Asianet Suvarna News Asianet Suvarna News

ಎಚ್‌ಡಿಕೆ ಬಳಿ ಇದೆ ಕೋಟ್ಯಂತರ ರೂಪಾಯಿ ಆಸ್ತಿ! ಪತಿಗಿಂತ ಪತ್ನಿಯೇ ಶ್ರೀಮಂತೆ! ಒಟ್ಟು ಆಸ್ತಿ ವಿವರ ಇಲ್ಲಿದೆ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಿಂದ ರಾಷ್ಟ್ರರಾಜಕಾರಣದತ್ತ ಮುಖಮಾಡಿದ್ದಾರೆ.  ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಉಮೇದುರಾರಿಕೆ ಅಫಿಡವಿಟ್ ತಮ್ಮ ಆಸ್ತಿ ವಿವರ ಸಹ ಘೋಷಿಸಿಕೊಂಡಿದ್ದು, ಒಟ್ಟು ಆಸ್ತಿ ವಿವರ ಇಲ್ಲಿದೆ

Lok sabha election 2024 Mandya NDA candidate HD Kumaraswamy Property details Declaration rav
Author
First Published Apr 4, 2024, 7:37 PM IST

ಮಂಡ್ಯ (ಏ.4): ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಿಂದ ರಾಷ್ಟ್ರರಾಜಕಾರಣದತ್ತ ಮುಖಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಉಮೇದುರಾರಿಕೆ ಅಫಿಡವಿಟ್ ತಮ್ಮ ಆಸ್ತಿ ವಿವರ ಸಹ ಘೋಷಿಸಿಕೊಂಡಿದ್ದು, ಬರೋಬ್ಬರಿ 217.21 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅತ್ತಿಗೆ ಭವಾನಿ ರೇವಣ್ಣರಿಂದ 3.26 ಲಕ್ಷ ರೂ ಸಾಲ ಹಾಗೂ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರನಿಂದಲೂ ಎಚ್‌ಡಿ ಕುಮಾರಸ್ವಾಮಿ ಸಾಲ ಪಡೆದಿದ್ದಾರೆ. ಲೋಕಾಯುಕ್ತ, ಕ್ರಿಮಿನಲ್, ಸಿವಿಲ್ ಪ್ರಕರಣ ಎದುರಿಸುತ್ತಿದ್ದು, ಲೋಕಾಯುಕ್ತದಲ್ಲಿ ವಿಚಾರಣೆ ಹಂತದಲ್ಲಿರುವ 3 ಪ್ರಕರಣಗಳು ಇರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಪತ್ನಿ ಅನಿತಾ ಕುಮಾರಸ್ವಾಮಿಯವರು ಪತಿಗಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ ಎಂದರೆ ನಂಬಲೇಬೇಕು. ಹಾಗಾದರೆ ಎಚ್‌ಡಿ ಕುಮಾರಸ್ವಾಮಿ ಕುಟುಂಬದ ಒಟ್ಟು ಆಸ್ತಿ ಎಷ್ಟು? ಏನೇನಿವೆ ಇಲ್ಲಿದೆ ವಿವರ.

ಮೈಸೂರು ಮಹಾರಾಜ ಯದುವೀರ ಒಡೆಯರ ಬಳಿ 4.99 ಕೋಟಿ ಆಸ್ತಿಯಿದ್ದರೂ, ಸ್ವಂತಕ್ಕೊಂದು ಮನೆ, ಕಾರು ಇಲ್ಲ!

ಕುಟುಂಬದ ಒಟ್ಟು ಚರಾಸ್ತಿ 102.23 ಕೋಟಿ ರೂ, ಒಟ್ಟು ಸ್ಥಿರಾಸ್ತಿ-114.98 ಕೋಟಿ ರೂಪಾಯಿಗಳಾಗಿದ್ದು ಒಟ್ಟು -217.21 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಇದು ಕಳೆದ ವರ್ಷಕ್ಕಿಂತ ಎಚ್‌ಡಿಕೆ ಆಸ್ತಿ ಮೌಲ್ಯ 50.07 ಹೆಚ್ಚಳವಾಗಿರುವುದು ವಿಶೇಷ.

ಎಚ್‌ಡಿ ಕುಮಾರಸ್ವಾಮಿ ಆಸ್ತಿ ವಿವರ:

ಒಟ್ಟು: ₹62.82 ಕೋಟಿ 

  • ಚರಾಸ್ತಿ- ₹10.71 ಕೋಟಿ 
  • ಸ್ತಿರಾಸ್ತಿ- ₹43.94 ಕೋಟಿ
  • ವಿವಿಧ ಕಡೆ ಸಾಲ - ₹19.12ಕೋಟಿ.
  • ₹6.97 ಕೋಟಿ ಹೆಚ್ಡಿಕೆ(HUF)
  • 1.20 ಕೋಟಿ ಹೆಚ್ಡಿಕೆ(HUF)
  • ₹47 ಲಕ್ಷ ಮೌಲ್ಯದ 750 ಗ್ರಾಂ ಚಿನ್ನಾಭರಣ. 
  • ₹9.62ಲಕ್ಷ ಮೌಲ್ಯದ 12.5ಕೆಜಿ ಬೆಳ್ಳಿ.
  • ₹ 2.60ಲಕ್ಷ ಮೌಲ್ಯದ 4 ಕ್ಯಾರೆಟ್ ವಜ್ರ. 

ಷೇರು ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಹಣ ಹಾಕಿರುವ ರಾಹುಲ್‌, ಐದು ವರ್ಷದಲ್ಲಿ ಆಸ್ತಿ 5 ಕೋಟಿ ಏರಿಕೆ!

ಪತ್ನಿ ಅನಿತಾ ಕುಮಾರಸ್ವಾಮಿ ಆಸ್ತಿ ಹೀಗಿದೆ 

ಒಟ್ಟು ಆಸ್ತಿ ₹154.39 ಕೋಟಿ

  • ಚರಾಸ್ತಿ- ₹90.32 ಕೋಟಿ.
  • ಸ್ತಿರಾಸ್ತಿ-  ₹64.07 ಕೋಟಿ.
  • ಸಾಲ-  ₹63.05 ಕೋಟಿ.
  • ₹2.41ಕೋಟಿ ಮೌಲ್ಯದ 3.8ಕೆಜಿ ಚಿನ್ನಾಭರಣ. 
  • ₹13 ಲಕ್ಷ ಮೌಲ್ಯದ 17 ಕೆಜಿ ಬೆಳ್ಳಿ.
  • ₹33ಲಕ್ಷ ಮೌಲ್ಯದ 50 ಕ್ಯಾರೆಟ್ ಡೈಮಂಡ್.
Follow Us:
Download App:
  • android
  • ios