Lok Sabha Election 2024: ಕಾಂಗ್ರೆಸ್ ಪರ ಮತದಾರರ ಒಲವಿದೆ: ಸಚಿವ ಮಹದೇವಪ್ಪ
ಎಲ್ಲೊ ಕುಳಿತು, ನಿಂತು ಮಾತನಾಡುವವರ ಪರ ಮತದಾರರ ಪರ ಒಲವಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಮತ್ತು ಮತದಾರರ ಒಲವಿದೆ. ಚುನಾವಣೆಗೆ ನಿಂತವರೆಲ್ಲಾ ನಾವು ಗೆಲ್ಲುತ್ತೇವೆ ಅನ್ನುತ್ತಾರೆ, ಎಲ್ಲರೂ ಗೆಲ್ಲಲಾಗುತ್ತಾ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶ್ನಿಸಿದರು.
ಕೊಳ್ಳೇಗಾಲ (ಮಾ.28): ಎಲ್ಲೊ ಕುಳಿತು, ನಿಂತು ಮಾತನಾಡುವವರ ಪರ ಮತದಾರರ ಪರ ಒಲವಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಮತ್ತು ಮತದಾರರ ಒಲವಿದೆ. ಚುನಾವಣೆಗೆ ನಿಂತವರೆಲ್ಲಾ ನಾವು ಗೆಲ್ಲುತ್ತೇವೆ ಅನ್ನುತ್ತಾರೆ, ಎಲ್ಲರೂ ಗೆಲ್ಲಲಾಗುತ್ತಾ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಎಲೆಕ್ಷನ್ ನಿಂತ ಅಷ್ಟು ಮಂದಿ ನಾವೇ ಗೆಲ್ಲುತ್ತೇವೆ ಎನ್ನುತ್ತಾರೆ, ಮತದಾರರ ಒಲವು ಕಾಂಗ್ರೆಸ್ ಪರವಿದ್ದು ಎಲ್ಲೊ ಕುಳಿತು ಮಾತಾಡುವವರ ಪರ ಜನ ಇಲ್ಲ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನೆಂದೂ ಕೋಮುವಾದ, ಜಾತಿವಾದದ ಪರವಾಗಿ ಮಾತನಾಡಿದವನಲ್ಲ. ಸಂವಿಧಾನದ ಪರವಾಗಿ ಧ್ವನಿ ಎತ್ತಿದವನು, ಇಡಿ ದೇಶದಲ್ಲಿ ಸಂವಿಧಾನ ಜಾಗೃತಿ ಜಾಥಾ ಮಾಡಿಸಿದ್ದು, ಪೀಠಿಕೆ ಓದುವಂತೆ ಮಾಡಿ ಸಂವಿಧಾನದ ರಕ್ಷಣೆ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದರು. ಏ.26ಕ್ಕೆ ಯಾರು ಕೊಚ್ಚಿ ಹೋಗುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ ಎಂದು ಬಿಜೆಪಿಯವರ ಹೇಳಿಕೆಗೆ ವ್ಯಂಗ್ಯವಾಡಿದರು. ಪಕ್ಷ ಜನರ ಪರವಾಗಿ ಕೆಲಸ ಮಾಡುತ್ತಿದೆ.
ಭೂಗಳ್ಳರ ವಿರುದ್ಧ ಸಮರ ಸಾರಿದ ಹೆಮ್ಮಿಗೆಪುರ ನಿವಾಸಿಗಳು: ಅಕ್ರಮ ಕಟ್ಟಡಗಳ ವಿರುದ್ಧ ಹೋರಾಟ
ಗ್ಯಾರಂಟಿ ನೀಡಿರುವುದು ಸಂವಿಧಾನದ ಆಶಯದಡಿಯೇ, ಹಾಗಾಗಿ ಜನರ ಸ್ವಾಭಿಮಾನದ ಬದುಕಿಗಾಗಿ ಗ್ಯಾರಂಟಿ ನೀಡಿದೆ. ಇದು ಕೇವಲ ಮತದಾನಕ್ಕಾಗಿ ಅಲ್ಲ ಎಂದರು. ಗ್ಯಾರಂಟಿ ವಿರೋಧಿಸುತ್ತಿದ್ದವರು ಈಗ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಅನ್ನುತ್ತಿದ್ದಾರಲ್ಲ ಎಂದರು. ಅಭ್ಯರ್ಥಿ ಸುನೀಲ್ ಬೋಸ್, ಶಾಸಕ ಎ ಆರ್ ಕೃಷ್ಣಮೂರ್ತಿ, ಮಾಜಿ ಶಾಸಕ ನರೇಂದ್ರ, ನಿಗಮದ ಅದ್ಯಕ್ಷರಾದ ಜಯಣ್ಣ, ಮರಿಸ್ವಾಮಿ, ಮುಡಿಗುಂಡ ಶಾಂತು, ಬೀಮನಗರ ರಮೇಶ್, ಓಲೆ ಮಹದೇವು, ಚಿನ್ನಸ್ವಾಮಿ ಮಾಳಿಗೆ, ಸ್ವಾಮಿ ನಂಜಪ್ಪ ಇನ್ನಿತರಿದ್ದರು.
ಮಾಜಿ ಶಾಸಕ ನರೇಂದ್ರ ನೇತೃತ್ವದಲ್ಲಿಯೇ ಚುನಾವಣೆ: ಹನೂರು ಶಾಸಕ ಮಂಜುನಾಥ್ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಸಭೆ ಚುನಾವಣೆಯಲ್ಲಿ ಮತ ನೀಡಿಲ್ಲ, ಹಾಗಾಗಿ ಈ ಕ್ಷೇತ್ರದಲ್ಲಿ ಮಾಜಿ ಶಾಸಕ ನರೇಂದ್ರ ಅವರ ನಾಯಕತ್ವದಲ್ಲಿಯೇ ಚುನಾವಣೆ ನಡೆಯಲಿದೆ, ನರೇಂದ್ರ ಅವರು ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿರಬಹುದು. ಆದರೆ ಜನರ ಮನಸ್ಸಿನಲ್ಲಿದ್ದಾರೆ. ಈ ಭಾಗದ ಅಭಿವೃದ್ದಿ ಕೆಲಸಗಳು ಅವರಿಂದಲೇ ಆಗಲಿವೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಮಾಜಿ ಶಾಸಕ ನರೇಂದ್ರರ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆರ್.ನರೇಂದ್ರ ಇಂದಿಗೂ ಜನರ ಮನಸ್ಸಿನಲ್ಲಿದ್ದಾರೆ. ಮತ್ತೆ ಅವರು ಗೆಲ್ಲುತ್ತಾರೆ, ಹಾಗಾಗಿ ನರೇಂದ್ರ ನಾಯಕತ್ವದಲ್ಲಿ ಪಕ್ಷ ಸಂಘಟನೆ, ಚುನಾವಣೆ ನೇತೃತ್ವ ಎಲ್ಲವೂ ಆಗಲಿದೆ. ಹನೂರು ಶಾಸಕ ಮಂಜುನಾಥ್ ನಮಗೆ ರಾಜ್ಯ ಸಭೆಯಲ್ಲಿ ಓಟ್ ನೀಡಿಲ್ಲ, ಹಾಗಾಗಿ ಈ ವಿಚಾರ ಈಗ ಬೇಡ ಎಂದರು. ಬಿಜೆಪಿ ಅಭ್ಯರ್ಥಿ ದಿ.ನಾಯಕರಿಗೆ ಗೌರವ ತೋರುವ ಕೆಲಸ ಮಾಡುತ್ತಿದ್ದಾರೆ ಮಾಡಲಿ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ವತಿಯಿಂದ ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಉಸ್ತುವಾರಿಯನ್ನಾಗಿ ಹೈಕಮಾಂಡ್ ನೇಮಿಸಲಾಗಿತ್ತು. ಅವರು ಅಭ್ಯಥಿ೯ಗಳ ಹೆಸರು, ಗುಪ್ತ ಮಾಹಿತಿ ರವಾನಿಸಿ ಹೈಕಮಾಂಡ್ ಗೆ ಸಲ್ಲಿಸಿದ್ದರು. 3 ಮಂದಿ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರು, ಸುನೀಲ್ ಬೋಸ್ ಮತ್ತು , ಜಿ ಎನ್ ನಂಜುಂಡಸ್ವಾಮಿ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಜಿ ಎನ್ ನಂಜುಂಡಸ್ವಾಮಿ ಸೀನಿಯರ್ ಲೀಡರ್ ಅವರು ನಮ್ಮೊಟ್ಟಿಗೆ ಇರಲಿದ್ದಾರೆ ಎಂದರು. ನಾನು ಮಂತ್ರಿಯಾಗಿ ಕೆಲಸ ಮಾಡಬೇಕೆಂಬ ಒಲವು ಜನರಲ್ಲಿದ್ದರಿಂದ ನಾನು ಸ್ಪರ್ಧಿಸಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಅಭಿವೃದ್ಧಿ ಪರ್ವ ಸೃಷ್ಟಿಸುವೆ: ಡಾ.ಕೆ.ಸುಧಾಕರ್
ಇಡೀ ದೇಶದಲ್ಲೆ ಸಂವಿಧಾನದ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೆನೆ. ಹಾಗಾಗಿ ನಾನು ಈ ಚುನಾವಣೆಯಿಂದ ಹಿಂದೆ ಸರಿದೆ. ಪಕ್ಷ, ಮಂತ್ರಿಮಂಡಲ ನನ್ನನ್ನು ನಿಲ್ಲಿಸಲು ಪ್ರಯತ್ನಿಸಿತ್ತು. ಬಿಜೆಪಿಯಲ್ಲಿಯೂ ಕುಟುಂಬ ರಾಜಕಾರಣವಿದೆ. ಸಂವಿಧಾನದಲ್ಲಿ ಕುಟುಂಬ ರಾಜಕಾರಣ ಮಾಡಬಾರದೆಂಬ ನಿರ್ಬಂಧವಿಲ್ಲ, ಜನರ ಅಭಿಪ್ರಾಯವೇ ಕುಟುಂಬ ರಾಜಕಾರಣಕ್ಕೆ ಒಲವು ತೋರಿದಾಗ ಏನು ಮಾಡಲು ಸಾಧ್ಯವಿಲ್ಲ, ಸಂವಿಧಾನದ ಆಶಯದಡಿ ಈಗ ಯಾರು ಎಲ್ಲಿ ಬೇಕಾದರೂ ಹೋಗಬಹುದು. ಬಿಜೆಪಿಯವರೇ ಕುಟುಂಬ ರಾಜಕಾರಣ ಮಾಡುತ್ತಿದ್ದು ಕಾಂಗ್ರೆಸ್ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದರು.