ಮಗ ಕಲಿತು ಫಾರಿನ್‌ಗೆ ಹೋಗ್ಬಹುದಿತ್ತು ಸಮಾಜ ಸೇವೆಗೆ ಬಂದಿದ್ದಾರೆ; ಮಗನ ಕೈ ಬಲಪಡಿಸಿ: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಮನೆ ಮಗನಿಗೆ ವೋಟ್ ನೀಡಿ, ಮನೆ ಮಗನ ಕೈ ಬಲಪಡಿಸಿ ಎಂದು ಎಲ್ಲಾ ಕಡೆ ಕೇಳುತ್ತಿದ್ದೇವೆ. ಬೆಳಗಾವಿಗೆ ಕೊಟ್ಟಂತ ನಮ್ಮ ಕೊಡುಗೆ ಬಗ್ಗೆ ಕೇಳ್ತಿದ್ದೇವೆ. ಇದು ಬಿಜೆಪಿ ವಿರುದ್ಧ ಅಸ್ತ್ರ ಅನ್ನೋದಕ್ಕಿಂತ ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನುಡಿದರು.
ಬೆಳಗಾವಿ (ಮಾ.26): ಬೆಳಗಾವಿ ಮನೆ ಮಗನಿಗೆ ವೋಟ್ ನೀಡಿ, ಮನೆ ಮಗನ ಕೈ ಬಲಪಡಿಸಿ ಎಂದು ಎಲ್ಲಾ ಕಡೆ ಕೇಳುತ್ತಿದ್ದೇವೆ. ಬೆಳಗಾವಿಗೆ ಕೊಟ್ಟಂತ ನಮ್ಮ ಕೊಡುಗೆ ಬಗ್ಗೆ ಕೇಳ್ತಿದ್ದೇವೆ. ಇದು ಬಿಜೆಪಿ ವಿರುದ್ಧ ಅಸ್ತ್ರ ಅನ್ನೋದಕ್ಕಿಂತ ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನುಡಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನಮ್ಮ ಮಕ್ಕಳು ಕಲಿತು ಫಾರಿನ್‌ಗೆ ಹೋಗಬಹುದಿತ್ತು ಆದ್ರೆ ಸಮಾಜ ಸೇವೆಗೆ ಬಂದಿದ್ದಾರೆ ಎಂದರು.
ಸತೀಶ್ ಪುತ್ರಿ, ಲಕ್ಷ್ಮಿ ಪುತ್ರನಿಗೆ ಕೈ ಟಿಕೆಟ್, ಜಾರಕಿಹೊಳಿ- ಹೆಬ್ಬಾಳ್ಕರ್ ಕುಟುಂಬದ ಎರಡನೇ ತಲೆಮಾರು ರಾಜಕೀಯಕ್ಕೆ!
ಇದೇ ವೇಳೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಸಣ್ಣ ವಯಸ್ಸಿ ಹುಡುಗನನ್ನ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ ಎಂಬ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಸಚಿವೆ, ಹದಿನಾರನೇ ವಯಸ್ಸಿನಲ್ಲಿ ಗಡಿ ಕಾಯಲು ಯುವಕರು ಸಂದರ್ಶನ ಕೊಡ್ತಾರೆ. ಹದಿನೆಂಟನೇ ವಯಸ್ಸಿಗೆ ಮತದಾನದ ಹಕ್ಕು ಕೊಡ್ತೇವಿ. 29ನೇ ವಯಸ್ಸಿನ ಮಗ ಯಾರಾದರೂ ಚಿಕ್ಕವನು ಅಂದ್ರೆ ಜನ ನಗ್ತಾರೆ. ಮತದಾರರು ದಡ್ಡರಲ್ಲ ಬಹಳ ಬುದ್ಧಿವಂತರಿದ್ದಾರೆ. ಯಾರು ಸಣ್ಣವರು, ಯಾರು ದೊಡ್ಡವರು, ಯಾರನ್ನ ಆಯ್ಕೆ ಮಾಡಬೇಕು ಅವರಿಗೆ ಗೊತ್ತಿದೆ ಎಂದರು. ಮುಂಬರುವ ದಿನಗಳಲ್ಲಿ ಬಿಜೆಪಿಯಲ್ಲಿ ಹೊರಗಿನವರ ಎಫೆಕ್ಟ್ ಕಾಡುತ್ತೆ. ಇದನ್ನ ನಾವು ಹೇಳ್ತಿಲ್ಲ ಅವರ ಪಕ್ಷದವರೇ ವಿರೋಧ ಮಾಡ್ತಿದ್ದಾರೆ