ಕೈತಪ್ಪಿದ ಬಿಜೆಪಿ ಟಿಕೆಟ್ ಕಾಂಗ್ರೆಸ್ ಸೇರ್ತಾರಾ ಸಂಗಣ್ಣ ಕರಡಿ? ಮುಂದಿನ ನಡೆ ಏನು?
ಮುಂದಿನ ರಾಜಕೀಯ ನಿರ್ಧಾರದ ಕುರಿತು ಗುರುವಾರ ಮಾ 21 ರಂದು ಬೆಂಬಲಿಗರ ಸಭೆ ಕರೆದಿದ್ದೇನೆ.ಸಭೆಯ ನಂತರ ಮುಂದಿನ ರಾಜಕೀಯ ನಡೆ ಏನೆಂಬುದು ತಿಳಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.
ಕೊಪ್ಪಳ (ಮಾ.20): ಮುಂದಿನ ರಾಜಕೀಯ ನಿರ್ಧಾರದ ಕುರಿತು ಗುರುವಾರ ಮಾ 21 ರಂದು ಬೆಂಬಲಿಗರ ಸಭೆ ಕರೆದಿದ್ದೇನೆ.ಸಭೆಯ ನಂತರ ಮುಂದಿನ ರಾಜಕೀಯ ನಡೆ ಏನೆಂಬುದು ತಿಳಿಸುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.
ಇಂದು ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದ ಡಾ ಬಸವರಾಜ ಅವರಿಗೆ ಶುಭ ಕೋರುತ್ತೇವೆ. 8 ವಿಧಾನ ಸಭಾ ಕ್ಷೇತ್ರದ ಮುಖಂಡರು ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಎಲ್ಲಾ ಕಡೆ ಒಂದೇ ಕೂಗು ಅನ್ಯಾಯವಾಗಿದೆ ಅನ್ನೋದು. ದೊಡ್ಡನಗೌಡರಿಗೆ 2-3 ರಾಜ್ಯ ಮುಖಂಡ ಅವಮಾನ ಮಾಡಿದ್ದಾರೆ. ಕನಿಷ್ಟ ಸಾಂತ್ವಾನದ ಮಾತೂ ಹೇಳಿಲ್ಲ ಎಂದು ರಾಜ್ಯ ನಾಯಕರ ವಿರುದ್ಧ ಸಂಸದ ಸಂಗಣ್ಣ ಕರಡಿ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಕೇಳಿದ ಮೂರು ಪ್ರಶ್ನೆಗೆ ಇನ್ನೂ ಉತ್ತರವಿಲ್ಲ. ಹೀಗಾಗಿ ನಾನು ಗುರುವಾರ ಕಾರ್ಯಕರ್ತರ ಸಭೆ ಕರೆಯುತ್ತೇನೆ. ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುತ್ತೇನೆ. ಟಿಕೆಟ್ ವಿಚಾರವಾಗಿ ಆರ್ ಅಶೋಕ, ವಿಜಯೇಂದ್ರ, ಯಡಿಯೂರಪ್ಪ. ಬೊಮ್ಮಾಯಿ ನನ್ನೊಂದಿಗೆ ಮಾತನಾಡಬೇಕಿತ್ತು. ಅದರೆ ಟಿಕೆಟ್ ಯಾಕೆ ತಪ್ಪಿದೆ ಎಂಬ ಬಗ್ಗೆ ಇದುವರೆಗೆ ಯಾರೂ ಪ್ರತಿಕ್ರಿಯಿಸಿಲ್ಲ. ಟಿಕೆಟ್ ಕೈತಪ್ಪಲು ಕಾರಣ ಯಾರು ಎಂಬ ಬಗ್ಗೆ ಉತ್ತರಿಸಿಲ್ಲ. ನನಗೆ ರಾಜಕೀಯ ಬಿಟ್ಟು ಬೇರೆ ಗೊತ್ತಿಲ್ಲ. ನಾನು ಆರೋಗ್ಯವಾಗಿರುವವವರೆಗೂ ರಾಜಕೀಯದಲ್ಲಿರುತ್ತೇನೆ
ಬಿಜೆಪಿಗೆ ಋಣಿಯಾಗಿದ್ದೇನೆ. ಜಿಲ್ಲೆಯ ಮುಖಂಡರ ಮೂಲಕ ಲಾಭಿ ಮಾಡಿ ನನಗೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹೈಕಮಾಂಡ್ ನಡೆ ನನಗೆ ಹರ್ಟ್ ಆಗಿದೆ. ಟಿಕೆಟ್ ಸಿಗುತ್ತದೆಂದು ನಾನು ನಂಬಿದ್ದೆ ಆದರೆ ನಂಬಿದವರೇ ಕೈಬಿಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಮಾಡಿರುವೆ. ಹೈವೇಗೆ 2500 ಕೋಟಿ ರೂಪಾಯಿ, 2 ಸಾವಿರ ಕೋಟಿ ಮಹಿಬೂಬನಗರ ಮುನಿರಾಬದ್ ಸಿಂಧನೂರುವರೆಗೆ ರೈಲ್ವೆ ಓಡುತ್ತಿವೆ. 57 ಕಿಮೀ ಪೂರ್ಣವಾಗಿ ಗದಗ ವಾಡಿ ರೈಲ್ವೆ ಕಾಮಗಾರಿ ಪೂರ್ಣವಾಗಿದೆ, 403 ಕೋಟಿ ಸಿಂಧನೂರು ಮಸ್ಕಿಗೆ ಬೈಪಾಸ್ ಮಂಜೂರಾಗಿದೆ, ನಾನು
ನಿರಂತರವಾಗಿ ಕೆಲಸ ಮಾಡಿ ಜನರ ಆಶೀರ್ವಾದಕ್ಕೆ ಚ್ಯುತಿ ಮಾಡದಂತೆ ಕೆಲಸ ಮಾಡಿದ್ದೇನೆ. ಆದರೂ ನನಗೆ ಟಿಕೆಟ್ ಕೈತಪ್ಪಿದೆ. ಇದರಿಂದ ನನಗೆ ಮನಸಿಗೆ ನೋವಾಗಿದೆ ಎಂದರು.
ಕಾಂಗ್ರೆಸ್ ಸೇರುವ ಪ್ರಶ್ನೆ ಇಲ್ಲ:
ನಾನು ಗುರುವಾರ ಸಭೆ ಕರೆದಿದ್ದೇನೆ ಸಭೆ ಬಳಿಕ ಮುಂದಿನ ನಿರ್ಧಾರ ಮಾಡುತ್ತೇನೆ. ಕಾಂಗ್ರೆಸ್ ಸೇರುವ ಪ್ರಶ್ನೆ ಇಲ್ಲ. ಗುರುವಾರ ಕರೆದ ಸಭೆ ಬಿಜೆಪಿಯದು
ಅಲ್ಲಿ ಬೆಂಬಲಿಗರು. ಕಾಂಗ್ರೆಸ್ ಸೇರಬೇಕೋ, ಪಕ್ಷೇತರ ಸ್ಪರ್ಧೆ ಮಾಡಬೇಕೋ ಎಂಬ ಬಗ್ಗೆ ನಿರ್ಧಾರ ಮಾಡ್ತಾರೆ. ಈ ಕುರಿತು ಪರಾಮರ್ಶೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನಗೆ ಆಗಿದ್ದು ಬೇರೆಯವರಿಗೆ ಆಗಬಾರದು ಎಂದರು.