ಹುಬ್ಬಳ್ಳಿ(ಫೆ. 21)  ಲೋಕಸಭಾ ಚುನಾವಣೆ ತಯಾರಿ ನಡೆಯುತ್ತಿದೆ. ಸುಮಲತಾ ಅವರು  ನನನ್ನು ಭೇಟಿಯಾಗಿದ್ದಾರೆ. ಸುಮಲತಾ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಇನ್ನು ನಿರ್ಧಾರ ಆಗಿಲ್ಲ. ಸೀಟು ಹಂಚಿಕೆ ಕುರಿತಾಗಿ ಜೆಡಿಎಸ್ ಜೊತೆಯಲ್ಲಿ ಇನ್ನು ಚರ್ಚೆ ಆಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದೇವೇಗೌಡರ ಜೊತೆಯಲ್ಲಿ ಚರ್ಚೆ ಮಾಡಿದ ಬಳಿಕ ಸೀಟು ಹಂಚಿಕೆ ಅಂತಿಮ ಆಗಲಿದೆ. ಅವರಿಗೆ ಎಷ್ಟು ನಮಗೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.  ಅವರು ಯಾವ ಕ್ಷೇತ್ರದಲ್ಲಿ ಗೆಲ್ಲುತ್ತಾರೆ, ನಾವು ಯಾವ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎನ್ನುವುದು  ಮುಖ್ಯವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಸುಮಲತಾ ಪಕ್ಷೇತರರಾಗಿ ಸ್ಪರ್ಧೆ

ಮೋದಿ ಮತ್ತೆ ಪ್ರಧಾನಿ ಆಗಲ್ಲ. ರಾಹುಲ್ ಗಾಂಧಿ ಅವರೇ ನಮ್ಮು ಮುಂದಿನ ಪ್ರಧಾನಿ ಅಭ್ಯರ್ಥಿ. ಮೋದಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಮೋದಿ ವಿರೋಧಿ ಅಲೆ ಎದ್ದಿದೆ.  ಹೀಗಾಗಿ ಜನ ಮೋದಿಗೆ ತಕ್ಕ ಪಾಠ ಕಲಿಸುತ್ತಾರೆ  ಎಂದು ಹೇಳಿದರು.