Vijayasankalpa yatre: ಡಿಕೆಶಿ ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆ ಬಿಡಲ್ಲ: ಕಟೀಲ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಿಎಂ ಆಗಲು ಹಗಲು ಕನಸು ಕಾಣುತ್ತಿದ್ದು, ಇವರಿಬ್ಬರನ್ನು ಸಿಎಂ ಆಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ್‌ ತಿಳಿಸಿದರು.

Mallikarjuna Kharge will not allow DKS to become CM says Katee at ballari rav

ಹರಪನಹಳ್ಳಿ (ಮಾ.17) : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಿಎಂ ಆಗಲು ಹಗಲು ಕನಸು ಕಾಣುತ್ತಿದ್ದು, ಇವರಿಬ್ಬರನ್ನು ಸಿಎಂ ಆಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ್‌ ತಿಳಿಸಿದರು.

ಗುರುವಾರ ರಾತ್ರಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಕಾಂಗ್ರೆಸ್‌ನವರು ಪ್ಯಾಂಟ್‌, ಶರ್ಚ್‌ ಹೊಲಿಸಿ ಸಿಎಂ ಕುರ್ಚಿಗಾಗಿ ತಿರುಕುನ ಕನಸು ಕಾಣುತ್ತಿದ್ದು, ಅವರಿಗೆ ಹುಚ್ಚು ಹಿಡಿದಿದೆ ಎಂದು ಲೇವಡಿ ಮಾಡಿದರು.

ಕಟೀಲ್‌ ಜೋಕರ್‌, ಯಾವುದೇ ಹೋರಾಟ ಮಾಡಿಲ್ಲ: ಸಿದ್ದರಾಮಯ್ಯ

ಶಾಸಕ ಜಿ. ಕರುಣಾಕರರೆಡ್ಡಿ ಮಾತನಾಡಿ, ತುಂಗಭದ್ರಾ ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸವನ್ನು ಮಾಡಿದ್ದೇನೆ. ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ದಿನಾಂಕಕ್ಕೆ ಕಾಯುತ್ತಿದ್ದು, ಉದ್ಘಾಟನೆಯನ್ನು ಅದ್ಧೂರಿಯಾಗಿ ಮಾಡಿ ಕೆರೆಗೆ ತುಂಬಿಸಲು ಚಾಲನೆ ನೀಡಲಾಗುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿದರು. ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್‌, ಬಳ್ಳಾರಿ ಸಂಸದ ವೈ.ದೇವೆಂದ್ರಪ್ಪ ಪುರಸಭೆ ಅಧ್ಯಕ್ಷ ಎಚ್‌.ಎಂ. ಅಶೋಕ, ನಿಟ್ಟೂರು ಭೀಮವ್ವ, ರಾಜ್ಯ ಬಿಜೆಪಿ ಸಹಕಾರ ಪ್ರಕೋಷ್ಠಕ ಸಹ ಸಂಚಾಲಕ ಜಿ. ನಂಜನಗೌಡ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ, ತಾಲೂಕು ವಿಜಯ ಸಂಕಲ್ಪಯಾತ್ರೆ ಸಂಚಾಲಕ ಪೂಜಾರ ಚಂದ್ರಶೇಖರ, ಸಿದ್ದೇಶ ಯಾದವ, ಕೋಡಿಹಳ್ಳಿ ಭೀಮಪ್ಪ, ಪೂಜಪ್ಪ, ಪಿ. ಮಹಾಬಲೇಶ್ವರಗೌಡ, ಅರುಂಡಿ ನಾಗರಾಜ, ಮುತ್ತಿಗಿ ವಾಗೀಶ, ಬಾಗಳಿ ಕೊಟ್ರೇಶಪ್ಪ, ಲೋಕೇಶ, ಎಂ.ಪಿ. ನಾಯ್ಕ, ಕಣಿವಿಹಳ್ಳಿ ಮಂಜುನಾಥ, ವಿಷ್ಣುರೆಡ್ಡಿ, ರಾಘವೇಂದ್ರಶೆಟ್ಟಿ, ಪ್ರಭಾವತಿ ಅಶೋಕ ಇತರರು ಇದ್ದರು.

ವಜ್ರಮುನಿಗಿಂಥ ಸಿದ್ದರಾಮಯ್ಯ ದೊಡ್ಡ ಖಳನಾಯಕ: ಕಟೀಲ್‌ ವಾಗ್ದಾಳಿ

Latest Videos
Follow Us:
Download App:
  • android
  • ios