ​ಧಿಕಾರ ಹಿಡಿದಿರಲಿಲ್ಲ; ಬದಲಾಗಿ ಕೃಷಿ, ಶಿಕ್ಷಣ, ಮಹಿಳೆ, ಸಿನೆಮಾ, ನಾಟಕ, ಸಂಸ್ಕೃತಿ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೆಂಪು ಆವರಿಸಿಕೊಂಡಿತ್ತು. ಮಮತಾ ಎಡದಿಂದ ರಾಜಕೀಯ ಅ​ಧಿಕಾರವೇನೋ ಕಿತ್ತುಕೊಂಡರು. ಆದರೆ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವಂಥ ಬುದ್ಧಿಜೀವಿಗಳು ಮಮತಾ ಬಳಿ ಇರಲಿಲ್ಲ.

ಈಗಿನ ಯುವಜನತೆ 'ಕೇಸರಿ' ಯತ್ತ ವಾಲುತ್ತಿರುವುದೇಕೆ?

ಹೀಗಾಗಿ ಸ್ಥಳೀಯ ಅವಕಾಶವಾದಿಗಳು, ಗೂಂಡಾಗಳು, ಅಧಿ​ಕಾರಶಾಹಿ ಇಂಥ ಕ್ಷೇತ್ರಗಳನ್ನು ಆವರಿಸಿಕೊಳ್ಳತೊಡಗಿದರು. ಇದು ಪ್ರತಿರೋಧಕ್ಕೆ ಕಾರಣವಾಯಿತು. ಮಮತಾರ ಬಲವಂತದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೆಂಪು ಪಕ್ಷಗಳಿಗೆ ಇಲ್ಲ ಎಂದು ಗೊತ್ತಾದ ನಂತರ, ಕೆಂಪು ಸಮರ್ಥಕರು ಕೂಡ ನಿಧಾನವಾಗಿ ಬಿಜೆಪಿ ಕಡೆ ವಾಲತೊಡಗಿದ್ದಾರೆ.

2000 ರ ಆಸುಪಾಸು ಹುಟ್ಟಿರುವ ಯುವಕರಿಗೆ ‘ಕೆಂಪು’ ಬಗ್ಗೆ ಆಸಕ್ತಿಯಿಲ್ಲ, ಮಮತಾ ಬಗ್ಗೆ ಪ್ರೀತಿಯಿಲ್ಲ, ಕೋಪವಿದೆ. ಹೀಗಾಗಿ ಆಸೆಯ ಕಣ್ಣಿನಿಂದ ಮೋದಿ, ಹಿಂದುತ್ವ, ಬಿಜೆಪಿ ಕಡೆ ನೋಡುತ್ತಿದ್ದಾರೆ. ಬಂಗಾಳದಲ್ಲಿ 30 ಪ್ರತಿಶತಕ್ಕೂ ಹೆಚ್ಚಿರುವ ಮುಸ್ಲಿಮರು ಈಗ ಮಮತಾರ ಸಾಮರ್ಥ್ಯವೂ ಹೌದು ದೌರ್ಬಲ್ಯವು ಹೌದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ