ಮೇಲುಕೋಟೆ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಮಾಡಿ: ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ದರ್ಶನ್‌

ಮೇಲುಕೋಟೆಯ ಅಭಿವೃದ್ಧಿಗೆ ಮೊದಲು ಮಾಸ್ಟರ್‌ ಪ್ಲಾನ್‌ ಮಾಡಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ನೀಡಿದರೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸೋಣ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Make a master plan for Melukote development Says MLA Darshan Puttannaiah gvd

ಮೇಲುಕೋಟೆ (ಮೇ.24): ಮೇಲುಕೋಟೆಯ ಅಭಿವೃದ್ಧಿಗೆ ಮೊದಲು ಮಾಸ್ಟರ್‌ ಪ್ಲಾನ್‌ ಮಾಡಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ನೀಡಿದರೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸೋಣ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೇಲುಕೋಟೆ ಆಡಳಿತ ಕಚೇರಿಯ ಆವರಣದಲ್ಲಿ ಸಾರ್ವಜನಿಕರಿಂದ ಹಾಗೂ ದೇವಾಲಯದ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರುರು, ಮೇಲುಕೋಟೆಯಲ್ಲಿ ಅರ್ಧಕ್ಕೆ ಕೆಲಸ ನಿಲ್ಲಿಸಿದ್ದ ಇಸ್ಫೋಸಿಸ್‌ ಸುಧಾಮೂರ್ತಿಯವರನ್ನು ಸಹ ಮನವೊಲಿಸಿದ್ದು ನಮ್ಮೊಡನೆ ಅಭಿವೃದ್ಧಿಕಾರ್ಯಗಳಿಗೆ ಕೈಜೋಡಿಸಲಿದ್ದಾರೆ. 

ಹೀಗಾಗಿ ಶುದ್ಧೀಕರಿಸಿದ ಕುಡಿಯುವ ನೀರಿನ ಘಟಕಗಳು ಮತ್ತು ಶೌಚಾಲಯಗಳು ಎಲ್ಲಿರಬೇಕು ಯಾವ ವಿನ್ಯಾಸ ಇರಬೇಕು ಅಂದಾಜು ವೆಚ್ಚ ಎಷ್ಟು? ಯಾವ ಇಲಾಖೆಯಿಂದ ಅನುಷ್ಠಾನಗೊಳಿಸಬೇಕು ಎಂಬುದನ್ನು ಸಿದ್ಧ ಮಾಡಿ ಭಕ್ತರಿಗೆ ವಸತಿಗೃಹಗಳನ್ನು ಎಲ್ಲಿ ನಿರ್ಮಾಣಮಾಡಬೇಕು ಪಾರ್ಕಿಂಗ್‌ ಗೆ ಶನಿವಾರ ಭಾನುವಾರ ಯಾವಸ್ಥಳ ನಿಗದಿ ಮಾಡಬೇಕು ವಾರದದಿನಗಳಲ್ಲಿ ಎಲ್ಲಿ ಅವಕಾಶ ಕಲ್ಪಿಸಬೇಕು ದೇವಾಲಯಕ್ಕೆ ಪೊಲೀಸ್‌ ಭದ್ರತೆ ಬೇಕೆ ನಿರಂತರ ಸ್ವಚ್ಚತೆಗೆ ಯಾವ ಕ್ರಮ ಅನುಸರಿಸಬೇಕು. ಭಕ್ತರಿಗೆ ಯಾವ ಯಾವ ಸೌಲಭ್ಯಗಳ ಅಗತ್ಯವಿದೆ ಎಂಬ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಂದಾಜು ವೆಚ್ಚದೊಡನೆ ಪಕ್ಕ ಯೋಜನೆ ಸಿದ್ಧ ಮಾಡಬೇಕು. 

ಸೋತರೆ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದೆ: ಶಾಸಕ ಚಲುವರಾಯಸ್ವಾಮಿ

ನೀಲನಕ್ಷೆ ತಯಾರಿಸದೆ ಕೇವಲ ಪಟ್ಟಿಮಾಡಿದರೆ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಈ ಬಗ್ಗೆ ಆಡಳಿತಾಧಿಕಾರಿಗಳಾದ ಎಡಿಸಿ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು. ದೇವಾಲಯದ ಆದಾಯದ ಮೂಲಗಳನ್ನು ಹೆಚ್ಚಿಸಲು ಸೇವೆಗಳನ್ನು ಜಾರಿಗೆ ತನ್ನಿ. ವಂಶಪಾರಂಪರ್ಯ ಸೇವೆಗಳನ್ನು ಹೊರತು ಪಡಿಸಿ ಸರ್ಕಾರಿ ಸೇವೆಗಳನ್ನು ನಡೆಸಲು ಭಕ್ತರಿಗೆ ಅವಕಾಶ ನೀಡಿ ಪಟ್ಟಿಯನ್ನು ನನಗೆ ಸಲ್ಲಿಸಬೇಕು ಎಂದು ದೇವಾಲಯದ ಇಒ ಮಹೇಶ್‌ಗೆ ಸೂಚಿಸಿದರು. ರಾಜಕೀಯ ರಹಿತ ಕಾನೂನು ಬದ್ಧವಾಗಿ ದೇಗುಲದಲ್ಲಿ ಆಡಳಿತ ನಡೆಸಬೇಕು. ಬೆಟ್ಟದ ಗೋಪುರ ಮತ್ತು ಮೆಟ್ಟಿಲುಗಳ ಲೈಟ್‌ಗಳು, ಸಿಸಿ ಕ್ಯಾಮರಾ ನಾಳೆಯೇ ದುರಸ್ತಿ ಮಾಡಬೇಕು. ಡಿಜಿಟಲೀಕರಣ ಮಾಡಿ ಆಡಳಿತ ಪಾರದರ್ಶಕವಾಗಿ ನಿರ್ವಹಿಸಬೇಕು. ಅನ್ನದಾನ ಭವನ ಬಳಕೆ ಮಾಡಲೂ ತಕ್ಷಣ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ನಾನೇ ಕನಕಪುರಕ್ಕೆ ಬರುತ್ತೇನೆ, ನೀವು ಬೆಂಗಳೂರಿಗೆ ಬರಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದೇಕೆ?

ದೇವಾಲಯದ ಕೈಂಕರ್ಯಪರರ ಸಭೆ ನಡೆಸಿದ ಶಾಸಕರು ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್‌ ಗುರೂಜಿ, ಪರಿಚಾರಕ ಪಾರ್ಥಸಾರಥಿ, ರಾಮಾನುಜರ ಸನ್ನಿಧಿ ಅರ್ಚಕ ಆನಂದಾಳ್ವಾರ್‌ ಅವರ ಸಲಹೆಗಳನ್ನು ಪಡೆದರು. ಈ ವೇಳೆ ಪ್ರೀತಿ ಮಹದೇವ್‌, ರೈತಸಂಘದ ಮುಖಂಡರಾದ ಹೊಸಕೋಟೆ ವಿಜಯಕುಮಾರ್‌, ನ್ಯಾಮನಹಳ್ಳಿ ಶಿವರಾಮೇಗೌಡ ದಿಲೀಪ್‌, ಸುಬ್ಬಣ್ಣ ಕಾಡೇನಹಳ್ಳಿ ಚಂದ್ರ ಪ್ರಕಾಶ್‌ ನೀಲನಹಳ್ಳಿ ದೇವರಾಜು, ಕದಲಗೆರೆ ನವೀನ್‌ , ಮನ್ಮುಲ್‌ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಕಾಂಗ್ರೆಸ್‌ ಮುಖಂಡ ಯೋಗನರಸಿಂಹೇಗೌಡ, ಶೆಲ್ವನಾರಾಯಣ, ನಿವೃತ್ತ ಶಿಕ್ಷಕ ವೆಂಕಟರಾಮೇಗೌಡ ಯೋಗಿ ಇತರರು ಇದ್ದರು.

Latest Videos
Follow Us:
Download App:
  • android
  • ios