Asianet Suvarna News Asianet Suvarna News

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ಲಾಭ: ಶಾಸಕ ಬಾಲಕೃಷ್ಣ

ಮಂತ್ರಿಗಿರಿ ಬಗ್ಗೆ ಪಕ್ಷ ಯಾವುದೇ ಆಶ್ವಾಸನೆ ನೀಡಿಲ್ಲ. ಆದರೆ, ತಾಯಿ ಆಶೀರ್ವಾದ ಮಾಡಿದರೆ ಸಚಿವನಾಗಬಹುದು ಎಂದ ಮಾಗಡಿ ಶಾಸಕ ಬಾಲಕೃಷ್ಣ 

Magadi Congress MLA Balakrishna Talks Over BJP JDS Alliance grg
Author
First Published Nov 15, 2023, 3:00 AM IST

ಹಾಸನ(ನ.15): ಹಾಸನಾಂಬೆ ಆಶೀರ್ವಾದ ಮಾಡಿದರೆ ನಾನು ಮಂತ್ರಿ ಆಗುತ್ತೇನೆ. ಆ ತಾಯಿಯ ಆಶೀರ್ವಾದ ಬೇಕಲ್ಲ. ಅದಕ್ಕಾಗೆ ಹಾಸನಾಂಬೆ ತಾಯೀನ ಕೇಳೋದಕ್ಕೆ ಬಂದಿದ್ದೇನೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.

ಹಾಸನಾಂಬೆ ದರ್ಶನದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಮಂತ್ರಿಗಿರಿ ಬಗ್ಗೆ ಪಕ್ಷ ಯಾವುದೇ ಆಶ್ವಾಸನೆ ನೀಡಿಲ್ಲ. ಆದರೆ, ತಾಯಿ ಆಶೀರ್ವಾದ ಮಾಡಿದರೆ ಸಚಿವನಾಗಬಹುದು ಎಂದರು.

ಜೆಡಿಎಸ್-ಬಿಜೆಪಿ ನಿಜವಾದ ಬಂಡವಾಳ ಶೀಘ್ರ ಹೊರಬರಲಿದೆ: ಸಚಿವ ಆರ್.ಬಿ.ತಿಮ್ಮಾಪುರ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಮಾತನಾಡಿ, ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವೇ ಆಗಿದೆ. ಜಾತ್ಯತೀತ ಮತಗಳು ಜೆಡಿಎಸ್‌ನಿಂದ ವಿಭಜನೆ ಆಗುತ್ತಿದ್ದವು. ಈಗ ಆ ಮತಗಳು ಸಂಪೂರ್ಣವಾಗಿ ನಮಗೆ ಬರುವುದರಿಂದ ನಮಗೆ ಅನುಕೂಲ ಆಗುತ್ತೆ. ಈ ಹಿಂದೆ ದೇವೇಗೌಡರೆ ನಾವು ಜಾತ್ಯತೀತ ನಿಲುವು ಇರುವವರು. ಬಿಜೆಪಿ ಜೊತೆ ಹೊಂದಾಣಿಕೆ ಬೇಡ ಎಂದಿದ್ದರು. ಇಂದು ಬಿಜೆಪಿ ಜೊತೆ ಹೋಗಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ ಎಂದರು.

Follow Us:
Download App:
  • android
  • ios