* ಪ್ರತಿ ಸದಸ್ಯ 3 ವೋಟು ತಂದರೆ 1.80 ಕೋಟಿ ಮತ ಕಾಂಗ್ರೆಸ್ಸಿಗೆ* ಕಾಂಗ್ರೆಸ್ಸಿಗರ ಕಾಲೇಜಲ್ಲೇ ಪ್ರವೇಶಿಸಲು ಬಿಡಲ್ಲ: ಎನ್‌ಎಸ್‌ಯುಐ ದೂರು* ಹಳ್ಳಿ-ಹಳ್ಳಿಗೆ ತೆರಳಿ ಬಾಯಿ ಮಾತಿನ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಬೇಕು
ಬೆಂಗಳೂರು(ಏ.02): ‘ರಾಜ್ಯದಲ್ಲಿ 60 ಲಕ್ಷ ಮಂದಿ ಕಾಂಗ್ರೆಸ್ ಸದಸ್ಯತ್ವ(Congress Membership) ಪಡೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಹೇಳಿದ್ದಾರೆ. 60 ಲಕ್ಷ ಮಂದಿ ತಲಾ 3 ಮಂದಿಯಿಂದ ಮತ ಹಾಕಿಸಿದರೂ 1.80 ಕೋಟಿ ಮತಗಳಿಂದ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದುಬಿಡುತ್ತದೆ. ನಾಯಕರ ಒತ್ತಡದಿಂದ ಕೆಲವೊಮ್ಮೆ ಸಂಖ್ಯೆ ಹೆಚ್ಚಾಗಿರಬಹುದು. ನೈಜ ನೋಂದಣಿಗೆ ಒತ್ತು ನೀಡಿ.’ ಹೀಗಂತ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಸಲಹೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ನೈಜ ಸದಸ್ಯತ್ವ ನೋಂದಣಿ ನಡೆಯಬೇಕು. ಹಳ್ಳಿ-ಹಳ್ಳಿಗೆ ತೆರಳಿ ಬಾಯಿ ಮಾತಿನ ಪ್ರಚಾರಕ್ಕೆ(Campaign) ಹೆಚ್ಚು ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. ಯಾವ ಜನ ನಿಮ್ಮ ಹಿಂದೆ ನಿಂತು ಶಕ್ತಿ ತುಂಬಿದ್ದಾರೋ ಅವರ ಪರವಾಗಿ ಮಾತನಾಡುವುದನ್ನು ನಾವು ಕಲಿಯಬೇಕು. ಅಲ್ಪಸಂಖ್ಯಾತರು, ತುಳಿತಕ್ಕೆ ಒಳಗಾದವರ ಜತೆ ನಿಲ್ಲಬೇಕು. ಇಲ್ಲದಿದ್ದರೆ ಅವರು ನಮ್ಮ ಜತೆ ಬರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಟಾರ್ಗೆಟ್ 150, ವಿಧಾನಸಭಾ ಚುನಾವಣೆಗೆ ಮೂವರು ನಾಯಕರ ನೇತೃತ್ವ!
ರಾಜಕೀಯಕ್ಕೆ(Politics) ಬಂದು 55 ವರ್ಷವಾಗಿದೆ. ದೀನದಲಿತರು, ರೈತರು, ಬಡವರನ್ನು ನಾವು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು. ಈ ಗುರಿ ತಲುಪಿದರೆ ಮಾತ್ರ ನಾವು ಅಧಿಕಾರ ಹಿಡಿಯಲು ಸಾಧ್ಯ. ಇಲ್ಲದಿದ್ದರೆ ಕಷ್ಟವಿದೆ ಸಲಹೆ ನೀಡಿದರು.
ರಾಹುಲ್ ಸಭೆಗಳಿಗೆ ಜಮೀರ್ ಗೈರು
ರಾಹುಲ್ ಗಾಂಧಿ(Rahul Gandhi) ಅವರೊಂದಿಗಿನ ಅಲ್ಪಸಂಖ್ಯಾತರ ಸಭೆ ಕುರಿತು ಮಾಹಿತಿ ನೀಡದ ಕೆಪಿಸಿಸಿ ಪದಾಧಿಕಾರಿಗಳ ಬಗ್ಗೆ ಮುನಿಸಿಕೊಂಡಿರುವ ಜಮೀರ್ ಅಹಮದ್ ಖಾನ್(Zameer Ahmed Khan) ಶುಕ್ರವಾರ ದಿನಿವಿಡೀ ನಡೆದ ರಾಹುಲ್ ಗಾಂಧಿ ಅವರ ಸರಣಿ ಸಭೆಗಳಿಂದ ದೂರ ಉಳಿದಿದ್ದು, ಕುತೂಹಲ ಮೂಡಿಸಿದೆ. ಅಲ್ಪಸಂಖ್ಯಾತರ ಸಭೆ ಕುರಿತು ಮಾಹಿತಿ ನೀಡದೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಭೆ ನಡೆಸಲು ಅವಕಾಶ ಮಾಡಿಕೊಟ್ಟಪಕ್ಷದ ನಾಯಕರ ಮೇಲೆ ಅವರು ಮುನಿಸಿಕೊಂಡಿದ್ದಾರೆ. ಇನ್ನು ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿರುವ ಎಸ್.ಆರ್. ಪಾಟೀಲ್ ಅವರು ಸಭೆಗೆ ಗೈರಾಗಿದ್ದರು.
ಮಧ್ಯರಾತ್ರಿ ರಾಹುಲ್ ಜಿಮ್, ವಾಕಿಂಗ್!
ಗುರುವಾರ ದಿನವಿಡೀ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ಗುರುವಾರ ರಾತ್ರಿ 11 ಗಂಟೆಯಲ್ಲಿ 1 ಗಂಟೆ ಕಾಲ ಅಶೋಕ ಹೋಟೆಲ್‌ನಲ್ಲಿ ಜಿಮ್ ಮಾಡಿದ್ದು, ಬಳಿಕ ಕುಮಾರಕೃಪ ಅತಿಥಿಗೃಹದಲ್ಲಿ ಮಧ್ಯರಾತ್ರಿ 12 ಗಂಟೆಯಿಂದ 2 ಗಂಟೆವರೆಗೆ ವಾಕಿಂಗ್ ಮಾಡಿದರು ಎಂದು ಮೂಲಗಳು ತಿಳಿಸಿವೆ. ದಿನಕ್ಕೆ ಇಷ್ಟು ದೈಹಿಕ ವ್ಯಾಯಾಮ, ಕಾಲ್ನಡಿಗೆ ರೂಢಿಸಿಕೊಂಡಿರುವ ರಾಹುಲ್ ಗಾಂಧಿ ಅರ್ಧರಾತ್ರಿ ದೈಹಿಕ ಕಸರತ್ತು ನಡೆಸುವ ಮೂಲಕ ಗುರುವಾರದ ಪಾಲಿನ ವ್ಯಾಯಾಮವನ್ನು ಪೂರ್ಣಗೊಳಿಸಿದರು.
ಕಪಿಲ್ ಸಿಬಲ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ!
ಕಾಂಗ್ರೆಸ್ಸಿಗರ ಕಾಲೇಜಲ್ಲೇ ಪ್ರವೇಶಿಸಲು ಬಿಡಲ್ಲ: ಎನ್‌ಎಸ್‌ಯುಐ ದೂರು
ಕಾಂಗ್ರೆಸ್ ನಾಯಕರ ಮಾಲೀಕತ್ವದ ಶಾಲಾ-ಕಾಲೇಜುಗಳಲ್ಲೇ ಎನ್‌ಎಸ್‌ಯುಐ(NSUI) ಕಾರ್ಯಕರ್ತರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ರಾಹುಲ್ ಗಾಂಧಿಗೆ ದೂರು ನೀಡಿದ ಘಟನೆ ನಡೆಯಿತು.
ಮುಂಚೂಣಿ ಘಟಕಗಳ ನಾಯಕರೊಂದಿಗಿನ ಸಭೆಯ ವೇಳೆ ಕೀರ್ತಿ ಅವರು, ರಾಜ್ಯದ ಹಲವು ಕಾಂಗ್ರೆಸ್ ನಾಯಕರು ದೊಡ್ಡ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದಾರೆ. ಆದರೆ, ಸಂಸ್ಥೆಗಳು ನಡೆಸುವ ಶಾಲಾ-ಕಾಲೇಜು ಕ್ಯಾಂಪಸ್‌ಗೆ ಎನ್‌ಎಸ್‌ಯುಐಗೆ ಪ್ರವೇಶ ನೀಡುತ್ತಿಲ್ಲ. ಕಾಂಗ್ರೆಸ್ ನಾಯಕರು ನಡೆಸುವ ಕಾಲೇಜುಗಳಿಗೆ ಪ್ರವೇಶ ನೀಡದಿದ್ದರೆ ವಿದ್ಯಾರ್ಥಿ ಕಾಂಗ್ರೆಸ್ ಅನ್ನು ಬೆಳೆಸುವುದು ಹೇಗೆ ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಈ ಬಗ್ಗೆ ಗಮನ ಹರಿಸುವಂತೆ ರಾಹುಲ್ ಗಾಂಧಿ ಅವರು ಕೆಪಿಸಿಸಿ(KPCC) ನಾಯಕತ್ವಕ್ಕೆ ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.
