ಯಾವ ರಾಜಕೀಯ ನಾಯಕರೂ ಮಂಡ್ಯದಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ: ಎಚ್‌ಡಿ ಕುಮಾರಸ್ವಾಮಿ
ನಾನು ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಮಾಜಿ ಮುಖ್ಯಮಂತ್ರಿ, ಮಂಡ್ಯ ಜಿಲ್ಲೆ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಮಂಡ್ಯ (ಏ.1): ನಾನು ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಮಾಜಿ ಮುಖ್ಯಮಂತ್ರಿ, ಮಂಡ್ಯ ಜಿಲ್ಲೆ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಮಂಡ್ಯ ಜನರು ಈಗಾಗಲೇ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಯಾವ ರಾಜಕೀಯ ನಾಯಕರು ಮಂಡ್ಯ ಜಿಲ್ಲೆಯಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ. ಹಲವು ಜಿಲ್ಲೆಗಳಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ನನ್ನನ್ನು ಪ್ರಚಾರಕ್ಕೆ ಕರೆಯುತ್ತಿದ್ದಾರೆ. ಸಾಕಷ್ಟು ಕಡೆ ನಾನು ಹೋಗಬೇಕಾದ ಅನಿವಾರ್ಯವಿದೆ. ಈ ನಡುವೆ ನನ್ನ ಆರೋಗ್ಯ ಚೇತರಿಕೆ ಆಗ್ತಾ ಇದೆ ಎಂದರು.
'ಈ ಮೋಕ ನಂದು ಗೆದ್ದುಕೋ ನೋಡೋಣ..' ಶ್ರೀರಾಮುಲು ವಿರುದ್ಧ ಸಿನಿಮಾ ಶೈಲಿಯಲ್ಲಿ ಸೆಡ್ಡು ಹೊಡೆದ ಸಚಿವ ನಾಗೇಂದ್ರ!
ಜೆಡಿಎಸ್ ಈಗ ಮುಗಿದೇ ಹೋಯ್ತು ಎಂದು ಕೆಲವರು ಹೇಳ್ತಾರೆ. ಆದರೆ ನಮ್ಮ ಕಾರ್ಯಕರ್ತರು ನಮಗೆ ಯಾರೂ ಅನ್ಯಾಯ ಮಾಡಿಲ್ಲ. ಎಲ್ಲರಿಗೂ ನಮ್ಮ ಪಕ್ಷದ ಪರ ಒಲವು ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ 4 ಕ್ಷೇತ್ರಗಳನ್ನಾದ್ರು ಗೆಲ್ಲುತ್ತಿದ್ದೆವು. ಆದರೆ ನಮ್ಮ ಸ್ವಯಂಕೃತ ಅಪಾರಾದಗಳಿಂದ ಸೋತೆವು. ನನ್ನ ಕನಕಪುರ ಸ್ನೇಹಿತ ನನಗೆ ಅಮೃತ ಹಾಕಿದ್ದೇನೆ ಅಂತಾ ಹೇಳ್ತಾನೆ. ಅದ್ಯಾವ ಅಮೃತ ಹಾಕಿದ್ದಾನೋ ಗೊತ್ತಿಲ್ಲ. ಇಂದು ಮಂಡ್ಯಗೆ ಬಂದು ಏನೇನೋ ಹೇಳಿದ್ದಾನೆ. ಏನು ಹೇಳ್ತಾನೋ ಹೇಳಲಿ ಚುನಾವಣೆಯಲ್ಲಿ ಜನರು ಉತ್ತರ ಕೊಡ್ತಾರೆ ಎಂದು ಡಿಕೆ ಶಿವಕುಮಾರ ವಿರುದ್ಧ ಕಿಡಿಕಾರಿದರು.
ಪೇಪರ್ ಪೆನ್ನು ಕೇಳಿದ್ದೆ, ಜನರು ಕೊಟ್ಟಿದ್ದಾರೆ. ಈಗ ಏನು ಮಾಡ್ತಾ ಇದ್ದೀಯಾ. ಮೇಕೆದಾಟು ಯೋಜನೆ ಏನ್ ಆಯ್ತು. ಈಗ ಬಿಜೆಪಿ ಸಂಸದರ ಕಡೆ ಬೊಟ್ಟು ಮಾಡಿ ತೋರಿಸ್ತಿದ್ದಾರೆ. ದೇವೇಗೌಡರು ಇನ್ನೂ ಸಹ ಬದುಕಿದ್ದಾರೆ. ನೀರಾವರಿ ವಿಚಾರದಲ್ಲಿ ಇನ್ನೂ ಅಭಿವೃದ್ಧಿ ಮಾಡುತ್ತೇವೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಎರಡು ಮೂರು ಕ್ಷೇತ್ರ ಗೆಲ್ಲೋದು ಮುಖ್ಯ ಅಲ್ಲ, ನಮ್ಮ ರಾಜ್ಯಕ್ಕೆ ಆಗಿರುವ ನೀರಾವರಿ ವಿಚಾರದಲ್ಲಿನ ಅನ್ಯಾಯವನ್ನು ಸರಿ ಪಡಿಸಲು ಚುನಾವಣೆಗೆ ನಿಂತಿದ್ದೇವೆ ಎಂದರು.
ಸೋಮಣ್ಣರನ್ನ ತುಮಕೂರು ಅಭ್ಯರ್ಥಿ ಅನ್ನುವ ಬದಲು 'ಪಾರ್ಲಿಮೆಂಟ್ ಮೆಂಬರ್' ಎಂದ ಸಿಎಂ!
ಕನಕಪುರದ ನನ್ನ ಸ್ನೇಹಿತ ಜೆಡಿಎಸ್ ಮುಳುಗಿದೆ, ಕೊನೆ ಆಯ್ತು ಅಂದಿದ್ದಾರೆ. ಆದರೆ ಜೆಡಿಎಸ್ ಮುಳುಗಿಲ್ಲ. ಈಗ ಏಳುತ್ತಿದೆ. ಜೆಡಿಎಸ್‌ನ ತೆನೆ ಹೊತ್ತ ಮಹಿಳೆ ಹಸಿರಿನಿಂದ ಮೆರೆಯುತ್ತಾಳೆ ಮುಂದೆ ಜನರೇ ಆ ಸ್ನೇಹಿತನಿಗೆ ಉತ್ತರ ಕೊಡುವ ಮೂಲಕ ಬುದ್ಧಿ ಕಲಿಸುತ್ತಾರೆ. ಆ ಸ್ನೇಹಿತಾ ಮತ್ತೂ ಹೇಳ್ತಾನೆ, "ನಾವು ನುಡಿದಂತೆ ನಡೆದಿದ್ದೇವೆ' ಅಂತಾ ಇದೆಂಥ ಶುದ್ಧ ಸುಳ್ಳು? ಕೊಟ್ಟ ಎರಡು ಸಾವಿರ ರೂಪಾಯಿದಲ್ಲಿ ಏನು ಮಾಡಿದರು? ಆ ಹಣವೇನು ಇವರ ಅಕೌಂಟ್‌ನಿಂದ ಕೊಟ್ಟಿದ್ದೇ? ಇವರ ಮನೆಯ ದುಡ್ಡೇ? ಜನರ ದುಡ್ಡು ಜನರಿಗೆ ಕೊಟ್ಟು ತಮ್ಮದೆನ್ನುತ್ತಿದ್ದಾರೆ. ಇಂಥ ಉಚಿತ ಯೋಜನೆಗಳಿಂದ ಹೊಸ ಯೋಜನೆ ಮಾಡೋಕೆ ಸರ್ಕಾರಕ್ಕೆ ಆಗತಿಲ್ಲ. ಅಧಿಕಾರಕ್ಕೆ ಬಂದಾಗಿಂದ ಯಾವುದೇ ಆಭಿವೃದ್ಧಿ ಕೆಲಸ ಆಗಿಲ್ಲ. ಆದರೆ ಇವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸೋ ಕಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲದಕ್ಕೂ ಹಣ ಕೊಡಲು ರೆಡಿ ಇದೆ ಆದರೆ ಇವರು ಯೋಜನೆಯನ್ನೇ ಸಿದ್ಧಪಡಿಸಿಲ್ಲ. ಯಾವುದಕ್ಕೆ ಅಂತಾ ಹಣ ಕೊಡುವುದು. ಹಿಂದೆ ಕೊಟ್ಟ ಅನುದಾನ ಏನಾಯ್ತು? ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ ನಿಮಗಾಗಿ ನಾನು ದುಡಿಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.