Asianet Suvarna News Asianet Suvarna News

Assembly election: ಕಟೀಲ್‌ಗೆ ಲವ್ ಜಿಹಾದ್, ಘರ್ ವಾಪ್ಸಿ ಹೊಸದಲ್ಲ: ಬಿ.ಕೆ. ಹರಿಪ್ರಸಾದ್‌ ಕಿಡಿ

ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಬೆಳೆದವರಿಗೆ ಹಾರ್ಡ್ ಕೋರ್ ಸಂಘದವರು ಸರಿಯಾದ ತರಬೇತಿ ಕೊಟ್ಟಿಲ್ಲ. ಆದ್ದರಿಂದ ಜನ ಸಾಮಾನ್ಯರ ಕಷ್ಟ ಗೊತ್ತಿಲ್ಲದವರಾಗಿದ್ದಾರೆ. ಅಲ್ಲಿಂದ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಸರ್ಕಾರ ಇರೋದೆ ದೌರ್ಜನ್ಯ ಮಾಡಲು ಎಂದು ತಿಳಿದಿದ್ದಾರೆ.

Love jihad ghar wapsi not new for Kateel BK Hariprasad Spark sat
Author
First Published Jan 4, 2023, 6:25 PM IST

ಬೆಂಗಳೂರು (ಜ.04): ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಬೆಳೆದವರಿಗೆ ಹಾರ್ಡ್ ಕೋರ್ ಸಂಘದವರು ಸರಿಯಾದ ತರಬೇತಿ ಕೊಟ್ಟಿಲ್ಲ. ಆದ್ದರಿಂದ ಜನ ಸಾಮಾನ್ಯರ ಕಷ್ಟ ಗೊತ್ತಿಲ್ಲದವರಾಗಿದ್ದಾರೆ. ಅಲ್ಲಿಂದ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಸರ್ಕಾರ ಇರೋದೆ ದೌರ್ಜನ್ಯ ಮಾಡಲು ಎಂದು ತಿಳಿದಿದ್ದಾರೆ. ಕಟೀಲ್‌ಗೆ ಲವ್ ಜಿಹಾದ್, ಘರ್ ವಾಪ್ಸಿ ಹೊಸದಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪಸ್ರಾದ್ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದ ಸಂದರ್ಭದಲ್ಲಿ ಇದೆಲ್ಲವೂ ಸಹಜ. ಬಿಜೆಪಿ ಅವರ ಸಾಧನೆ ಶೂನ್ಯ ಎಂದು ಕಟೀಲ್ ಅವರ ಹೇಳಿಕೆಯಿಂದ ಗೊತ್ತಾಗುತ್ತದೆ. ಜನ ಸಾಮಾನ್ಯರ ಕಷ್ಟ ಗೊತ್ತಿಲ್ಲದವರು ಸರ್ಕಾರ ಇರೋದೆ ದೌರ್ಜನ್ಯ ಮಾಡಲು ಎಂದು ತಿಳಿದುಕೊಂಡಿದ್ದಾರೆ.ಇವರೆಲ್ಲರೂ ವಾಟ್ಸಾಪ್‌ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡಿಕೊಂಡು ಬಂದಿದ್ದರಿಂದಲೇ ಜನ ಸಾಮಾನ್ಯರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಬಿಜೆಪಿ ಅಜೆಂಡಾ ಭಾವನೆ, ಕಾಂಗ್ರೆಸ್‌ ಅಜೆಂಡಾ ಬದುಕು: ಕಟೀಲ್‌ ವಿರುದ್ಧ ಡಿಕೆಶಿ ಕಿಡಿ

ಸಿಎಂ ನಾಯಿಮರಿ ಹೇಳಿಕೆಗೆ ಕ್ಷಮೆ ಅಗತ್ಯವಿಲ್ಲ: ರಾಜ್ಯದಲ್ಲಿ ಮುಖ್ಯಮಂತರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿ ಮಾತನಾಡಿದ ಸಿದ್ದರಾಮಯ್ಯ ಆಗಲಿ, ಕುಮಾರಸ್ವಾಮಿ ಅವರಾಗಲಿ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಅವರು ಬೊಮ್ಮಾಯಿ ಅವರ ಬಗ್ಗೆ ಮಾತಾಡಿದ್ದಾರೆ. ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿ, ಶಶಿ ತರೂರು ಮನೆಯವರ ಬಗ್ಗೆ ಏನು ಮಾತಾಡಿದ್ದಾರೆಂದು ಜಗಜ್ಜಾಹೀರಾಗಿದೆ. ಆದ್ದರಿಂದ ಇವರಿಂದ ಪ್ರವಚನ ಕೇಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಹೇಳಿದ ಅರ್ಥ ಏನು ಅಂದರೆ, ಮೋದಿ ಅವರ ಮುಂದೆ ಸಿಎಂ ಹಾಗೂ ಸಂಸದರು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಅದನ್ನು ಯಾವ ರೀತಿ ಆದರೂ ಅರ್ಥೈಸಬಹುದು ಎಂದು ತಿಳಿಸಿದರು.

ಪ್ರಚಾರಕರ ಪಾರ್ಟಿಯಲ್ಲಿ ಏನಾದರೂ ಆಗುತ್ತದೆ: ಸ್ಯಾಂಟ್ರೋ ರವಿಯನ್ನು ಇಟ್ಟುಕೊಂಡು ಆ ಹೆಣ್ಣುಮಕ್ಕಳನ್ನ ಕರೆದುಕೊಂಡು ಹೋಗಿದ್ದರು ಎನ್ನುವ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಾಂಬೆ ಬಾಯ್ಸ್ ಏನು ಮಾಡಿದ್ದರು. ಬಿಜೆಪಿಯಲ್ಲಿ ತುಂಬಿರುವವರು ಎಲ್ಲರೂ ಅಂತವರೇ. ಪ್ರಚಾರಕ ಪಾರ್ಟಿಯಲ್ಲಿ ಏನು ಬೇಕಾದರೂ ಆಗುತ್ತದೆ. ಬರುವ ದಿನಗಳಲ್ಲಿ ಚಿತ್ರಣ ಬಯಲು ಆಗುತ್ತದೆ. ದೆಹಲಿಯಲ್ಲಿ ಆಗಿದ್ದು ಮಹಿಳೆರ ಮೇಲಿನ ದೌರ್ಜನ್ಯ ನೋಡಿದರೆ,  ಬಿಜೆಪಿಯವರ ನಡೆನುಡಿಗಳ‌ ಬಗ್ಗೆ ಗೊತ್ತಾಗುತ್ತದೆ. ಕುಮಾರಸ್ವಾಮಿ ಹೇಳಿರುವ ಬಗ್ಗೆ ಸಮರ್ಥನೆ ಮಾಡಲು ಆಗಲ್ಲ, ಅಲ್ಲಗಳಿಯಲು ಆಗಲ್ಲ. ಇವರದ್ದು ಬ್ಲೂಜೆಪಿ ಆಗಿರೋದು ಸ್ಪಷ್ಟವಾಗಿದೆ ಎಂದರು.

Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಮೂರು ಫಾರ್ಮುಲಾ!: ಯಾರಿಗೆ ಸಿಗುತ್ತೆ ಟಿಕೆಟ್..?

ಬಾಂಬೆ ಬಾಯ್ಸ್‌ಗೆ 50 ಕೋಟಿ ಕೊಟ್ಟಿದ್ದಾರೆ: ಬಿಜೆಪಿಯಲ್ಲಿ ಇರುವಂತವರು ರಾಸಲೀಲೆಗಳ ಸಿಕ್ಕಿ ಹಾಕಿಕೊಂಡಿದ್ದು, ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಬೇಕಿಲ್ಲ. ಬಾಂಬೆ ಬಾಯ್ಸ್ ಗೆ ಹಣ ಕೊಟ್ಟಿದ್ದರಿಂದ ಪರ್ಸಂಟೇಜ್ ಜಾಸ್ತಿಯಾಗಿದೆ. ಬಾಂಬೆ ಬಾಯ್ಸ್ ಐವತ್ತು ಕೋಟಿ ಕೊಟ್ಟಿದ್ದಾರೆ. ಅಲ್ಲಿ ಎನು ನಡೆಯಿತು ಎಂದು ಮಾತಾಡಿ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲ. ರಾಜ್ಯ ರಾಜಕಾರಣ ಆಗದೆ ಇರೋದು ಬಿಜೆಪಿ ಅವರು ಬಂದ‌ ಮೇಲೆ ಆಗಿದೆ ಎಂದು ಕಿಡಿಕಾರಿದರು.

Follow Us:
Download App:
  • android
  • ios