ಲೋಕಸಭಾ ಚುನಾವಣೆ ಮುಗಿತು, ಅಭ್ಯರ್ಥಿಗಳು ಈಗ ರಿಲ್ಯಾಕ್

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 2ನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಬಹುತೇಕ ರಾಜ ಕೀಯ ನಾಯಕರು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಚುನಾವಣಾ ಜಂಜಾಟದಿಂದ ಹೊರ ಬಂದು ಕುಟುಂಬ ಸದಸ್ಯರ ಜೊತೆ ಕಾಲ ಕಳೆಯುತ್ತಿದ್ದಾರೆ. 

Lok Sabha elections are over candidates are now relaxed gvd

ಹುಬ್ಬಳ್ಳಿ /ಬೆಂಗಳೂರು (ಮೇ.09): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 2ನೇ ಹಂತದ ಮತದಾನ ಮುಗಿಯುತ್ತಿದ್ದಂತೆ ಬಹುತೇಕ ರಾಜ ಕೀಯ ನಾಯಕರು ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಚುನಾವಣಾ ಜಂಜಾಟದಿಂದ ಹೊರ ಬಂದು ಕುಟುಂಬ ಸದಸ್ಯರ ಜೊತೆ ಕಾಲ ಕಳೆಯುತ್ತಿದ್ದಾರೆ. 

ಮೊಮ್ಮಕ್ಕಳ ಜೊತೆ ಆಟವಾಡಿದ ಜೋಶಿ: ಧಾರ ವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಬುಧವಾರ ಕುಟುಂಬ ಸದಸ್ಯರ ಜೊತೆಮನೆಯಲ್ಲೇ ಕಾಲಕಳೆದರು. ಮೊಮ್ಮಕ್ಕಳನ್ನು ಎತ್ತಾಡಿಸಿ, ಮುದ್ದಿಸಿ ಸಂತಸಪಟ್ಟರು. 

ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ: ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್‌

ಅಳಿಯನ ರೆಸಾರ್ಟ್‌ನಲ್ಲಿ ಡಿಕೆಶಿ ವಿಶ್ರಾಂತಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪತ್ನಿ, ಮಕ್ಕಳು ಮತ್ತು ಅಳಿಯನೊಂದಿಗೆ ಚಿಕ್ಕಮಗಳೂರಿನ ಸೆರಾಯ್‌ ರೇಸಾರ್ಟ್‌ಗೆ ಆಗಮಿಸಿ, ವಿಶ್ರಾಂತಿ ಪಡೆದರು. ಬುಧವಾರ ಬೆಳಗ್ಗೆ ದಿವಂಗತ ಸಿದ್ದಾರ್ಥ ಹೆಗ್ಡೆ ಕುಟುಂಬಕ್ಕೆ ಸೇರಿರುವ ಕತ್ತೇಖಾನ್ ಎಸ್ಟೇಟ್‌ಗೆ ಹೆಲಿ ಕ್ಯಾಪ್ಟರ್‌ನಲ್ಲಿ ತೆರಳಿ ಬಳಿಕ ಬೆಂಗಳೂರಿಗೆ ತೆರಳಿದರು. 

ಶ್ರೀರಾಮುಲು ಜಾಗಿಂಗ್: ಬಳ್ಳಾರಿಯ ಹವಾಂ ಭಾವಿ ಪ್ರದೇಶದ ತಮ್ಮ ನಿವಾಸದಲ್ಲಿ ಎಂದಿನಂತೆ ಬುಧವಾರ ಬೆಳಗ್ಗೆ ಎದ್ದು ಜಾಗಿಂಗ್ ಮುಗಿಸಿದ ಬಿ. ಶ್ರೀರಾಮುಲು, ಬಳಿಕ ಉಪಾಹಾರ ಮುಗಿಸಿ, ತಮ್ಮನ್ನು ಭೇಟಿಮಾಡಲು ಬಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಕುಶಲೋಪರಿ ನಡೆಸಿದರು. ಮಧ್ಯಾಹ್ನದವರೆಗೆ ಮುಖಂಡರ ಜೊತೆ ಚರ್ಚಿಸಿ, ವಿಶ್ರಾಂತಿಗೆ ಜಾರಿದರು.

ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ತುಕಾರಾಂ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು 30ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದರು. ಬೆಳಗ್ಗೆಯೇ ಸ್ನಾನ, ಪೂಜಾದಿಗಳನ್ನು ಮುಗಿಸಿ ಆಂಜ ನೇಯಸ್ವಾಮಿ ದೇವಸ್ಥಾನಕ್ಕೆ ದಂಪತಿ ಸಮೇತ ತೆರಳಿ ಪೂಜೆ ಸಲ್ಲಿಸಿದರು.

ಆಕಳ ಮೈದಡವಿ, ಅಡಕೆ ತೋಟ ಸುತ್ತಿದ ಕಾಗೇರಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿರಸಿ ತಾಲೂಕಿನ ಕುಳವೆಯ ತಮ್ಮ ಮನೆಯ ಕೊಟ್ಟಿಗೆಯಲ್ಲಿ ದನಕರುಗಳ ಮೈದಡವಿ, ಮೇವು ನೀಡಿದರು. ಬಳಿಕ, ನಾಯಿ ಜೊತೆ ತೋಟದಲ್ಲಿ ತಿರುಗಾಡುತ್ತ, ಹೂವಿನ ಗಿಡಗಳಿಗೆ ನೀರೆರೆದರು. ಬಳಿಕ, ಗಿಳಿಗಳ ಜತೆ ಕಾಲ ಕಳೆದರು.

ಕೇಂದ್ರ ಸರ್ಕಾರ ಪ್ರಜ್ವಲ್‌ ರೇವಣ್ಣಗೆ ರಕ್ಷಣೆ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ

ಸಚಿವ ಸತೀಶ ಜಾರಕಿಹೊಳಿಯವರು ತಮ್ಮ ಆಪ್ತರು ಮತ್ತು ಸ್ನೇಹಿತರ ಜೊತೆಗೂಡಿ ಗೋಕಾಕ ನಗರದಲ್ಲಿರುವ ಶೆಟ್ಟಿ ಸ್ವೀಟ್ ಮಾರ್ಟ್ ಅಂಗಡಿಗೆ ತೆರಳಿ ಕೆಲ ಹೊತ್ತು ಎಂಜಾಯ್ ಮಾಡಿದರು.

Latest Videos
Follow Us:
Download App:
  • android
  • ios