ಲೋಕಸಭೆ ಚುನಾವಣೆ 2024: ಈ ಬಾರಿ ಬಿಜೆಪಿ ಮತ ಇಳಿಕೆ, ಕಾಂಗ್ರೆಸ್‌ ಕಳೆದ ಬಾರಿಗಿಂತ ಏರಿಕೆ..!

ಒಟ್ಟು ಮತದಾನದಲ್ಲಿ ಶೇ.36.91ರಷ್ಟು ಮತವನ್ನು ಗಳಿಸಿದ ಬಿಜೆಪಿ 2019ರ ಚುನಾವಣೆಗೆ ಹೋಲಿಸಿದರೆ ಶೇ. 0.39 ರಷ್ಟು ಮತಪ್ರಮಾಣ ಕುಸಿತ ಕಂಡಿದೆ. ಆದರೆ ಕಾಂಗ್ರೆಸ್‌ನ ಮತ ಪ್ರಮಾಣ ಶೇ. 21.68ರಷ್ಟಿದ್ದು ಶೇ .2.22 ರಷ್ಟು ಮತಪ್ರಮಾಣ ಏರಿಕೆಯಾಗಿದೆ. ಕಾಂಗ್ರೆಸ್‌ ಪಕ್ಷದ ಮಿತ್ರಪಕ್ಷವಾದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ತನ್ನ ಮತಗಳನ್ನು ಶೇ. 4.66 ಕ್ಕೆ ದ್ವಿಗುಣಗೊಳಿಸಿದೆ.

BJP Voting Decrease and Congress Increase in Lok Sabha Election 2024 grg

ನವದೆಹಲಿ(ಜೂ.05): 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು ಹೆಚ್ಚು ಮತಗಳನ್ನು ಗಳಿಸಿದರೆ, ಬಿಜೆಪಿ ಗಳಿಸಿದ ಮತಪ್ರಮಾಣ ಕುಸಿತ ಕಂಡಿದೆ. 2019ರ ಚುನಾವಣೆಗಿಂತ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಸ್ಫರ್ಧೆ ಮಾಡಿತ್ತು. ಆದರೂ ಮ್ಯಾಜಿಕ್‌ ನಂಬರ್‌ನಷ್ಟು ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

ಒಟ್ಟು ಮತದಾನದಲ್ಲಿ ಶೇ.36.91ರಷ್ಟು ಮತವನ್ನು ಗಳಿಸಿದ ಬಿಜೆಪಿ 2019ರ ಚುನಾವಣೆಗೆ ಹೋಲಿಸಿದರೆ ಶೇ. 0.39 ರಷ್ಟು ಮತಪ್ರಮಾಣ ಕುಸಿತ ಕಂಡಿದೆ. ಆದರೆ ಕಾಂಗ್ರೆಸ್‌ನ ಮತ ಪ್ರಮಾಣ ಶೇ. 21.68ರಷ್ಟಿದ್ದು ಶೇ .2.22 ರಷ್ಟು ಮತಪ್ರಮಾಣ ಏರಿಕೆಯಾಗಿದೆ. ಕಾಂಗ್ರೆಸ್‌ ಪಕ್ಷದ ಮಿತ್ರಪಕ್ಷವಾದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ತನ್ನ ಮತಗಳನ್ನು ಶೇ. 4.66 ಕ್ಕೆ ದ್ವಿಗುಣಗೊಳಿಸಿದೆ.

ಈಡೇರದ ಬಿಜೆಪಿ ‘ಅಬ್‌ ಕೀ ಬಾರ್‌ 400 ಪಾರ್‌’ ಕನಸು..!

ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ 2019 ರ ಚುನಾವಣೆಯ ಶೇ. 4.06 ರಿಂದ ಶೇ. 4.25 ಕ್ಕೆ ತನ್ನ ಮತ ಹೆಚ್ಚಿಸಿಕೊಂಡಿದೆ. ಮಾಯಾವತಿ ನೇತೃತ್ವದ ಬಿಎಸ್‌ಪಿಯ ಮತ ಪ್ರಮಾಣ ಈ ಬಾರಿ ಶೇ.1.55 ರಷ್ಟು ಕುಸಿತವಾಗಿದೆ.

ಪಕ್ಷ 2019 (ಮತ ಪ್ರಮಾಣ) 2024 (ಮತ ಪ್ರಮಾಣ)

ಬಿಜೆಪಿ 37.30% 36.91%
ಕಾಂಗ್ರೆಸ್‌ 19.46% 21.68%
ಎಸ್ಪಿ 2.55% 4.66%
ಟಿಎಂಸಿ 4.06% 4.25%
ಟಿಡಿಪಿ 2.04% 00%
ವೈಎಸ್‌ಆರ್‌ಸಿಪಿ 2.53% 2.08%
ಡಿಎಂಕೆ 2.34% 1.62%

Latest Videos
Follow Us:
Download App:
  • android
  • ios