ವಯನಾಡು ಬಳಿಕ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧೆ ಬಗ್ಗೆ ಬಿಜೆಪಿ ಅಣಕವಾಡಿದ್ದು, ‘ಓಡು ರಾಹುಲ್‌ ಓಡು’ ಎಂದು ವ್ಯಂಗ್ಯವಾಡಿದೆ ಈ ಕುರಿತು ಇಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ದುಶ್ಯಂತ್‌ ಕುಮಾರ್‌ ಗೌತಮ್‌, ‘ರಾಹುಲ್‌ ಗಾಂಧಿಗೆ ಸದಾ ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡುವ ಪರಿಸ್ಥಿತಿ ಬಂದಿದೆ ಎಂದು ವ್ಯಂಗ್ಯ ಮಾಡಿದ್ದಾರೆ

ನವದೆಹಲಿ: ವಯನಾಡು ಬಳಿಕ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧೆ ಬಗ್ಗೆ ಬಿಜೆಪಿ ಅಣಕವಾಡಿದ್ದು, ‘ಓಡು ರಾಹುಲ್‌ ಓಡು’ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಇಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ದುಶ್ಯಂತ್‌ ಕುಮಾರ್‌ ಗೌತಮ್‌, ‘ರಾಹುಲ್‌ ಗಾಂಧಿಗೆ ಸದಾ ಕ್ಷೇತ್ರದಿಂದ ಕ್ಷೇತ್ರಕ್ಕೆ ಓಡುವ ಪರಿಸ್ಥಿತಿ ಬಂದಿದೆ. ಸೋಲುವ ಭೀತಿಯಿಂದ ಪಲಾಯನ ಮಾಡಬೇಡಿ ಎಂದು ಬಹಳ ಹಿಂದೆಯೇ ಪ್ರಧಾನಿ ಕಿವಿಮಾತು ಹೇಳಿದ್ದರು. 

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ಮೋದಿ ಮೌನಕ್ಕೆ ರಾಹುಲ್‌ಗಾಂಧಿ ಸಿಡಿಮಿಡಿ

ರಾಹುಲ್‌ ಇನ್ನೂ ಒಬ್ಬ ಬಾಲಕ. ಅವರಿಗೆ ಓಡುವುದನ್ನು ಎಲ್ಲರೂ ನಾವು ಪ್ರೋತ್ಸಾಹಿಸಬೇಕು. ಆದರೆ ಜನರೇ ಅವರನ್ನು ತಿರಸ್ಕರಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ರಾಹುಲ್‌ ಗಾಂಧಿ ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವ ಮೂಲಕ ವಯನಾಡ್‌ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ನಿಜವಾಯ್ತು ಮೋದಿ ಭವಿಷ್ಯಖ!

ನವದೆಹಲಿ: ಕೇರಳದ ವಯನಾಡಿನಿಂದ ಕಣಕ್ಕೆ ಇಳಿದಿರುವ ರಾಹುಲ್‌ ಗಾಂಧಿ ಈ ಬಾರಿ ಮತ್ತೊಂದು ಹೊಸ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಕುರಿತು ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ‘ಸುವರ್ಣ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ, ‘ಕಾಂಗ್ರೆಸ್‌ನ ಯುವರಾಜ ಉತ್ತರದಿಂದ ಓಡಿಬಂದು ದಕ್ಷಿಣದ ವಯನಾಡಿಗೆ ಬಂದಿದ್ದಾರೆ. 26ನೇ ತಾರೀಖು ವಯನಾಡು ಮತದಾನ ಮುಗಿದ ಮೇಲೆ ಅವರು ಇನ್ನೊಂದು ಕ್ಷೇತ್ರಕ್ಕಾಗಿ ಹುಡುಕಾಟ ಮಾಡುತ್ತಾರೆ. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ’ ಎಂದು ಹೇಳಿದ್ದರು.

ಪ್ರಜ್ವಲ್‌ ರೇವಣ್ಣನಿಂದ 400 ಮಹಿಳೆಯರ ಮೇಲೆ ಅತ್ಯಾಚಾರ: ರಾಹುಲ್‌ ಗಾಂಧಿ ಆರೋಪ