Asianet Suvarna News Asianet Suvarna News

ನಮ್ಮ ಸರ್ಕಾರ ಇಡೀ ಬಸ್ಸನ್ನೇ ಮಹಿಳೆ ಕೈಗೆ ಕೊಟ್ಟಿದೆ, ಡ್ರೈವರ್ ಮಾತ್ರ ಗಂಡುಮಕ್ಕಳು; ತಂಗಡಗಿ ಹಾಸ್ಯ ಚಟಾಕಿ

ಬಸ್ ನಲ್ಲಿ ಮಹಿಳೆಯರು ಫ್ರೀಯಾಗಿ ಓಡಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದೇವೆ, ಇಡೀ ಬಸ್‌ ಅನ್ನೇ ಹೆಣ್ಣು ಮಕ್ಕಳ ಕೈಗೆ ಕೊಟ್ಟಿದ್ದೇವೆ. ಡ್ರೈವರ್ ಮಾತ್ರ ಗಂಡುಮಕ್ಕಳು ಇದ್ದಾರೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ಶಿವರಾಜ ತಂಗಡಗಿ ಹಾಸ್ಯ ಚಟಾಕಿ ಹಾರಿಸಿದರು.

Lok sabha polls 2024 shivaraj tangadagi speech at Prajadhwani program in Sindhanur town rav
Author
First Published Apr 28, 2024, 9:14 PM IST

ರಾಯಚೂರು (ಏ.28): ಈ ಬಾರಿಯ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ಮಧ್ಯೆ ನಡೆಯುವ ಚುನಾವಣೆ ಆಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ ಪ್ರಚಾರ ಹಿನ್ನೆಲೆ ಇಂದು ಸಿಂಧನೂರು ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭಿವೃದ್ಧಿ ಹೆಸರಲ್ಲಿ ಮತ ಕೇಳುತ್ತಿದೆ. ಬಿಜೆಪಿಯವರು ಅಭಿವೃದ್ದಿ ಇಲ್ಲ ಧರ್ಮದ ಹೆಸರಲ್ಲಿ ಮತ ಕೇಳುತ್ತಿದೆ. ಕಾಂಗ್ರೆಸ್ ಅಧಿಕಾರ ಬರುತ್ತಿದ್ದಂತೆ ಐದು ಗ್ಯಾರಂಟಿ ಜಾರಿ ಮಾಡಿ ಜನರಿಗೆ ಮುಟ್ಟಿಸಿದ್ದೇವೆ. ನಮ್ಮದು ಬಡವರ ಪರ ಇರುವ ಸರ್ಕಾರ ಎಂದರು.

ಬಸ್ ನಲ್ಲಿ ಮಹಿಳೆಯರು ಫ್ರೀಯಾಗಿ ಓಡಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದೇವೆ, ಇಡೀ ಬಸ್‌ ಅನ್ನೇ ಹೆಣ್ಣು ಮಕ್ಕಳ ಕೈಗೆ ಕೊಟ್ಟಿದ್ದೇವೆ. ಡ್ರೈವರ್ ಮಾತ್ರ ಗಂಡುಮಕ್ಕಳು ಇದ್ದಾರೆ ಎಂದು ಮಾತಿನಲ್ಲಿ ನಗೆ ಚಟಾಕಿ ಹಾರಿಸಿದರು. 

ಸಿದ್ದರಾಮಯ್ಯ ಸಮಾವೇಶದಲ್ಲಿ ಅಕ್ಕಿಚೀಲ, ಮಜ್ಜಿಗೆ ಪ್ಯಾಕೆಟ್‌ಗೆ ಮುಗಿಬಿದ್ದ ಜನ!

ಮೋದಿ ವಿರುದ್ಧ ವಾಗ್ದಾಳಿ:

ಪ್ರಧಾನಿ ಮೋದಿ 15 ಲಕ್ಷ ರೂ. ಖಾತೆಗೆ ಹಾಕುವುದಾಗಿ ಹೇಳಿದ್ರು. ಆದರೆ ಇನ್ನೂವರೆಗೆ ಯಾರ ಅಕೌಂಟ್‌ಗೂ 15 ಪೈಸೆ ಕೂಡ ಬಂದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಂತೆ ಕೇಂದ್ರದಲ್ಲಿಯೂ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ಈ ಬಾರಿ ಕಾಂಗ್ರೆಸ್ ಗೆಲ್ಲುತ್ತದೆ, ಕೇಂದ್ರದಲ್ಲಿ ಅಧಿಕಾರಕ್ಕೆ ಏರುವುದು ನಿಶ್ಚಿತ ಎಂದರು. 

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಎಲ್ಲ ಕೈ ನಾಯಕರು ಚೊಂಬು ಹಿಡ್ಕೊಂಡು ಹೋಗ್ತಾರೆ: ಯತ್ನಾಳ್ ವಾಗ್ದಾಳಿ

ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಪ್ರತಿ ಮನೆ ಒಡತಿಗೆ ಮಾಸಿಕ 2 ಸಾವಿರ ರೂ ಕೊಡುತ್ತಿದ್ದೇವೆ. ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ರೆ ಮಹಾಲಕ್ಷ್ಮೀ ಯೋಜನೆ ಜಾರಿ ಮಾಡುತ್ತೇವೆ. ರೈತರ ಸಾಲ ಮನ್ನಾ ಮಾಡುತ್ತೇವೆ. ಜಾತಿಗಣತಿ ಮಾಡಿ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

Latest Videos
Follow Us:
Download App:
  • android
  • ios