Asianet Suvarna News Asianet Suvarna News

ಬಿಜೆಪಿ ಸುಳ್ಳು ಗ್ಯಾರೆಂಟಿಗೆ ವಾರೆಂಟಿ ಇಲ್ಲ: ಮಧು ಬಂಗಾರಪ್ಪ ಲೇವಡಿ

ರಾಜಕಾರಣಿಗಳು ಆಶ್ವಾಸನೆ, ಭರವಸೆ ನೀಡುವುದು ಸಾಮಾನ್ಯವಾಗಿದ್ದು, ಆದರೆ ನೀಡಿದ ಭರವಸೆಯನ್ನು ಯಥಾ ಪ್ರಕಾರ ಈಡೇರಿಸಿದ ಹಿರಿಮೆ ದಿ.ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. 

Lok Sabha Elections 2024 No warrant for BJPs false guarantee Says Madhu Bangarappa gvd
Author
First Published Apr 21, 2024, 12:15 PM IST

ಶಿಕಾರಿಪುರ (ಏ.21): ರಾಜಕಾರಣಿಗಳು ಆಶ್ವಾಸನೆ, ಭರವಸೆ ನೀಡುವುದು ಸಾಮಾನ್ಯವಾಗಿದ್ದು, ಆದರೆ ನೀಡಿದ ಭರವಸೆಯನ್ನು ಯಥಾ ಪ್ರಕಾರ ಈಡೇರಿಸಿದ ಹಿರಿಮೆ ದಿ.ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಪಟ್ಟಣದ ಮಾಳೇರಕೇರಿಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ವರ್ಷ ವಿಧಾನಸಭಾ ಚುನಾವಣೆಯ ಇದೇ ವೇಳೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಜಾರಿಗೊಳಿಸಲಾದ ಗ್ಯಾರಂಟಿ ಯೋಜನೆಯ ಸಮಿತಿಗೆ ಸದಸ್ಯನಾಗಿದ್ದು, ಅತ್ಯಂತ ಹೆಮ್ಮೆ ಹಾಗೂ ಖುಷಿ ಸಂಗತಿಯಾಗಿದೆ ಎಂದ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ 5 ಗ್ಯಾರಂಟಿಗಳನ್ನು ಈಡೇರಿಸಲಾಗಿದೆ. ಬಂಗಾರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಆಶ್ರಯ, ಆರಾಧನಾ, ವಿಶ್ವ, ಉಚಿತ ವಿದ್ಯುತ್ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಗ್ಯಾರಂಟಿ ಗಳನ್ನು ಯಥಾಪ್ರಕಾರ ಅನುಷ್ಠಾನಗೊಳಿಸಿ ರಾಜಕಾರಣಿಗಳು ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆ, ಭರವಸೆ ಈಡೇರಿಸಿದ ಹಿರಿಮೆ ಯನ್ನು ಹೊಂದಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ನೀಡುವ ಎಲ್ಲ ಗ್ಯಾರೆಂಟಿಗೆ ವಾರೆಂಟಿಯಿದ್ದು ಬಿಜೆಪಿ ಸುಳ್ಳು ಗ್ಯಾರೆಂಟಿಗೆ ಯಾವುದೇ ವಾರೆಂಟಿ ಇಲ್ಲ ಸತತ 10 ವರ್ಷ ಮೋದಿ ಚೊಂಬು ನೀಡಿದ್ದು ಚುನಾವಣೆಯಲ್ಲಿ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ ಎಂದ ಅವರು ಕಾಂಗ್ರೆಸ್ ಒಳ್ಳೆ ಬಾಗ್ಯ ಕೊಡುವ ಅದ್ಬುತ ಕೆಲಸ ಮಾಡಿದೆ ಕಳೆದ ಚುನಾವಣೆಯಲ್ಲಿ ಮನೆಮನೆಗೂ ಗ್ಯಾರೆಂಟಿ ಕಾರ್ಡ ವಿತರಿಸಿದ್ದು ಈ ಬಾರಿ ಹಳೆ ಗ್ಯಾರೆಂಟಿ ಜತೆಗೆ ಹೊಸ ಗ್ಯಾರೆಂಟಿಯನ್ನು ನೀಡಲಾಗಿದೆ ಕಾರ್ಯಕರ್ತರು ಪ್ರತಿ ಮನೆಮನೆಗೆ ತೆರಳಿ ಮತದಾರರಿಗೆ ಈ ಬಗ್ಗೆ ಅರಿವು ಮೂಡಿಸಿ ಮತಯಾಚಿಸಿದಲ್ಲಿ ಗೀತಕ್ಕರ ಗೆಲುವು ನಿಶ್ಚಿತ ಎಂದು ತಿಳಿಸಿದರು.

ಪಿಕ್ ಪಾಕೆಟ್ ಕಲೆ ಕಾಂಗ್ರೆಸ್‌ಗೆ ಮಾತ್ರ ಗೊತ್ತು: ಸಿ.ಟಿ.ರವಿ ವ್ಯಂಗ್ಯ

ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್,ಬ್ಲಾಕ್ ಅಧ್ಯಕ್ಷ ಶಿವರಾಂ ಪಾರಿವಾಳದ,ವೀರನಗೌಡ,ಮುಖಂಡ ಕಲಗೋಡು ರತ್ನಾಕರ್, ನಾಗರಾಜಗೌಡ, ಗೋಣಿ ಮಾಲತೇಶ್, ನಗರದ ಮಹಾದೇವಪ್ಪ, ರುದ್ರಗೌಡ, ಉಳ್ಳಿ ದರ್ಶನ್, ಜಾಫರ್ ಆಲಿಖಾನ್, ಖಾಸಿಂಸಾಬ್, ರಾಘವೇಂದ್ರ ನಾಯ್ಕ, ಉಮೇಶ್ ಮಾರವಳ್ಳಿ, ಸುರೇಶ್ ಧಾರವಾಡದ, ಕೃಷ್ಣೋಜಿರಾವ್ ಕೊಟ್ಟ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios