ಅನರ್ಹ ಎಚ್ಚರಿಕೆ ಬಗ್ಗದ ಬಂಡಾಯ ಶಾಸಕರ ಬಣ ಮಹಾರಾಷ್ಟ್ರ ರಾಜಕೀಯ ಬಿರುಗಾಳಿ, ಪತನದ ಹಾದಿಯಲ್ಲಿ ಸರ್ಕಾರ ಹೊಸ ಅಸ್ತ್ರ ಪ್ರಯೋಗಿಸಿದ ಸಿಎಂ ಉದ್ಧವ್ ಠಾಕ್ರೆ
ನವದೆಹಲಿ(ಜೂ.26): ಮಹಾರಾಷ್ಟ್ರ ಮೈತ್ರಿ ಸರ್ಕಾರ ಪತನದ ಹಾದಿಯಲ್ಲಿದೆ. ಸಿಎಂ ಉದ್ಧವ್ ಠಾಕ್ರೆ ಇದೀಗ ಸರ್ಕಾರ ಉಳಿಸಿಕೊಳ್ಳುವ ಜೊತೆಗೆ ಪಕ್ಷವನ್ನೂ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದೀಗ ಸಿಎಂ ಉದ್ಧವ್ ಠಾಕ್ರೆ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಇದೀಗ ಬಂಡಾಯ ಶಾಕರ ಮನವೊಲಿಸಲು ಉದ್ಧವ್ ಠಾಕ್ರೆ ಪತ್ನಿ ರಶ್ನಿ ಠಾಕ್ಕೆ ಅಖಾಡಕ್ಕಿಳಿದಿದ್ದಾರೆ.
ರಶ್ನಿ ಠಾಕ್ರೆಗೆ ಇದೀಗ ಬಂಡಾಯ ಶಾಸಕರ ಮನ ಒಲಿಸುವ ಜವಾಬ್ದಾರಿ ನೀಡಲಾಗಿದೆ. ರಶ್ನಿ ಠಾಕ್ರೆ ನೇರವಾಗಿ ಬಂಡಾಯ ಶಾಸಕರ ಜೊತೆ ಮಾತನಾಡಿ ಮನವೊಲಿಸುವ ಕಸರತ್ತು ಇದಲ್ಲ. ಬದಲಾಗಿ ಬಂಡಾಯ ಶಾಸಕರ ಪತ್ನಿಯರಿಗೆ ಕರೆ ಮಾಡುತ್ತಿರುವ ರಶ್ನಿ ಠಾಕ್ರೆ ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಾಧುಗಳ ಶಾಪ, ಹನುಮಾನ್ ಭಕ್ತರ ಕೋಪ, ಉದ್ಧವ್ ಠಾಕ್ರೆ ಸರ್ಕಾರಕ್ಕೆ ಕಂಟವಾಯ್ತು 6 ತಪ್ಪು!
ಪತ್ನಿಯರ ಮೂಲಕ ಬಂಡಾಯ ಶಾಸಕರನ್ನು ಮತ್ತೆ ಪಕ್ಷಕ್ಕೆ ಕರೆ ತಂದು ಸರ್ಕಾರ ಹಾಗೂ ಪಕ್ಷವನ್ನು ಉಳಿಸಿಕೊಳ್ಳಲು ರಶ್ನಿ ಠಾಕ್ರೆ ಯತ್ನಿಸುತ್ತಿದ್ದಾರೆ. ಮತ್ತೊಂದೆಡೆಯಿಂದ ಉದ್ಧವ್ ಠಾಕ್ರೆ ಅನರ್ಹ ಅಸ್ತ್ರವನ್ನೂ ಪ್ರಯೋಗಿಸಿದ್ದಾರೆ. ಬೆದರಿಕೆ ಜೊತೆಗೆ ಭಾವನಾತ್ಮಕವಾಗಿಯೂ ಬಂಡಾಯ ಶಾಸಕರ ನಿರ್ಧಾರ ಬದಲಿಸಲು ಉದ್ದವ್ ಠಾಕ್ರೆ ಬಣ ಮುಂದಾಗಿದೆ.
ರಶ್ನಿ ಠಾಕ್ರೆ ಫೋನ್ ಮೂಲಕ ಬಂಡಾಯ ಶಾಸಕರ ಪತ್ನಿಯ ಮನವೊಲಿಕೆ ಮಾಡುತ್ತಿದ್ದಾರೆ. ಹಲವರನ್ನ ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಆದರೆ ಬಂಡಾಯ ಶಾಸಕರ ಪತ್ನಿಯರು ರಶ್ನಿ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಸಿದ್ಧಾಂತವನ್ನೇ ಮರೆತಿರುವ ಉದ್ಧವ್ ಠಾಕ್ರೆ ಜೊತೆ ಮತ್ತೆ ಮಾತುಕತೆಗೆ ಬಂಡಾಯ ಶಾಸಕರ ಪತ್ನಿಯರು ನಿರಾಕರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಬಂಡಾಯ ಶಾಸಕರ ಭದ್ರತೆ ವಾಪಸ್: ಶಿಂಧೆ ಆರೋಪ
ಪಕ್ಷದ ವಿರುದ್ಧ ಬಂಡೆದಿದ್ದಿರುವ ಶಿವಸೇನೆಯ 38 ಶಾಸಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀಡಿದ್ದ ಭದ್ರತೆ ಹಿಂದಕ್ಕೆ ಪಡೆಯಲಾಗಿದೆ ಎಂದು ಬಂಡಾಯ ನಾಯಕ ಏಕನಾಥ್ ಶಿಂಧೆ ಆರೋಪಿಸಿದ್ದಾರೆ. ಅಲ್ಲದೆ ಇದೊಂದು ರಾಜಕೀಯ ಹಗೆತನದ ಕೃತ್ಯ ಎಂದು ಕಿಡಿಕಾರಿದ್ದಾರೆ. ಆದರೆ ಈ ಆರೋಪವನ್ನು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅಲ್ಲಗಳೆದಿದ್ದಾರೆ. ಗೃಹ ಸಚಿವಾಲಯದಿಂದ ಇಂಥ ಯಾವುದೇ ಆದೇಶ ಹೊರಡಿಸಿಲ್ಲ. ಟ್ವೀಟರ್ ಮೂಲಕ ಮಾಡಲಾದ ಇಂಥ ಆರೋಪಗಳು ಸಂಪೂರ್ಣ ಸುಳ್ಳು ಎಂದು ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮ ಮುಂದುವರೆದಿದ್ದು, ಶಿವಸೇನೆಯ ವಿರುದ್ಧ ಬಂಡಾಯವೆದ್ದಿರುವ ಏಕನಾಥ ಶಿಂಧೆ ಸೇರಿದಂತೆ 16 ಶಾಸಕರಿಗೆ ಉಪ ಸ್ಪೀಕರ್ ಸೋಮವಾರ ಅನರ್ಹತೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನೋಟಿಸ್‌ಗೆ ಸೋಮವಾರದೊಳಗೆ ಉತ್ತರಿಸುವಂತೆ ಬಂಡಾಯ ಶಾಸಕರಿಗೆ ಸೂಚಿಸಲಾಗಿದೆ.
ಮಹಾರಾಷ್ಟ್ರ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕ: ಪ್ರಿಯಾಂಕ್ ಖರ್ಗೆ
ಶಾಸಕರ ಬಂಡಾಯದಿಂದ ಅಧಿಕಾರ ಕಳೆದುಕೊಳ್ಳುವ ಭೀತಿಗೆ ಸಿಲುಕಿಕೊಂಡಿರುವ ಶಿವಸೇನೆ, 16 ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಉಪಸ್ಪೀಕರ್ ಅವರಿಗೆ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಉಪ ಸ್ಪೀಕರ್ 16 ಮಂದಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಇದಕ್ಕೆ ಸೋಮವಾರ ಖುದ್ದಾಗಿ ಅಥವಾ ವಕೀಲರ ಮೂಲಕ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದ್ದಾರೆ.
