* ಪಂಜಾಬ್‌ನಲ್ಲಿ ರಂಗೇರಿದ ಚುನಾವಣಾ ಅಖಾಡ* ಸಂತ ರವಿದಾಸ್ ಜಯಂತಿಯ ಸಂದರ್ಭದಲ್ಲಿ ಮಂದಿರಕ್ಕೆ ಭೇಟಿ ಕೊಟ್ಟ ಪಿಎಂ ಮೋದಿ* ಪ್ರಧಾನಿ ಮೋದಿ ಮಹಿಳೆಯರೊಂದಿಗೆ ಕುಳಿತು ಭಜನೆ ಕೀರ್ತನೆ
ಚಂಡೀಗಢ(ಫೆ.16): ಸಂತ ರವಿದಾಸ್ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕರೋಲ್‌ಬಾಗ್‌ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಮ್ ಧಾಮ್ ದೇವಾಲಯಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇದಾದ ಬಳಿಕ ದೇವಸ್ಥಾನದ ಆವರಣದಲ್ಲಿದ್ದ ಮಹಿಳೆಯರೊಂದಿಗೆ ಪ್ರಧಾನಿ ಕುಳಿತು ಭಜನೆ ಕೀರ್ತನೆ ಮಾಡಿದರು. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೇಳೆ ಅಲ್ಲಿ ನೆರೆದಿದ್ದ ಜನರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಅವರ ಜೊತೆ ಕುಳಿತು ಕೆಲಕಾಲ ಮಾತನಾಡುತ್ತಿದ್ದರು.
ಸಂತ ರವಿದಾಸ್ ಜಯಂತಿಯ ಸಂದರ್ಭದಲ್ಲಿ ಕರೋಲ್ ಬಾಗ್‌ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ದೇವಸ್ಥಾನದಲ್ಲಿ ಭಕ್ತರೊಂದಿಗೆ ಭಜನೆ ಕೀರ್ತನೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಈ ವೇಳೆ, ಪ್ರಧಾನಿ ಮೋದಿ ಭಕ್ತರೊಂದಿಗೆ ಕುಳಿತು ಮಂಜಿರಾ ನುಡಿಸುತ್ತಿರುವುದು ಕಂಡುಬಂದಿತು. ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಧಾನಿ ಮೋದಿ ದೇವಸ್ಥಾನದಲ್ಲಿ ಮಹಿಳೆಯರ ನಡುವೆ ಕುಳಿತು ಮಜಿಕಾ ಆಡುತ್ತಿರುವುದನ್ನು ನೀವು ನೋಡಬಹುದು. ಈ ಸಮಯದಲ್ಲಿ, ಮೋದಿ ಅವರೊಂದಿಗೆ ಮಾತನಾಡುತ್ತಿರುವುದನ್ನೂ ಕಂಡು ಬಂದಿದೆ.
ನಿನ್ನೆ ಮೊನ್ನೆ ಪ್ರಧಾನಿ ಮೋದಿ ಅವರು ಸಂತ ರವಿದಾಸ್ ಅವರನ್ನು ಪೂಜಿಸುತ್ತಿದ್ದ ಅನೇಕ ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು
"
ಈ ಬಗ್ಗೆ ಬರೆದುಕೊಂಡಿದ್ದ ಪ್ರಧಾನಿ ಮೋದಿ "ಇದು ಮಹಾನ್ ಸಂತ ಗುರು ರವಿದಾಸ್ ಜಿ ಅವರ ಜನ್ಮ ವಾರ್ಷಿಕೋತ್ಸವ. ಸಮಾಜದಿಂದ ಜಾತಿ, ಅಸ್ಪೃಶ್ಯತೆ ಮುಂತಾದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟ ರೀತಿ ಇಂದಿಗೂ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ, ಸಂತ ರವಿದಾಸ್ ಜಿ ಅವರ ಪವಿತ್ರ ಸ್ಥಳದ ಬಗ್ಗೆ ಕೆಲವು ವಿಷಯಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. 2016 ಮತ್ತು 2019 ರಲ್ಲಿ, ನಾನು ಇಲ್ಲಿ ಪೂಜೆ ಸಲ್ಲಿಸುವ ಮತ್ತು ಲಂಗರ್ ಮಾಡುವ ಭಾಗ್ಯವನ್ನು ಹೊಂದಿದ್ದೇನೆ. ಸಂಸದನಾಗಿ ಈ ಯಾತ್ರಾಸ್ಥಳದ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ನಿರ್ಧರಿಸಿದ್ದೆ ಎಂದು ಬರೆದಿದ್ದಾರೆ.
