ನಿಧಾನವಾಗಿ ರೂಪುಗೊಳ್ಳುತ್ತಿದೆ ತೃತೀಯ ರಂಗಕೆಸಿಆರ್ ರನ್ನು ಮುಂಬೈಗೆ ಆಹ್ವಾನಿಸಿದ ಮಹಾರಾಷ್ಟ್ರ ಸಿಎಂರಾಷ್ಟ್ರ ರಾಜಕಾರಣದಲ್ಲಿ ನಡೆಯುತ್ತಿದೆ ಬಿರುಸಿನ ಚಟುವಟಿಕೆ 

ಹೈದರಾಬಾದ್ (ಫೆ.16): ರಾಷ್ಟ್ರ ರಾಜಕಾರಣದಲ್ಲಿ 2024ರ ಲೋಕಸಭಾ ಚುನಾವಣೆಯ ( 2024 Lok Sabha polls) ಕುರಿತಂತೆ ದೊಡ್ಡ ಮಟ್ಟದ ಚಟುವಟಿಕೆಗಳು ಆಗತ್ತಿದ್ದು, ತೃತೀಯ ರಂಗ (Third Front) ರೂಪ ಪಡೆದುಕೊಳ್ಳುತ್ತಿರುವ ಬಗ್ಗೆ ಬಹುತೇಕ ಚರ್ಚೆ ಆಗುತ್ತಿದೆ. ಅದರಂತೆ, ಫೆಬ್ರವರಿ 20 ರಂದು ಮುಂಬೈನಲ್ಲಿ(Mumbai) ಕೆಸಿ ಚಂದ್ರಶೇಖರ್ ರಾವ್ (KCR, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Maharashtra Chief Minister Uddhav Thackeray )ಅವರನ್ನು ಭೇಟಿಯಾಗಲಿದ್ದಾರೆ. ಬಿಜೆಪಿಯೇತರ ಮುಖ್ಯಮಂತ್ರಿಗಳ ಸಭೆ ಬಹಳ ಕುತೂಹಲ ಕೆರಳಿಸಿದ್ದು ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ.

ಬಿಜೆಪಿಯ ಕೋಮುವಾದಿ ಮತ್ತು ವಿಭಜಕ ರಾಜಕೀಯದ ವಿರುದ್ಧ ಹೋರಾಟ ಆರಂಭಿಸಿರುವ ಕೆಸಿಆರ್ ಅವರಿಗೆ ಬೆಂಬಲ ನೀಡಲು ಸಿದ್ಧವಿರುವುದಾಗಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅದರೊಂದಿಗೆ ಇಬ್ಬರೂ ಮುಖ್ಯಮಂತ್ರಿಗಳು ದೇಶದಲ್ಲಿ ತೃತೀಯ ರಂಗವನ್ನು ನಿರ್ಮಿಸುವ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ನೊಂದಿಗೆ ಸೇರಿಕೊಂಡು ಯಾವುದೇ ರೀತಿಯ ರಂಗವನ್ನು ಸ್ಥಾಪನೆ ಮಾಡುವ ಉದ್ದೇಶವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee) ಸೋಮವಾರ ಘೋಷಣೆ ಮಾಡಿದ ಬೆನ್ನಲ್ಲಿಯೇ ಈ ಬೆಳವಣಿಗೆ ನಡೆದಿದೆ. ಯಾವುದೇ ಪ್ರಾದೇಶಿಕ ಸಂಘಟನೆಯು ಅದರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹಂಚಿಕೊಳ್ಳುವುದಿಲ್ಲ ಮತ್ತು "ಕಾಂಗ್ರೆಸ್ ತನ್ನದೇ ಆದ ದಾರಿಯಲ್ಲಿ ಹೋಗಬಹುದು" ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ (Telangana CM KCR), ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ (Tamil Nadu CM MK Stalin) ಅವರೊಂದಿಗೆ ಒಂದೇ ರೀತಿಯ ಯೋಚನೆಗಳನ್ನು ಹೊಂದಿರುವ ಮಮತಾ ಬ್ಯಾನರ್ಜಿ ಭಾನುವಾರ ಈ ಕುರಿತಂತೆ ಸಭೆ ನಡೆಸಿದ್ದಾರೆ.."ದೇಶದ ಫೆಡರಲ್ ರಚನೆಯನ್ನು ಒಡೆದು ಹಾಕಲಾಗಿದೆ. ದೇಶದ ಸಂವಿಧಾನವನ್ನು (Constitution ) ಕೆಡವಲಾಗುತ್ತಿದೆ. ಅದನ್ನು ರಕ್ಷಿಸಲು ನಾವೆಲ್ಲರೂ ಒಗ್ಗೂಡಬೇಕಾಗಿದೆ" ಎಂದು ಪಶ್ಚಿಮ ಬಂಗಾಳದ ನಾಲ್ಕು ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯನ್ನು ಗೆದ್ದ ಬಳಿಕ ಟಿಎಂಸಿ ಪಕ್ಷದ ಮುಖ್ಯಸ್ಥೆಯಾಗಿರುವ ಮತಾ ಬ್ಯಾನರ್ಜಿ ಹೇಳಿದ್ದಾರೆ. 2021ರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ಪಕ್ಷಕ್ಕೆ ಇದು ಮತ್ತೊಂದು ಹಿನ್ನಡೆ ಎನಿಸಿದೆ. "ನಾವು ಒಟ್ಟಾಗಿ ಫೆಡರಲ್ ರಚನೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ತಿಳುವಳಿಕೆಗೆ ಬರಬೇಕು" ಎಂದು ಅವರು ರಾವ್ ಮತ್ತು ಸ್ಟಾಲಿನ್ ಅವರಿಗೆ ದೂರವಾಣಿ ಕರೆಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

Wah... Taj ಗುಲ್ಮಾರ್ಗ್‌ನಲ್ಲಿ ಶೂನ್ಯವೆಚ್ಚದಲ್ಲಿ ನಿರ್ಮಾಣವಾಯ್ತು ಹಿಮದ ತಾಜ್‌ಮಹಲ್‌
ಗೋವಾದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್‌ನೊಂದಿಗೆ ಹೊರಗುಳಿದ ನಂತರ ವಿರೋಧ ಪಕ್ಷಗಳ ಒಕ್ಕೂಟವನ್ನು ರಚಿಸಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿರುವ ಬ್ಯಾನರ್ಜಿ, ಯಾವುದೇ ಪ್ರಾದೇಶಿಕ ಸಂಘಟನೆಯು ಪ್ರಮುಖ ವಿರೋಧ ಪಕ್ಷದೊಂದಿಗೆ ಸ್ನೇಹ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. "ಕಾಂಗ್ರೆಸ್ ತನ್ನ ದಾರಿಯಲ್ಲಿ ಹೋಗಬಹುದು, ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ" ಎಂದು ಅವರು ಪ್ರತಿಪಾದಿಸಿದರು. ವಿಶೇಷವೆಂದರೆ, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವು ಕಾಂಗ್ರೆಸ್ ಮೈತ್ರಿಕೂಟದ ಭಾಗವಾಗಿದೆ. ಬಿಜೆಪಿ ವಿರುದ್ಧ ವಿವಿಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳ ಭಾಗವಾಗಿ ಶೀಘ್ರದಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಟಿಎಂಸಿ ಮುಖ್ಯಸ್ಥರನ್ನು ಭೇಟಿ ಮಾಡುವುದಾಗಿ ಬ್ಯಾನರ್ಜಿಯವರೊಂದಿಗಿನ ದೂರವಾಣಿ ಕರೆ ಬಳಿಕ ಕೆಸಿಆರ್ ಹೇಳಿದ್ದರು.

ಸಂತ ರವಿದಾಸ್ ಮಂದಿರಕ್ಕೆ ಮೋದಿ ಭೇಟಿ, ಭಜನೆ, ಕೀರ್ತನೆಗೂ ಧ್ವನಿಗೂಡಿಸಿದ ಪ್ರಧಾನಿ!
"ಮಮತಾ ಬೆಹೆನ್ (ಮಮತಾ ಬ್ಯಾನರ್ಜಿ) ನನಗೆ ಕರೆ ಮಾಡಿದರು. ನಾವು ಫೋನ್‌ನಲ್ಲಿ ಚರ್ಚೆ ನಡೆಸಿದ್ದೇವೆ. ಅವರು ನನ್ನನ್ನು ಬಂಗಾಳಕ್ಕೆ ಕರೆದರು ಅಥವಾ ಅವರೇ ಹೈದರಾಬಾದ್‌ಗೆ ಬರುತ್ತಾರೆ. ಅವರು ಮುಜೆ ದೋಸಾ ಖಿಲಾವ್ ಎಂದು ಹೇಳಿದರು. ನಾನು ಬನ್ನಿ ಎಂದು ಹೇಳಿದ್ದೇನೆ. ಅವರು ಯಾವಾಗ ಬೇಕಾದರೂ ಬರಬಹುದು. ನಾವು ಚರ್ಚಿಸುತ್ತಿದ್ದೇವೆ . ರಾಷ್ಟ್ರದಾದ್ಯಂತ ಅನೇಕ ರಾಜಕೀಯ ನಾಯಕರಿದ್ದಾರೆ," ಎಂದು ಕೆಸಿಆರ್ ಹೇಳಿದ್ದು, ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರಸೇತರ ರಂಗದ ಕಲ್ಪನೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದರು.