ಬಿಹಾರದ 8, ಉತ್ತರ ಪ್ರದೇಶ 14, ಒಡಿಶಾ 6, ಪಶ್ಚಿಮ ಬಂಗಾಳದ 8, ಜಾರ್ಖಂಡ್‌ 4, ದೆಹಲಿಯ ಎಲ್ಲಾ 7 ಕ್ಷೇತ್ರಗಳು, ಹರ್ಯಾಣದ ಎಲ್ಲಾ 10 ಕ್ಷೇತ್ರಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ 1 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. 

ನವದೆಹಲಿ(ಮೇ.24): ಲೋಕಸಭೆಯ 6ನೇ ಹಂತದ ಚುನಾವಣೆ ಮೇ 25ರಂದು ನಡೆಯಲಿದೆ. ಈ ಹಂತದಲ್ಲಿ 6 ರಾಜ್ಯ, 2 ಕೇಂದ್ರಾಡಳಿ ಪ್ರದೇಶಗಳ 58 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 889 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಗುರುವಾರಕ್ಕೆ ಅಂತ್ಯವಾಗಿದೆ.

ಬಿಹಾರದ 8, ಉತ್ತರ ಪ್ರದೇಶ 14, ಒಡಿಶಾ 6, ಪಶ್ಚಿಮ ಬಂಗಾಳದ 8, ಜಾರ್ಖಂಡ್‌ 4, ದೆಹಲಿಯ ಎಲ್ಲಾ 7 ಕ್ಷೇತ್ರಗಳು, ಹರ್ಯಾಣದ ಎಲ್ಲಾ 10 ಕ್ಷೇತ್ರಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ 1 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಪ್ರಮುಖವಾಗಿ ಮನೇಕಾ ಗಾಂಧಿ, ಮೆಹಬೂಬ್‌ ಮಫ್ತಿ, ಸಂಬಿತ್‌ ಪಾತ್ರ, ಸುಶೀಲ್‌ ಗುಪ್ತಾ, ಅಗ್ನಿಮಿತ್ರಾ ಪೌಲ್‌, ಜೂನ್ ಮಲಿಯಾ, ಅಭಿಜಿತ್‌ ಗಂಗೋಪಾಧ್ಯಾಯ, ಸೋಮನಾಥ್‌ ಭರ್ತಿ, ಮನೋಜ್‌ ತಿವಾರಿ ಸೇರಿದಂತೆ ಅನೇಕರು ಕಣದಲ್ಲಿದ್ದಾರೆ.

ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ 40 ವರ್ಷದ ನಂತರ ದಾಖಲೆಯ ವೋಟಿಂಗ್ ಕೊಟ್ಟ ಸೂಚನೆ ಏನು..?

ಈ ಹಂತ ಮುಕ್ತಾಯಗೊಂಡರೆ ಇನ್ನೊಂದು ಹಂತ ಮಾತ್ರ ಬಾಕಿ ಉಳಿಯಲಿದೆ. ಜೂ.4ರಂದು ಎಲ್ಲಾ 7 ಹಂತಗಳ ಫಲಿತಾಂಶ ಪ್ರಕಟವಾಗಲಿದೆ.

5ನೇ ಹಂತ: ಶೇ. 62.2ರಷ್ಟು ಮತದಾನ

ನವದೆಹಲಿ: ಮೇ 20 ರಂದು ನಡೆದ 5ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ. 62.2ರಷ್ಟು ಮತದಾನವಾಗಿದೆ. ಇದರಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಪ್ರಮಾಣ ಅಧಿಕ ಎಂದು ಗುರುವಾರ ಚುನಾವಣಾ ಆಯೋಗ ತಿಳಿಸಿದೆ.

8 ರಾಜ್ಯಗಳಲ್ಲಿ 49 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಪುರುಷ ಮತದಾನ ಪ್ರಮಾಣ ಶೇ.61.48 ರಷ್ಟು ಇದ್ದರೆ, ಮಹಿಳಾ ಮತದಾನ ಪ್ರಮಾಣ ಶೇ.63 ರಷ್ಟಿದೆ. ಬಿಹಾರ, ಜಾರ್ಖಂಡ್‌, ಲಡಾಖ್‌, ಒಡಿಶಾ ಹಾಗೂ ಉತ್ತರ ಪ್ರದೇಶದಲ್ಲಿ ಮಹಿಳಾ ಮತದಾರರ ಮತ ಚಲಾವನೆ ಪ್ರಮಾಣ ಅಧಿಕವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.