ಆಸೆಯಿರುವ ಹಿರಿಯರನ್ನೇ ಸಚಿವರನ್ನಾಗಿಸಿ: ಶಾಸಕ ರಾಜೂಗೌಡ
ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಪ್ರತಿಕ್ರಿಯಿಸಿದ್ದಾರೆ. ಭಾನುವಾರ ಶಹಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜೂಗೌಡ, ಮಂತ್ರಿ ಎಂದನಿಸಿಕೊಳ್ಳಲು ಮಾತ್ರ ಸಚಿವರಾಗಬೇಕು, ಸಚಿವರಾಗುವ ಆಸೆಯಿರುವ ಹಿರಿಯರನ್ನು ಸಚಿವರನ್ನಾಗಿ ಮಾಡಿ ಎಂದು ಸಿಎಂ ಒತ್ತಾಯಿಸುವುದಾಗಿ ತಿಳಿಸಿದರು.
ಯಾದಗಿರಿ (ಜ.09): ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ, ಸುರಪುರ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ಪ್ರತಿಕ್ರಿಯಿಸಿದ್ದಾರೆ. ಭಾನುವಾರ ಶಹಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಜೂಗೌಡ, ಮಂತ್ರಿ ಎಂದನಿಸಿಕೊಳ್ಳಲು ಮಾತ್ರ ಸಚಿವರಾಗಬೇಕು, ಸಚಿವರಾಗುವ ಆಸೆಯಿರುವ ಹಿರಿಯರನ್ನು ಸಚಿವರನ್ನಾಗಿ ಮಾಡಿ ಎಂದು ಸಿಎಂ ಒತ್ತಾಯಿಸುವುದಾಗಿ ತಿಳಿಸಿದರು.
ಈಗ ನಾವು ಚುನಾವಣೆ ಮೂಡ್‌ನಲ್ಲಿದ್ದೀವಿ, ಚುನಾವಣೆಗೆ ಎಲ್ಲ ರೀತಿಯ ಸಜ್ಜಾಗಿದ್ದೇವೆ, ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದು ಕೆಲಸ ಮತ್ತು ಸಾಧನೆ ಮಾಡಬೇಕು ಎಂದ ರಾಜೂಗೌಡ, ಸಚಿವ ಸ್ಥಾನ ವಿಚಾರವಾಗಿ ಮುಂದೆ ನೋಡೋಣ ಎಂದು ಸಿಎಂಗೆ ಹೇಳಿದ್ದೀನಿ ಎಂದರು. ಬಸವರಾಜ ಬೊಮ್ಮಾಯಿ ಅವರು ಸಿಎಂ ಆದಾಗ ಅವಕಾಶ ಕೊಟಿದ್ದರೆ ಅಭಿವೃದ್ಧಿ ಮಾಡಬಹುದಿತ್ತು, ಈಗ ನಿಗಮ-ಮಂಡಳಿಯಲ್ಲಿಯೇ ಒಳ್ಳೆಯ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ, ನಮ್ಮ ನಿಗಮದಿಂದ ಕಲ್ಯಾಣ ಕರ್ನಾಟಕಕ್ಕೆ 2 ಸಾವಿರ ಕೋಟಿ ರು.ಗಳ ಅನುದಾನ ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಹಾಗೂ ಮಂತ್ರಿಗಳು ಒಳ್ಳೆಯ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದರು.
ದಲಿತ ಮತಗಳು ಬಿಜೆಪಿಗೆ ಹೆಚ್ಚು ಬರುವಂತೆ ಸಂಘಟಿಸಿ: ಎಸ್ಸಿ ಮೋರ್ಚಾ ಅಧ್ಯಕ್ಷ ಲಾಲ್ ಸಿಂಗ್ ಆರ್ಯ
ಸ್ಯಾಂಟ್ರೋ ರವಿ ಅರೆಸ್ಟ್ ಮಾಡದಿದ್ದರೆ ಜನರಿಗೆ ಉತ್ತರಿಸೋದು ಕಷ್ಟ: ‘ಸ್ಯಾಂಟ್ರೋ’ ರವಿ ಜೊತೆ ಬಿಜೆಪಿ ನಾಯಕರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಸ್ಯಾಂಟ್ರೋ’ ರವಿ ಅಂತ ಇತ್ತೀಚೆಗೆ ಹೆಸರು ಕೇಳುತ್ತಿದ್ದೇವೆ, ಮೊಬೈಲ್ ಚಿತ್ರೀಕರಣ ನಿಜ ಅಂತ ತಿಳಿದುಕೊಳ್ಳಲು ಆಗಲ್ಲ. ಆದರೆ, ಆಫೀಸರ್ ಜೊತೆ ಮಾತನಾಡಿದ ವರ್ತನೆ ನೋಡಿದರೆ, ಒಬ್ಬ ಡಿವೈಎಸ್ಪಿಗೆ ಆ ಲೆವಲ್‌ಗೆ ಮಾತಾಡುತ್ತಾನೆ ಅಂದರೆ ಅನುಮಾನ ಬರುತ್ತದೆ ಎಂದ ರಾಜೂಗೌಡ, ಅಂತಹವರು ಯಾರೇ ಇರಲಿ ಸರ್ಕಾರ ಕೂಡಲೇ ಅರೆಸ್ಟ್ ಮಾಡಬೇಕು. ಇಂತಹವರಿಗೆ ಅರೆಸ್ಟ್ ಮಾಡದಿದ್ದರೆ ಜನಸಾಮಾನ್ಯರಿಗೆ ಉತ್ತರ ಕೊಡುವುದು ಕಷ್ಟಆಗುತ್ತದೆ ಎಂದರು. ಇಂತಹವರನ್ನು ಸ್ವಲ್ಪ ಚೆನ್ನಾಗಿ ರಿಪೇರಿ ಮಾಡಬೇಕು, ಇಲ್ಲದಿದ್ದರೆ ಎಲ್ಲರೂ ಈ ರೀತಿ ಮಾಡುತ್ತಾರೆ ಎಂದ ಶಾಸಕ ರಾಜೂಗೌಡ, ಸಚಿವ ಅಥವಾ ಶಾಸಕ ಆಗಲು ಬಹಳಷ್ಟುಪರಿಶ್ರಮ ಇರುತ್ತದೆ. ಸ್ಯಾಂಟ್ರೋ ರವಿ ಅವನ ಹೆಂಡತಿಗೂ ಮೋಸ ಮಾಡಿದ್ದಾನೆ, ಅರೆಸ್ಟ್ ಮಾಡಬೇಕು ಎಂದರು.
ವಿಧಾನಸೌಧದಲ್ಲಿ 10 ಲಕ್ಷ ರು.ಗಳ ತೆಗೆದುಕೊಳ್ಳಲು ಸಚಿವರು ಅಷ್ಟು ದಡ್ಡರಿಲ್ಲ: ವಿಧಾನಸೌಧದೊಳಗೆ ಬರುತ್ತಿದ್ದ ಎಂಜಿನೀಯರ್ ಬಳಿ 10 ಲಕ್ಷ ರು.ಗಳ ಜಪ್ತಿ ಪ್ರಕರಣ ಕುರಿತು ಮಾತನಾಡಿದ ಅವರು, ವಿಪಕ್ಷದವರಿಗೆ ಬೇರೆ ಕೆಲಸ ಇಲ್ಲ ಆರೋಪ ಮಾಡುತ್ತಾರೆ. 10 ಲಕ್ಷ ರು. ಸಿಕ್ಕಿದೆ ಅಂತ ಆರೋಪ ಮಾಡಿದ್ದರು. ಸಚಿವರೊಬ್ಬರು 10 ಲಕ್ಷ ರು.ಗಳನ್ನು ವಿಧಾನಸೌಧದಲ್ಲಿ ತೆಗೆದುಕೊಳ್ಳಲು ಅಷ್ಟುದಡ್ಡರಿಲ್ಲ. ಯಾಕೆಂದರೆ ಅಲ್ಲಿ ಸ್ಕಾ್ಯನ್ ಆಗಿ ಬರುತ್ತೆ ಅಂತ ಎಲ್ಲರಿಗೂ ಗೊತ್ತಿರುತ್ತದೆ ಎಂದ ಅವರು, ತೆಗೆದುಕೊಳ್ಳೋದೇ ಇದ್ದರೆ ಬೇರೆ ಬೇರೆ ಕಡೆಗಳಲ್ಲಿ ಇಸಿದುಕೊಳ್ಳುತ್ತಾರೆ. ಇದೆಲ್ಲ ವಿಪಕ್ಷದವರ ಸುಳ್ಳು ಆರೋಪ ಎಂದರು.
ಡಾ.ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣ ಉದ್ಘಾಟಿಸಿದ ಸಿದ್ದಲಿಂಗ ಮಹಾಸ್ವಾಮೀಜಿ
ಐಕ್ಯತಾ ಸಮಾವೇಶದ ವಿರುದ್ಧ ಕಿಡಿ: ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ಎಸ್ಸಿ/ಎಸ್ಟಿಐಕ್ಯತಾ ಸಮಾವೇಶದ ಬಗ್ಗೆ ಕಿಡಿ ಕಾರಿದ ರಾಜೂಗೌಡ, ಎಸ್ಸಿ/ಎಸ್ಟಿಅವರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಪ್ರೀತಿ ಇದ್ದರೆ ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ ಎಂದು ಪ್ರಶ್ನಿಸಿ, ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದು ಕಾಂಗ್ರೆಸ್‌ನವರು ಹೇಳಿದ್ದರು, ಮೀಸಲಾತಿ ತೆಗೆಯುತ್ತಾರೆ ಅಂತ ಹೇಳಿದ್ದರು. ಆದರೆ, ಮೀಸಲಾತಿ ಹೆಚ್ಚು ಮಾಡಿದ್ದೀವಿ ಎಂದರು. ಕಾಂಗ್ರೆಸ್ ಯಾವ ಕಾರ್ಡ್ ಬಳಸಿದರೂ ಅಟ ನಡೆಯಲ್ಲ, ಕಾಂಗ್ರೆಸ್ ಪಕ್ಷ ಜೀವಂತ ಇರುವುದೇ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಂದ ಆದರೂ, ಇವರಾರಯರಿಗೂ ಅನುಕೂಲ ಮಾಡಿಲ್ಲ. ಅಲ್ಪಸಂಖ್ಯಾತರು ಹೇಗಿದ್ದರೂ ಕಟ್ಟಾ ಫಾಲೋವರ್ಸ್ ಇದ್ದು, ವೋಟ್ ಹಾಕುತ್ತಾರೆ ಎನ್ನುವ ಭ್ರಮೆ ಅವರದ್ದು. ಇವತ್ತು ಎಸ್ಸಿ, ಎಸ್ಟಿ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಜಾಣರಾಗಿದ್ದಾರೆ, ಕಾಂಗ್ರೆಸ್‌ನವರ ಆಟ ನಡೆಯೋಲ್ಲ ಎಂದರು.