Asianet Suvarna News Asianet Suvarna News

ಕೇರಳ ಚರ್ಚ್‌ಗಳಲ್ಲಿ 'ದಿ ಕೇರಳ ಸ್ಟೋರಿ' ಚಿತ್ರ ಪ್ರದರ್ಶನ; ಕಾಂಗ್ರೆಸ್ ಸಿಪಿಎಂ ಕಿಡಿ

ಲೋಕಸಭಾ ಚುನಾವಣೆಗೂ ಮುನ್ನ ದೂರದರ್ಶನವು ‘ದ ಕೇರಳ ಲವ್‌ ಸ್ಟೋರಿ’ ಚಿತ್ರ ಪ್ರದರ್ಶನ ಮಾಡಿದ್ದಕ್ಕೆ ಕಾಂಗ್ರೆಸ್‌ ಮತ್ತು ಸಿಪಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಕೇರಳದಲ್ಲಿ ಪ್ರಭಾವಿಯಾಗಿರುವ ಚರ್ಚ್‌ಗಳಲ್ಲಿ ಇದೀಗ ಚಲನಚಿತ್ರ ಯುದ್ಧ ಆರಂಭವಾಗಿದೆ.

Lok sabha election 2024 Kerala church screens Kerala Story to fight love jihad rav
Author
First Published Apr 11, 2024, 6:23 AM IST

ಕೊಚ್ಚಿ (ಏ.11): ಲೋಕಸಭಾ ಚುನಾವಣೆಗೂ ಮುನ್ನ ದೂರದರ್ಶನವು ‘ದ ಕೇರಳ ಲವ್‌ ಸ್ಟೋರಿ’ ಚಿತ್ರ ಪ್ರದರ್ಶನ ಮಾಡಿದ್ದಕ್ಕೆ ಕಾಂಗ್ರೆಸ್‌ ಮತ್ತು ಸಿಪಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಕೇರಳದಲ್ಲಿ ಪ್ರಭಾವಿಯಾಗಿರುವ ಚರ್ಚ್‌ಗಳಲ್ಲಿ ಇದೀಗ ಚಲನಚಿತ್ರ ಯುದ್ಧ ಆರಂಭವಾಗಿದೆ.

ಕೇರಳದಲ್ಲಿ ಸಾವಿರಾರು ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು Keral Love jihad ಮೂಲಕ ಇಸ್ಲಾಂ(Islam) ಗೆ ಸೆಳೆದು ಅವರನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ತಳ್ಳುತ್ತಿರುವ ಅಂಶಗಳನ್ನು ಒಳಗೊಂಡ ‘ದ ಕೇರಳ ಲವ್‌ ಸ್ಟೋರಿ’(The Keral Love story) ಚಿತ್ರವನ್ನು ಸೋಮವಾರ ಕೆಲವು ಚರ್ಚ್‌ಗಳಲ್ಲಿ ಪ್ರದರ್ಶಿಸಲಾಗಿದೆ. 

ಅಣ್ಣಾಮಲೈ ಜೋಕರ್‌ ಎಂದ ದಯಾನಿಧಿ ಮಾರನ್‌ಗೆ ದುರಂಹಕಾರ: ಮೋದಿ ಕಿಡಿ

ವಿಶೇಷವೆಂದರೆ ಕ್ರೈಸ್ತ ಸಂಘಟನೆಗಳೇ ಈ ಪ್ರದರ್ಶನ ಆಯೋಜಿಸಿವೆ. 10,11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರವನ್ನು ತೋರಿಸಿ ಅದರ ಕುರಿತು ಸಣ್ಣ ಲೇಖನ ಬರೆಯಲು ಸೂಚಿಸಲಾಗಿದೆ. ಕಾನೂನಿನಲ್ಲಿನ ಕೆಲವೊಂದು ಲೋಪದೋಷಗಳನ್ನು ಬಳಸಿಕೊಂಡೇ ಕೆಲವೊಂದು ದುಷ್ಟಶಕ್ತಿಗಳು ಸಂಚು ರೂಪಿಸುತ್ತಿವೆ. ಇದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ಈ ಚಿತ್ರದ ಮೂಲಕ ನಾವು ಯುವ ಸಮೂಹದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ.

ಮತ್ತೊಂದೆಡೆ ಕೆಲವು ಸಿರಿಯನ್‌ ಮಲಬಾರ್‌ ಚರ್ಚ್‌ಗಳಲ್ಲಿ ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕಥಾಹಂದರವುಳ್ಳ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗಿದೆ. ಎರ್ನಾಕುಲಂನಲ್ಲಿರುವ ಸಂಜೋಪುರಂ ಸೇಂಟ್‌ ಜೋಸೆಫ್‌ ಚರ್ಚ್‌ನಲ್ಲಿ 125 ಮಕ್ಕಳಿಗೆ ‘ಕ್ರೈ ಆಫ್‌ ದಿ ಆಪ್ರೆಸ್ಡ್‌’ ಸಾಕ್ಷ್ಯಚಿತ್ರ ತೋರಿಸಲಾಗಿದೆ.

ದ್ರಾವಿಡ ನಾಡಿನಲ್ಲಿ ಪ್ರಧಾನಿ ಮೋದಿ ಅಬ್ಬರದ ರೋಡ್​ ಶೋ, 4 ಸ್ಥಾನ ಟಾರ್ಗೆಟ್‌!

ಈ ವೇಳೆ ಮಾತನಾಡಿದ ಫಾದರ್‌ ಜೇಮ್ಸ್‌ ಪನವೆಲಿಲ್‌, ‘ಕೇರಳ ಸ್ಟೋರಿಯಂತಹ ಚಿತ್ರಗಳು ಕೇವಲ ಒಂದು ಸಿದ್ಧಾಂತವನ್ನು ನಂಬಲು ಮತ್ತು ಅದನ್ನು ಬೆಂಬಲಿಸುವಂತೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಂತಹ ಚಿತ್ರಗಳನ್ನು ತೋರಿಸಿಲ್ಲ. ಬದಲಾಗಿ ಮಣಿಪುರದ ಗಲಭೆಯ ಕುರಿತು ಕಥಾಹಂದರವುಳ್ಳ ಸುಮಾರು 15 ನಿಮಿಷದ ಸಾಕ್ಷ್ಯಚಿತ್ರವನ್ನು ಸುಮಾರು 125 ಮಕ್ಕಳಿಗೆ ಪ್ರದರ್ಶಿಸಲಾಗಿದೆ’ ಎಂದು ತಿಳಿಸಿದರು.

Follow Us:
Download App:
  • android
  • ios