Lok Sabha Elections 2024: ಪ್ರಧಾನಿ ಮೋದಿಯಿಂದ ರಾಮರಾಜ್ಯ ನಿರ್ಮಾಣ: ಡಾ.ಕೆ.ಸುಧಾಕರ್‌

ಪ್ರಭು ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಇದಕ್ಕೆ ಪೂರಕವಾಗಿ ರಾಮರಾಜ್ಯ ನಿರ್ಮಿಸಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. 

Lok Sabha Elections 2024 Creation of Utopia by Narendra Modi Says Dr K Sudhakar gvd

ಚಿಕ್ಕಬಳ್ಳಾಪುರ (ಏ.18): ಪ್ರಭು ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ವಿಜೃಂಭಣೆಯಿಂದ ಆಚರಣೆಯಾಗಿದೆ. ಇದಕ್ಕೆ ಪೂರಕವಾಗಿ ರಾಮರಾಜ್ಯ ನಿರ್ಮಿಸಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ. ವಿಕಸಿತ ಭಾರತದ ಸಂಕಲ್ಪವೇ ಈ ಪ್ರಯತ್ನದ ಹೆಜ್ಜೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು. ಮರ್ಯಾದಾ ಪುರುಷೋತ್ತಮ, ಆದರ್ಶ ಪ್ರಜಾಪಾಲಕ ಪ್ರಭು ಶ್ರೀರಾಮಚಂದ್ರ ಅವತರಿಸಿದ ಪವಿತ್ರ ದಿನವೇ ಶ್ರೀರಾಮ ನವಮಿ. 500 ವರ್ಷಗಳ ವನವಾಸದ ನಂತರ ಪ್ರಭು ಶ್ರೀರಾಮಚಂದ್ರ ಈಗ ತನ್ನ ಜನ್ಮಭೂಮಿ ಅಯೋಧ್ಯೆಯಲ್ಲಿ, ತನ್ನ ಭವ್ಯ ಮಂದಿರದಲ್ಲಿ ನೆಲೆಸಿದ್ದಾನೆ. ಈ ವರ್ಷದ ಶ್ರೀ ರಾಮ ನವಮಿ ಎಲ್ಲ ಭಾರತೀಯರಿಗೂ ಅತ್ಯಂತ ವಿಶೇಷ ದಿನ ಎಂದರು.

ರಾಮನ ವನವಾಸಕ್ಕೆ ಮುಕ್ತಿ: ಧರ್ಮ ವಿರೋಧಿಗಳ ಕುತಂತ್ರದಿಂದ ಪ್ರಭು ಶ್ರೀರಾಮ 500 ವರ್ಷಗಳ ಕಾಲ ಒಂದು ಸಣ್ಣ ಟೆಂಟ್‌ನಲ್ಲಿ ವನವಾಸ ಅನುಭವಿಸಬೇಕಾಯಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಶ್ರೀರಾಮನ ವನವಾಸಕ್ಕೆ ಮುಕ್ತಿ ಸಿಕ್ಕಿದೆ. ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿರುವುದು ಐನೂರು ವರ್ಷಗಳ ಹೋರಾಟದ ಫಲ. ಬಹುಶಃ ಇಡೀ ಜಗತ್ತಿನ ಇತಿಹಾಸದಲ್ಲಿ ಒಂದು ಧಾರ್ಮಿಕ ಕ್ಷೇತ್ರಕ್ಕೆ ಈ ಮಟ್ಟದ ನಿರಂತರ ವಿರೋಧ, ಹೋರಾಟ, ತ್ಯಾಗ, ಬಲಿದಾನ ಎಲ್ಲೂ ನಡೆದಿಲ್ಲ ಎಂದರು.

ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆ

ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಕೋಟ್ಯಂತರ ಬಡವರನ್ನು ಬಡತನದಿಂದ ಮೇಲೆಕ್ಕೆತ್ತಿದ್ದಾರೆ. ಜೊತೆಗೆ ಹಿಂದೂ ಪುಣ್ಯಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಮೋದಿ ಅವರದು ಪರಂಪರೆಯ ತಳಹದಿಯಲ್ಲಿ ನವ ಭಾರತ ಕಟ್ಟುವ ಪ್ರಯತ್ನ. ಬೇರೆ ದೇಶಗಳಲ್ಲಿ ಅಭಿವೃದ್ಧಿ ಅಂದರೆ ಕೇವಲ ನಗರೀಕರಣ ಅಥವಾ ಕೈಗಾರಿಕೀಕರಣ ಆಗಿರಬಹುದು. ಭಾರತದಲ್ಲಿ ಹಾಗಲ್ಲ ಸನಾತನ ಧರ್ಮವೇ ದೇಶದ ಆತ್ಮ. ಇಲ್ಲಿ ಎಷ್ಟೇ ಅಭಿವೃದ್ಧಿ, ಆಧುನಿಕತೆ ಬಂದರೂ ಹಿಂದೂ ಧರ್ಮ, ಸನಾತನ ಸಂಸ್ಕೃತಿ, ಪರಂಪರೆಯ ಮುಂದುವರಿಕೆ ಇಲ್ಲದೆ ಅಭಿವೃದ್ಧಿ ಅರ್ಥ ಕಳೆದುಕೊಳ್ಳುತ್ತದೆ ಎಂದರು.

ರಾಮ ಮಾರ್ಗವೇ ನಮಗೆ ಆದರ್ಶ: ಪ್ರಧಾನಿ ಮೋದಿ ವಿಕಸಿತ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಮುನ್ನಡೆದಿದ್ದಾರೆ. ಇದು ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳಿಸುವ ಹೆಜ್ಜೆ. ಶ್ರೀರಾಮನ ಆಡಳಿತದ ಆದರ್ಶಗಳನ್ನೇ ಪ್ರಧಾನಿ ಮೋದಿ ತಮ್ಮ ಆಡಳಿತದ ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಇದೇ ಕಾರಣಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಭಾರತ ಅಚ್ಚರಿ ಎನಿಸುವ ಮಟ್ಟಿಗೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಧರ್ಮರಕ್ಷಕ, ಸಕಲ ಸದ್ಗುಣ ಸಂಪನ್ನನಾದ ಪ್ರಭು ಶ್ರೀರಾಮಚಂದ್ರನ ಜೀವನವೇ ನಮಗೂ ರಾಮ ಮಾರ್ಗ ಎಂದು ಹೇಳಿದರು.

ವಿಜಯೇಂದ್ರ ಜತೆ ರೋಡ್‌ ಶೋ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ಮತ ಯಾಚಿಸಲು ರೋಡ್‌ ಶೋ ನಡೆಸಿದರು. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದಿಂದ ಆರಂಭವಾಗಿ ಸೌಂದರ್ಯ ಮಹಲ್‌ವರೆಗೆ ನಡೆದ ರೋಡ್‌ ಶೋನಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಅಪಾರ ಬೆಂಬಲ ತೋರಿದರು. ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯಾಗಿಸುವ ಹಾಗೂ ಕ್ಷೇತ್ರದಲ್ಲಿ ಕಮಲ ಅರಳಿಸುವ ಘೋಷಣೆ ಕೇಳಿಬಂತು. ಅಭ್ಯರ್ಥಿ ಡಾ.ಕೆ.ಸುಧಾಕರ್‌ ಜೊತೆ ಶಾಸಕ ಧೀರಜ್‌ ಮುನಿರಾಜು ಹಾಜರಿದ್ದರು.

ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಭೇಟಿ: ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾಮದ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠಕ್ಕೆ ಇದೇ ವೇಳೆ ಭೇಟಿ ನೀಡಿದ ಡಾ.ಕೆ.ಸುಧಾಕರ್‌‌ ವಹ್ನಿಕುಲ ಕ್ಷತ್ರಿಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಮಾತನಾಡಿದ ಡಾ.ಕೆ.ಸುಧಾಕರ್‌, ಬೆಂಗಳೂರಿನ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವವನ್ನು ಪ್ರತಿ ವರ್ಷ ತಿಗಳ ಸಮುದಾಯದವರು ವಿಜೃಂಭಣೆಯಿಂದ ನಡೆಸುತ್ತಾರೆ. 

ಕೇಂದ್ರ ಸರ್ಕಾರ ಉದ್ಯಮಿಗಳಿಂದ ಹಫ್ತಾ ಸುಲಿಗೆ: ರಾಹುಲ್‌ ಗಾಂಧಿ ಗಂಭೀರ ಆರೋಪ

ಬೆಂಗಳೂರು ನಗರದ ಇತಿಹಾಸ ಹಾಗೂ ಪರಂಪರೆಗೆ ತಿಗಳ ಸಮುದಾಯ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಪವಿತ್ರವಾದ ಚೈತ್ರ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಜಗನ್ಮಾತೆ ಆದಿಶಕ್ತಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದು ನನ್ನಲ್ಲಿ ಹೊಸ ಶಕ್ತಿ, ಚೈತನ್ಯ ತುಂಬಿದೆ ಎಂದು ಹೇಳಿದರು. ನಂತರ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠಕ್ಕೆ ಭೇಟಿ ನೀಡಿ, ಪೀಠಾಧಿಪತಿ ಹಾಗೂ ವಹ್ನಿಕುಲ ಕ್ಷತ್ರಿಯ ಜನಾಂಗದ ಗುರು ಸದ್ಗುರು ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್ ಶ್ರೀಗಳ ಆಶೀರ್ವಾದ ಪಡೆದರು.

Latest Videos
Follow Us:
Download App:
  • android
  • ios