ಸೋತರೆ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದೆ: ಶಾಸಕ ಚಲುವರಾಯಸ್ವಾಮಿ

ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲದಿಂದ ಸೋತಿದ್ದರೆ ರಾಜಕೀಯ ನಿವೃತ್ತಿ ಪಡೆಯುಲು ನಿರ್ಧಾರ ಮಾಡಿದ್ದೆ ಎಂದು ಶಾಸಕ ಎನ್‌.ಚಲುವರಾಯಸ್ವಾಮಿ ಹೇಳಿದರು. 

I had decided to retire from politics if I lost Says MLA N Cheluvarayaswamy gvd

ಮದ್ದೂರು (ಮೇ.24): ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲದಿಂದ ಸೋತಿದ್ದರೆ ರಾಜಕೀಯ ನಿವೃತ್ತಿ ಪಡೆಯುಲು ನಿರ್ಧಾರ ಮಾಡಿದ್ದೆ ಎಂದು ಶಾಸಕ ಎನ್‌.ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಕೊಪ್ಪದಲ್ಲಿ ಮತದಾರರಿಗೆ, ಕಾಂಗ್ರೆಸ್‌ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ನಾಗಮಂಗಲದಲ್ಲಿ ಸ್ಪರ್ಧೆ ಮಾಡಬೇಡಿ ಎಂದು ಹಲವರು ತಿಳಿಸಿದ್ದರು. ಆದರೆ, ಕ್ಷೇತ್ರದ ಜನರ ಮೇಲೆ ವಿಶ್ಚಾಸವಿಟ್ಟು ಧೈರ್ಯವಾಗಿ ಚುನಾವಣೆ ಸ್ಪರ್ಧೆ ಮಾಡಿದೆ. ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿರುವುದು ಸಂತೋಷ ತಂದಿದೆ ಎಂದರು.

30 ತಿಂಗಳಲ್ಲಿ ಕೋವಿಡ್‌ನಿಂದ ಇಲ್ಲಿಯಾವರೆಗೆ ಒಂದೇ ಒಂದು ಕೆಡಿಪಿ ಸಭೆಯೂ ಮಾಡಿಲ್ಲ. ಇದು ಪ್ರಜಾಪ್ರಭುತ್ವ ದಲ್ಲಿ ಕಪ್ಪುಚುಕ್ಕೆ ಎಂದು ಮಾಜಿ ಶಾಸಕ ಸುರೇಶ್‌ಗೌಡರ ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಾಗಮಂಗಲದಲ್ಲಿ ಕಳೆದ 5 ವರ್ಷ ಯಾವುದೇ ಅಭಿವೃದ್ಧಿಯಾಗಿಲ್ಲ. ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಮುಂದಿನ ದಿನಗಳಲ್ಲಿ ಅದಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು. 23 ವರ್ಷಗಳಲ್ಲಿ 18 ವರ್ಷ ಬೇರೆ ಜಿಲ್ಲೆಯವರು ಆಡಳಿತ ನಡೆಸಿದ್ದಾರೆ. ಇದರಿಂದ ಅಭಿವೃದ್ಧಿ ಸಾಧ್ಯವಾಗಲಿಲ್ಲ.

ನಾನೇ ಕನಕಪುರಕ್ಕೆ ಬರುತ್ತೇನೆ, ನೀವು ಬೆಂಗಳೂರಿಗೆ ಬರಬೇಡಿ ಎಂದು ಡಿಕೆಶಿ ಮನವಿ ಮಾಡಿದ್ದೇಕೆ?

ಜಿಲ್ಲೆಯಲ್ಲಿ 6 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಜನರು ರಾಜಕೀಯ ಶಕ್ತಿ ತುಂಬಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಶ್ರಮಿಸಲಾಗುವುದು ಎಂದರು. ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ದೂರವಾಣಿ ಕರೆ ಮಾಡಿ ಶುಭಾಶಯಗಳು ತಿಳಿಸಿದರು. ಇದು ನನಗೆ ಅತೀವ ಸಂತೋಷ ತಂದಿದೆ ಎಂದು ತಿಳಿಸಿದರು. ಈ ವೇಳೆ ನಾಗಮಂಗಲ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೊಪ್ಪ ಕೆ.ಎನ್‌.ದಿವಾಕರ್‌ , ಡಿಸಿಸಿ ಬ್ಯಾಂಕ್‌ನಿರ್ದೇಶನ ಜೋಗಿಗೌಡ, ಮುಖಂಡರಾದ ಚಿಕ್ಕೊನಹಳ್ಳಿ ತಮ್ಮಯ್ಯ, ಘಟ್ಟಹಳ್ಳಿ ಹರೀಶ್‌, ರಾಮಚಂದ್ರ, ಮರಳಿಗ ಸ್ವಾಮಿ, ವಕೀಲ ರಾಮಕೃಷ್ಣ, ತಗ್ಗಹಳ್ಖಿ ಚಂದ್ರು ಇದ್ದರು.

10 ವರ್ಷ ಕಾಂಗ್ರೆಸ್‌ ವನವಾಸ: ಕಳೆದ 10 ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ಜಿಲ್ಲೆಯ ವನವಾಸದಲಿತ್ತು. ಆದರೆ, ಈ ಬಾರಿ ಅಧಿಕ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ನಮಗೆ ಶಕ್ತಿ ತುಂಬಿದ್ದಾರೆ. ಕಾಂಗ್ರೆಸ್‌ 5 ಗ್ಯಾರಂಟಿಗಳು ಜಾರಿಗೆ ಬರಲಿದೆ. ಇದರ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಮುಂದಿನ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಅನುಕೂಲವಾಗುವಂತ ಮಾಡಬೇಕು ಎಂದು ಹೇಳಿದರು.

ಪ್ರಗತಿ ಪರಿಶೀಲನಾ ಸಭೆ ನಡೆಯದಿರುವುದು ದೊಡ್ಡ ದುರಂತ: ಕ್ಷೇತ್ರದ ಈ ಹಿಂದಿನ ಬುದ್ದಿವಂತ ಶಾಸಕರು ತಾಲೂಕು ಮಟ್ಟದಲ್ಲಿ 3 ವರ್ಷ ಕಾಲ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ದುರಂತದ ಸಂಗತಿ ಎಂದು ನೂತನ ಶಾಸಕ ಎನ್‌.ಚಲುವರಾಯಸ್ವಾಮಿ ಬೇಸರ ಹೊರಹಾಕಿದರು. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳ ಪ್ರಥಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿಯೇ ಕೆಡಿಪಿ ಸಭೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಆದರೆ ಕಳೆದ 30ವರ್ಷಗಳ ನನ್ನ ರಾಜಕೀಯದ ಅನುಭವದಲ್ಲಿ ತಾಲೂಕು ಮಟ್ಟದಲ್ಲಿ 3 ವರ್ಷ ಕಾಲ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸದಿರುವ ರಾಜ್ಯದಲ್ಲಿ ಯಾವುದಾದರೂ ತಾಲೂಕಿದ್ದರೆ ಅದು ನಾಗಮಂಗಲ ತಾಲೂಕು ಒಂದೆ ಎನಿಸುತ್ತದೆ ಅಸಮಧಾನ ವ್ಯಕ್ತಪಡಿಸಿದರು. ಕೆಡಿಪಿ ಇರುವುದು ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡುವ ಸಲುವಾಗಿ. ಆದರೆ ಕೆಡಿಪಿ ಸಭೆಯೇ ನಡೆದಿಲ್ಲವೆಂದರೆ ಅಧಿಕಾರಿಗಳು ಹೋದಂತೆ ಬಿಟ್ಟಿದ್ದಾರೆ ಎಂದರ್ಥ. ಏಕೆ ಏನೆಂದು ಪ್ರಸ್ತಾಪ ಮಾಡುವ ಪರಿಸ್ಥಿತಿಯಿಲ್ಲ. ಅದು ಹಳೆಯ ಭಾಗ ಮೇ 13ರ ಹಿಂದಿನ ಅಧ್ಯಾಯ ಎಂದರು.

ಬಿಜೆಪಿ ಸೋಲಿನ ಹೊಣೆ ಎಲ್ಲರೂ ಹೊರಬೇಕು: ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದೇನು?

ಈಗ ಸರ್ಕಾರ ನಮ್ಮದು. ನಾನು ಈ ಕ್ಷೇತ್ರದ ಶಾಸಕ. ತಾಲೂಕಿನ ಯಾವುದೇ ಇಲಾಖೆಯ ಅಧಿಕಾರಿಗಳಲ್ಲಿ ವರ್ಗಾವಣೆಯ ಭೀತಿ ಕಾಡುತ್ತಿರಬಹುದು. ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕಾಗಿ ನಾನು ಶಾಸಕನಾಗಿಲ್ಲ. ಅಥವಾ ಹೊಸ ಸರ್ಕಾರ ಬಂದಿರುವುದು ಅಧಿಕಾರಿಗಳನ್ನು ಬದಲಾವಣೆ ಮಾಡಲಿಕ್ಕೋಸ್ಕರವಲ್ಲ. ಈ ರಾಜ್ಯದ ಜನರ ಬಯಕೆ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

Latest Videos
Follow Us:
Download App:
  • android
  • ios