ಖರ್ಗೆಯವ್ರನ್ನ ಬೇಸಗೆ ಬಿಸಿಲಿಗೆ ನಿಲ್ಲಿಸಿ ಕಾಂಗ್ರೆಸ್ಸಿಗರಿಂದ ಅವಮಾನ: ಮೋದಿ

ಛತ್ತೀಸ್‌ಗಢ ಕಾಂಗ್ರೆಸ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆಬಿಸಿಲಿನಲ್ಲಿ ನಿಂತಿದ್ದರೂ ಅವರಿಗೆ ಯಾರೂ ಕೊಡೆ ಹಿಡಿಯಲು ಇರಲಿಲ್ಲ. ಆದರೆ ಅವರ ಪಕ್ಕದಲ್ಲಿರುವವರಿಗೆ (ಸೋನಿಯಾ)  ಕೊಡೆ ಹಿಡಿಯಲಾಗಿತ್ತು.  ಇದನ್ನು ನೋಡಿದರೆ ಹೆಸರಿಗಷ್ಟೇ ಕಾಂಗ್ರೆಸ್‌ ಅಧ್ಯಕ್ಷ. ರಿಮೋಟ್‌ ಕಂಟ್ರೋಲ್‌(Remote control) ಬೇರೆಯವರ ಕೈಯಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

Mallikarjuna Kharge stood in the sun and was insulted by Congress rav

ಬೆಳಗಾವಿ (ಫೆ.27): ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಾಮ್‌ಕೇವಾಸ್ತೆ ಅಧ್ಯಕ್ಷರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಛತ್ತೀಸ್‌ಗಢ ಕಾಂಗ್ರೆಸ್‌ ಅಧಿವೇಶನದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ(AICC President Mallikarjun kharge) ಬಿಸಿಲಿನಲ್ಲಿ ನಿಂತಿದ್ದರೂ ಅವರಿಗೆ ಯಾರೂ ಕೊಡೆ ಹಿಡಿಯಲು ಇರಲಿಲ್ಲ. ಆದರೆ ಅವರ ಪಕ್ಕದಲ್ಲಿರುವವರಿಗೆ (ಸೋನಿಯಾ) Soniyagandhi ಕೊಡೆ ಹಿಡಿಯಲಾಗಿತ್ತು. ಎಐಸಿಸಿ ಅಧ್ಯಕ್ಷರಾಗಿದ್ದರೂ ಕೊಡೆ ಹಿಡಿಸಿಕೊಳ್ಳುವ ಭಾಗ್ಯ ಖರ್ಗೆಗೆ ಇಲ್ಲ. ಇದನ್ನು ನೋಡಿದರೆ ಹೆಸರಿಗಷ್ಟೇ ಕಾಂಗ್ರೆಸ್‌ ಅಧ್ಯಕ್ಷ. ರಿಮೋಟ್‌ ಕಂಟ್ರೋಲ್‌(Remote control) ಬೇರೆಯವರ ಕೈಯಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಫೆ.27ಕ್ಕೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ

ರಾಜ್ಯದ ಪ್ರಭಾವಿ ಲಿಂಗಾಯತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ಅವರ ಜನ್ಮದಿನವನ್ನು ಶಿವಮೊಗ್ಗದಲ್ಲಿ ಅವಿಸ್ಮರಣೀಯ ರೀತಿಯಲ್ಲಿ ಆಚರಿಸಿ, ಅವರನ್ನು ಹಾಡಿ ಹೊಗಳಿದ ಪ್ರಧಾನಿ ನರೇಂದ್ರ ಮೋದಿ((Narendra Modi) ಅವರು, ಮತ್ತೊಂದೆಡೆ ಕಾಂಗ್ರೆಸ್‌ ಪಕ್ಷ ಲಿಂಗಾಯತ ಸಮುದಾಯದ(Veerashaiva Lingayat community) ಮಾಜಿ ಮುಖ್ಯಮಂತ್ರಿಗಳಾದ ಎಸ್‌.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್‌ ಅವರಿಗೆ ಅನ್ಯಾಯ ಮಾಡಿದೆ ಎಂದು ಹೇಳಿ ಪ್ರತಿಪಕ್ಷಕ್ಕೆ ಟಾಂಗ್‌ ನೀಡಿದರು. ತನ್ಮೂಲಕ ತಮ್ಮ ಒಂದು ದಿನದ ಕರ್ನಾಟಕ ಭೇಟಿಯಲ್ಲಿ ಲಿಂಗಾಯತ ಅಸ್ತ್ರ ಪ್ರಯೋಗಿಸಿ, ಬಿಜೆಪಿಯ ಸಾಂಪ್ರದಾಯಿಕ ಮತಗಳು ಚದುರದಂತೆ ನೋಡಿಕೊಳ್ಳಲು ಒತ್ತು ನೀಡಿದರು.

ಶಿವಮೊಗ್ಗದಲ್ಲಿ ಸೋಮವಾರ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಬಳಿಕ ಸಂಜೆ ಬೆಳಗಾವಿಯ ಮಾಲಿನಿ ಸಿಟಿ(Malini city)ಯಲ್ಲಿ .2,240 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಚಾಲನೆ ನೀಡಿ ಮಾತನಾಡಿದರು. ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಅವರು, ಕರ್ನಾಟಕದ ನಾಯಕರನ್ನು ಕಾಂಗ್ರೆಸ್‌ ಪರಿವಾರ ನಿರ್ಲಕ್ಷ್ಯ ಮಾಡಿ, ಅವಮಾನ ಮಾಡುತ್ತಲೇ ಬಂದಿದೆ. ನಾಯಕರನ್ನು ಅವಮಾನ ಮಾಡುವುದೇ ಕಾಂಗ್ರೆಸ್‌ನ ಸಂಸ್ಕೃತಿ. ಕಾಂಗ್ರೆಸ್‌ ಪರಿವಾರ ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್‌.ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ ಅವರನ್ನು ಅವಮಾನ ಮಾಡಿತ್ತು. ಇದನ್ನು ಕರ್ನಾಟಕದ ಜನ ಈಗಲೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

100 ಮೋದಿ, ಶಾ ಬಂದ್ರೂ 2024ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದನ್ನ ತಪ್ಪಿಸೋಕೆ ಆಗಲ್ಲ: ಖರ್ಗೆ!

ನನ್ನ ಸಾವು ಬಯಸ್ತಾರೆ:

ದೇಶದ ಹಲವು ರಾಜ್ಯಗಳಂತೆ ಕರ್ನಾಟಕದಲ್ಲಿಯೂ ವಂಶಾಡಳಿತ ರಾಜಕಾರಣವಿದೆ. ಅದನ್ನು ನಿರ್ಮೂಲನೆ ಮಾಡಬೇಕಿದೆ ಎಂದರು. ಇದು ಮೋದಿ ಸರ್ಕಾರ. ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಕಾಂಗ್ರೆಸ್‌ನವರಿಗೆ ತೀವ್ರ ನಿರಾಸೆಯಾಗಿದೆ. ಮೋದಿ ಇದ್ದರೆ ನಮಗೇನೂ ಆಗಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಅವರು ಮೋದಿ ಸಾಯಲಿ ಎಂದು ಅಪೇಕ್ಷೆ ಪಡುತ್ತಾರೆ. ಕೆಲವರು ಹಳ್ಳ ತೋಡುವುದರಲ್ಲಿ ಕಾರ್ಯನಿರತರಾಗಿದ್ದಾರೆ. ಆದರೆ, ದೇಶದ ಜನರು ಮತ್ತೆ ಕಮಲವನ್ನು ಅರಳಿಸುತ್ತಿದ್ದಾರೆ. ಸತ್ಯದ ಹಾದಿಯಲ್ಲಿ ನಡೆದಾಗ ಯಾವುದೇ ತೊಂದರೆಗಳಾಗುವುದಿಲ್ಲ. ಮೋದಿ ಜೀವಂತವಾಗಿರುವವರೆಗೂ ಅವರ ಆಟ ನಡೆಯುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

Latest Videos
Follow Us:
Download App:
  • android
  • ios