ಯತೀಂದ್ರ ಸಿದ್ದರಾಮಯ್ಯ ಸಂಸ್ಕೃತಿ ಏನು ಸಾಬೀತು: ಪ್ರಲ್ಹಾದ್ ಜೋಶಿ
ಕೇಂದ್ರದ ಗೃಹ ಸಚಿವ ಅಮಿತ್ ಶಾ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವಾಚ್ಯ, ಅಸಭ್ಯವಾಗಿ ಮಾತನಾಡುವ ಮೂಲಕ ಅವರ ಸಂಸ್ಕೃತಿ ಏನು ಎಂಬುದನ್ನು ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ (ಮಾ.29): ಕೇಂದ್ರದ ಗೃಹ ಸಚಿವ ಅಮಿತ್ ಶಾ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವಾಚ್ಯ, ಅಸಭ್ಯವಾಗಿ ಮಾತನಾಡುವ ಮೂಲಕ ಅವರ ಸಂಸ್ಕೃತಿ ಏನು ಎಂಬುದನ್ನು ತೋರಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯತೀಂದ್ರ ಮಾತು ಗಮನಿಸಿದರೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತಿದೆ. ಹಿಂದೆ ಅಮಿತ್ ಶಾ ಅವರ ಮೇಲೆ ಕಾಂಗ್ರೆಸ್ ಪಕ್ಷ ಸುಳ್ಳು ಪ್ರಕರಣ ದಾಖಲಿಸಿತ್ತು.
ಈಗ ಎಲ್ಲ ಪ್ರಕರಣಗಳನ್ನು ಕೋರ್ಟ್ ತಿರಸ್ಕರಿಸಿದ್ದು, ಅವರು ಸಂಪೂರ್ಣವಾಗಿ ದೋಷ ಮುಕ್ತರಾಗಿದ್ದಾರೆ ಎಂದರು. ಕಾಂಗ್ರೆಸ್ಸಿನವರು ನಲಪಾಡ್‌ನಂಥವನನ್ನು ತಮ್ಮ ಪಕ್ಷದಲ್ಲಿಟ್ಟುಕೊಂಡು ಗೂಂಡಾಗಿರಿ ಬಗ್ಗೆ ಮಾತನಾಡುತ್ತಾರೆ. ಈ ರೀತಿ ಅನೇಕರು ಕಾಂಗ್ರೆಸ್‌ನಲ್ಲಿದ್ದಾರೆ. ದೇಶ ಕಂಡ ಅತ್ಯಂತ ದಕ್ಷ ಗೃಹಮಂತ್ರಿ ಅಮಿತ್ ಶಾ ಅವರ ಬಗ್ಗೆ ಮಾತನಾಡಿರುವುದು ಅವರ ನಾಲಿಗೆಯ ಸಂಸ್ಕೃತಿ ಹೇಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಸಚಿವ ಮಧು ಬಂಗಾರಪ್ಪ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ: ಬಿ.ವೈ.ರಾಘವೇಂದ್ರ
ಆರ್ಟಿಕಲ್ 370 ಇತ್ಯಾದಿಗಳನ್ನು ನಾವು ಸಂವಿಧಾನತ್ಮವಾಗಿ ಮಾಡಿದ್ದೇವೆ. ಸಂವಿಧಾನಕ್ಕೆ ಎಂದಿಗೂ ಕಾಂಗ್ರೆಸ್ಸಿನವರು ಗೌರವ ನೀಡಿಲ್ಲ. ಬದಲಾಗಿ ಕತ್ತುಹಿಸುಕಿದವರು. ನಾವು ಸಂವಿಧಾನದ ದಿನವನ್ನು ಆಚರಣೆಗೆ ತಂದಿದ್ದೇವೆ. ಆದರೆ, ಕಾಂಗ್ರೆಸ್ಸಿನವರು ಸಂವಿಧಾನದ ಬದಲಾವಣೆಯ ಅಪಪ್ರಚಾರ ಮಾಡುತ್ತಿದ್ದಾರೆ. ಜನತೆ ಪ್ರಜ್ಞಾವಂತರಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೋಶಿ ಪರ ವೀರಶೈವ ಲಿಂಗಾಯತ ಶಾಸಕರ ಬ್ಯಾಟಿಂಗ್: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಗ್ಗೆ ದಿಂಗಾಲೇಶ್ವರ ಶ್ರೀಗಳು ಆಡಿರುವ ಮಾತುಗಳು ತಪ್ಪು ತಿಳಿವಳಿಕೆಯಿಂದ ಕೂಡಿವೆ ಎಂದು ವೀರಶೈವ ಲಿಂಗಾಯತ ಶಾಸಕರಾದ ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ ಹಾಗೂ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ. ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೋಶಿ ಅವರು ದಿಂಗಾಲೇಶ್ವರ ಶ್ರೀ ಸೇರಿದಂತೆ ಎಲ್ಲ ಮಠ ಮಾನ್ಯಗಳ ಶ್ರೀಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ.
ಜಲಮಂಡಳಿ ಬಳಿ ನೀರೂ ಇಲ್ಲ, ಹಣವೂ ಇಲ್ಲ: ಆದರೂ ಕೆರೆಗೆ ನೀರು!
ದಿಂಗಾಲೇಶ್ವರ ಶ್ರೀಗಳಿಗೆ ಯಾವುದೋ ವಿಷಯವಾಗಿ ತಪ್ಪು ತಿಳಿವಳಿಕೆಯಾಗಿರಬಹುದು. ಈ ಬಗ್ಗೆ ಶ್ರೀಗಳ ಜತೆಗೆ ಮಾತಾಡಿ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ನಾಡಿನ ಈ ಭಾಗವಷ್ಟೇ ಅಲ್ಲ, ರಾಷ್ಟ್ರದ ಹಿತ ಕಾಯುವ ಕೆಲಸವನ್ನು ಜೋಶಿ ಮಾಡುತ್ತಿದ್ದಾರೆ. ಜೋಶಿ ಅವರು ಶುದ್ಧ ನಡೆ ಹಾಗೂ ನಮ್ಮ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಕೇಂದ್ರ ಮತ್ತು ರಾಜ್ಯಕ್ಕೆ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾರೆ. ನಾವೂ ಕೂಡಾ ಕಳೆದ 20 ವರ್ಷಗಳಿಂದ ಸಮೀಪವರ್ತಿಗಳಾಗಿ ಅವರನ್ನು ನೋಡುತ್ತಾ ಬಂದಿದ್ದೇವೆ. ಹಾಗೂ ಅವರೊಂದಿಗೆ ಕೂಡಿಕೊಂಡು ಕಾರ್ಯ ಮಾಡಿದ್ದೇವೆ. ಅವರೆಂದೂ ಯಾವುದೇ ಭೇದ ಭಾವ ಮಾಡಿಲ್ಲ ಎಂದರು.