ನನ್ನ ಇಲಾಖೆ ಬಗ್ಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಹಳ ಖುಷಿ ಪಟ್ರು. ನನಗೆ ಏನು ಟಾರ್ಗೆಟ್ ಕೊಟ್ಟಿದ್ರು ಅದಕ್ಕಿಂತ ಹೆಚ್ಚಾಗಿ ಮಾಡ್ತಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರು (ಜು.15): ನನ್ನ ಇಲಾಖೆ ಬಗ್ಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಹಳ ಖುಷಿ ಪಟ್ರು. ನನಗೆ ಏನು ಟಾರ್ಗೆಟ್ ಕೊಟ್ಟಿದ್ರು ಅದಕ್ಕಿಂತ ಹೆಚ್ಚಾಗಿ ಮಾಡ್ತಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಭೆ ನಂತರ ಮಾತಾನಾಡಿದ ಅವರು, ಸಂವಿಧಾನ ಪೀಠಿಕೆ, ಅಕ್ಷರ ಅವಿಷ್ಕಾರ ಅಂತ 5 ಕೋಟಿ ವಿಶೇಷ ಅನುದಾನ ಇದೆ. 25% ಶಿಕ್ಷಣಕ್ಕೆ ಇಟ್ಟಿದ್ದಾರೆ, ಇದರ ಬಗ್ಗೆಯೂ ಚರ್ಚೆ ಆಗಿದೆ. ಇನ್ನೂ ಏನಾದ್ರೂ ಫಂಡ್ಸ್ ಬೇಕಾ ಅಂತ ಕೇಳಿದ್ರು, ಸಾಕು ಅಂದೆ. ಆ ಭಾಗದ ಶಾಸಕರೂ ಸಹಿತ 25% ಜಾಸ್ತಿನೇ ಕೊಡ್ತಿದ್ದಾರೆ ಅಂತ ಹೇಳಿದ್ದಾರೆ.
3 ಪರೀಕ್ಷಾ ಮಾದರಿಯ ವಿಧಾನವನ್ನ ಸುರ್ಜೇವಾಲಾ ತುಂಬಾ ಇಷ್ಟಪಟ್ಟರು. 3 ಪರೀಕ್ಷಾ ಮಾದರಿಯ ಪರೀಕ್ಷೆ ಕೊಟ್ಟಾಗ 84 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮಕ್ಕಳು ಪಾಸಾಗಿದ್ದನ್ನ ನೋಡಿ ಖುಷಿ ಪಟ್ಟರು. AIಗೆ ಹೆಚ್ಚು ಒತ್ತು ನೀಡಲು ಸಲಹೆ ನೀಡಿದ್ದಾರೆ. ಈ ಹಿಂದೆ ಸಾವಿರಾರು ಶಾಲೆಗಳಿಗೆ ಅನುದಾನ ಕೊರತೆ ಇತ್ತು. ನಾವು ಬಂದ್ಮೇಲೆ ವಿಕಾಸ್ ಯೋಜನೆಯಡಿ ಪೂರ್ಣ ಮಾಡಿದ್ದೇವೆ. ಸ್ವಲ್ಪ ಕಡಿಮೆ ಇದೆ, ಸಹಕಾರ ಕೊಡಿ ಅಂತ ಕೇಳಿದ್ದೇನೆ. ಈ ವರ್ಷ ಕಲಿಗೆಗೆ ಒತ್ತು ಕೊಡಿ ಅಂತ ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಪಕ್ಷದ ಆಂತರಿಕ ವಿಚಾರ ಚರ್ಚೆಗೆ ಆಹ್ವಾನ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದ ಮಧು ಬಂಗಾರಪ್ಪ, ಆ ಬಗ್ಗೆ ಏನೂ ಚರ್ಚೆ ಮಾಡಿಲ್ಲ. ನನ್ನ ಇಲಾಖೆಯಲ್ಲಿ ಏನು ಕೊರತೆ ಇತ್ತು ಕೇಳಿದ್ರು. ಅದನ್ನ ಕೇಳಿದ್ದೇನೆ, ಆದರೆ. ನನಗೇನು ಅನುದಾನದ ಕೊರತೆ ಇಲ್ಲ. ಅದನ್ನೆಲ್ಲ ಹೈಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ. ನನಗೆ ಬೇರೆಬೇರೆ ಕಡೆಯಿಂದ ಸಿಎಸ್‌ಆರ್ ಕಡೆಯಿಂದ ಅನುದಾನ ಬರುತ್ತಿದೆ. ಹೀಗಾಗಿ ಅನುದಾನ ಕೊರತೆ ಇಲ್ಲ ಅಂತ ಹೇಳಿದ್ದೇನೆ. ಇದನ್ನ ಕೇಳಿ ಖುಷಿ ಮಟ್ಟರು ಎಂದರು.
ಸಚಿವರ ಮೇಲೆ ಶಾಸಕರ ಆರೋಪ ವಿಚಾರವಾಗಿ ಆರೋಪ, ಪ್ರತ್ಯಾರೋಪವೆಲ್ಲ ಮಾಧ್ಯಮಗಳಲ್ಲಿ ಮಾತ್ರ. ಹಾಗೇನಾದ್ರೂ ಇದ್ರೆ ಅವರನ್ನ ಕರೆಸಿ ಹೇಳ್ತಾರೆ. ಈಗ ಅಂತಹ ಚರ್ಚೆಗಳು ಆಗಿಲ್ಲ. ಆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವ ಅವಶ್ಯಕತೆಯೂ ಇಲ್ಲ ಎಂದರು. ಡ್ಯಾಮೇಜ್ ಕಂಟ್ರೋಲ್‌ಗೆ ಸಚಿವರೊಂದಿಗೆ ಸಭೆ ವಿಚಾರವಾಗಿ ಅದೂ ಬಹುಶಃ ಹೆಚ್ಚಾಗಿ ಮಾಧ್ಯಮಗಳಲ್ಲಿಯೇ ಆಗಿರಬಹುದು. ನಮ್ಮಲ್ಲಾಗಿದ್ರೆ ಹೈಕಮಾಂಡ್ ಇದ್ದಾರೆ, ಅವರು ಸರಿ ಮಾಡ್ತಾರೆ. ಅದರ ಬಗ್ಗೆ ನಾನು ಚರ್ಚೆ ಮಾಡೋಕೆ ಹೋಗಲ್ಲ ಎಂದು ಹೇಳಿದರು.
