Asianet Suvarna News Asianet Suvarna News

ಚುನಾವಣೆ ಫಲಿತಾಂಶ ಜೆಡಿಎಸ್‌ ಬಲಿಷ್ಠ ಎಂಬುದಕ್ಕೆ ಸಾಕ್ಷಿ: ಶರವಣ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ದೇಶದ ಜನ ಆಯ್ಕೆ ಮಾಡಿದ್ದಾರೆ. ಸತತ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿ ಕೂಟ ಗೆಲುವಿನ ಮೂಲಕ ಹೊಸ ದಾಖಲೆ ಬರೆದಿದೆ. ಬಿಜೆಪಿ- ಜೆಡಿಎಸ್‌ ಮೈತ್ರಿಗೆ ರಾಜ್ಯದ ಜನ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೈತ್ರಿ ಒಂದು ಪ್ರಬಲ ರಾಜಕೀಯ ಶಕ್ತಿ ಎನ್ನುವುದು ಸಾಬೀತಾಗಿದೆ: ವಿಧಾನ ಪರಿಷತ್‌ ಹಾಗೂ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಟಿ.ಎ.ಶರವಣ

Lok Sabha Election Result 2024 Prove that JDS is Strong Says TA Saravana grg
Author
First Published Jun 5, 2024, 11:27 AM IST

ಬೆಂಗಳೂರು(ಜೂ.05):  ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶ ರಾಜ್ಯದಲ್ಲಿ ಜೆಡಿಎಸ್‌ ಮತ್ತೊಮ್ಮೆ ಬಲಿಷ್ಠ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ ಎಂದು ವಿಧಾನ ಪರಿಷತ್‌ ಹಾಗೂ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಟಿ.ಎ.ಶರವಣ ಹೇಳಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ದೇಶದ ಜನ ಆಯ್ಕೆ ಮಾಡಿದ್ದಾರೆ. ಸತತ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿ ಕೂಟ ಗೆಲುವಿನ ಮೂಲಕ ಹೊಸ ದಾಖಲೆ ಬರೆದಿದೆ. ಬಿಜೆಪಿ- ಜೆಡಿಎಸ್‌ ಮೈತ್ರಿಗೆ ರಾಜ್ಯದ ಜನ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೈತ್ರಿ ಒಂದು ಪ್ರಬಲ ರಾಜಕೀಯ ಶಕ್ತಿ ಎನ್ನುವುದು ಸಾಬೀತಾಗಿದೆ. ವಿಶೇಷವಾಗಿ ಇಡೀ ಹಳೆ ಮೈಸೂರನ್ನು ದೇವೇಗೌಡ, ಕುಮಾರಸ್ವಾಮಿ ಅವರು ಮತ್ತೊಮ್ಮೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜೆಡಿಎಸ್‌ ಬಲಿಷ್ಠ ಪಕ್ಷವಾಗಿದೆ ಎಂದಿದ್ದಾರೆ.

ಲೋಕಸಭೆ ಚುನಾವಣೆ 2024: ಈ ಬಾರಿ ಬಿಜೆಪಿ ಮತ ಇಳಿಕೆ, ಕಾಂಗ್ರೆಸ್‌ ಕಳೆದ ಬಾರಿಗಿಂತ ಏರಿಕೆ..!

ಜೆಡಿಎಸ್‌ ಪಕ್ಷವನ್ನು ಮುಗಿಸುವ ಸಂಚು ವಿಫಲ ಆಗಿದೆ. ಜೆಡಿಎಸ್‌ ಎರಡು ಸ್ಥಾನ ಅಧಿಕೃತವಾಗಿ ಗೆದ್ದಿರಬಹುದು. ಆದರೆ ಸುಮಾರು 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲು ಜೆಡಿಎಸ್ ಸಹಕಾರ ಸಿಕ್ಕಿದೆ. ಹೀಗಾಗಿ ರಾಜ್ಯದಲ್ಲಿ ಜೆಡಿಎಸ್ ಪ್ರಬಲ ಶಕ್ತಿಯಾಗಿದೆ. ಕುಮಾರಸ್ವಾಮಿ, ದೇವೇಗೌಡರನ್ನು ಮುಗಿಸುವ ಸಂಚುಗಳನ್ನು ರಾಜ್ಯದ ಜನ ವಿಫಲವಾಗಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios