ಮುಂಬೈ[ನ.24]: ತನ್ನ ರಾಜಕೀಯ ಗುರು ಶರದ್‌ ಪವಾರ್‌ ವಿರುದ್ಧವೇ ಅಜಿತ್‌ ಪವಾರ್‌ ಬಂಡೆದಿದ್ದು ಭಾರೀ ಅಚ್ಚರಿಗೆ ಕಾರಣವಾಗಿದೆ. ಆದರೆ ಇದೇನು ದಿಢೀರ್‌ ಬೆಳವಣಿಗೆಯಲ್ಲ. ಹಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಇದೀಗ ಬೆಳಕಿಗೆ ಬಂದಿದೆ. ಈ ಬಂಡಾಯದ ಹಿಂದೆ ಹಲವು ಕಾರಣಗಳಿವೆ ಎನ್ನುತ್ತವೆ ಪಕ್ಷದ ಮೂಲಗಳು.

ಕ್ಯಾಬಿನೆಟ್ ಸಭೆ ಕರೆಯದೆ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದು ಹೇಗೆ?

1. 2019ರ ಲೋಕಸಭಾ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಜಿತ್‌ ಪವಾರ್‌ ಹಾಗೂ ಶರದ್‌ ಪುತ್ರಿ ಸುಪ್ರಿಯಾ ಸುಳೆ ನಡುವೆ ವೈಮನಸ್ಯ

2. ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ಪಾರ್ಥಗೆ ಟಿಕೆಟ್‌ ನಿರಾಕರಿಸಿದ್ದು. ಬಳಿಕ ಟಿಕೆಟ್‌ ಸಿಕ್ಕರೂ ಭಾರೀ ಮತಗಳಿಂದ ಅಂತರದಿಂದ ಸೋತಿದ್ದು, ಅಜಿತ್‌ ಪವಾರ್‌ಗೆ ಬೇಸರ ತರಿಸಿತ್ತು.

3. ಶಿವಸೇನೆ- ಕಾಂಗ್ರೆಸ್‌- ಎನ್‌ಸಿಪಿ ಸರ್ಕಾರದಲ್ಲಿ ತಮ್ಮ ವೈರಿ ಏಕನಾಥ್‌ ಶಿಂಧೆ ಸಿಎಂ ಆಗುವುದಕ್ಕೆ ಅಜಿತ್‌ ವಿರೋಧ. ಅವರ ನಾಯಕತ್ವದಲ್ಲಿ ಡಿಸಿಎಂ ಆಗಲು ನೇರಾನೇರ ತಿರಸ್ಕಾರ.

4. ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿ ಮುಂದುವರೆದರೆ, ತಮ್ಮ ವಿರುದ್ಧ ಈಗಾಗಲೇ ದಾಖಲಾಗಿರುವ ಕೇಸುಗಳಿಗೆ ಮರುಜೀವ ಸಿಕ್ಕು ಜೈಲು ಪಾಲಾಗುವ ಭೀತಿ ಅಜಿತ್‌ ಪವಾರ್‌ಗೆ ಕಾಡಿತ್ತು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: