ಬಿವೈ ರಾಘವೇಂದ್ರ ಕುಟುಂಬ ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಿದೆ: ಈಶ್ವರಪ್ಪ ಪುತ್ರ ಕಾಂತೇಶ್ ಆಕ್ರೋಶ
ಸಂಸದ ರಾಘವೇಂದ್ರ ಕಳೆದ 15ದಿನಗಳ ಹಿಂದೆ ಫೋನ್ ಮಾಡಿದ್ದರು. ಫೋನ್ ಮಾಡಿ ದೇವರಾಣೆ ನಿನಗೇ ಹಾವೇರಿ ಟಿಕೆಟ್ ಆಗಿದೆ ಅಂದ್ರು. ಆದರೆ ಹಾವೇರಿ ಟಿಕೆಟ್ ಬಸವರಾಜು ಬೊಮ್ಮಾಯಿಗೆ ಘೋಷಣೆ ಆಯ್ತು. ರಾಘವೇಂದ್ರ ಕುಟುಂಬ ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಿದ್ರು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗ (ಏ.2): ಸಂಸದ ರಾಘವೇಂದ್ರ ಕಳೆದ 15ದಿನಗಳ ಹಿಂದೆ ಫೋನ್ ಮಾಡಿದ್ದರು. ಫೋನ್ ಮಾಡಿ ದೇವರಾಣೆ ನಿನಗೇ ಹಾವೇರಿ ಟಿಕೆಟ್ ಆಗಿದೆ ಅಂದ್ರು. ಆದರೆ ಹಾವೇರಿ ಟಿಕೆಟ್ ಬಸವರಾಜು ಬೊಮ್ಮಾಯಿಗೆ ಘೋಷಣೆ ಆಯ್ತು. ರಾಘವೇಂದ್ರ ಕುಟುಂಬ ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಿದ್ರು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಕಾಂತೇಶ್, ಕಳೆದ ಬಾರಿ ವಿಧಾನಸಭೆ ಟಿಕೇಟ್ ಮಿಸ್ ಆಯ್ತು. ವಿಧಾನಸಭೆ ಟಿಕೆಟ್ ಮಿಸ್ ಆದ್ರೂ ಏನಾಯ್ತು, ಹಾವೇರಿ ಲೋಕಸಭೆ ಸಿಗ್ತದೆ ಅಂದುಕೊಂಡೆ. ಆದರೆ ಹಾವೇರಿ ಟಿಕೆಟ್ ಕೂಡ ಕೈತಪ್ಪಿ ಹೋಯ್ತು. ಈಗಲೂ ದೇವರು ನಮಗೆ ಇನ್ನೂ ಒಳ್ಳೆಯ ಸ್ಥಾನ ಕೊಡಬಹುದು ಎಂದುಕೊಂಡಿದ್ದೇವೆ ಎಂದರು.
ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಕೊಟ್ರು, ನಾನೇನು ತಪ್ಪು ಮಾಡಿದೆ?: ಈಶ್ವರಪ್ಪ
ಈಶ್ವರಪ್ಪ ಮಾತನಾಡಿ ನಮಗೆ ಏನೇ ಮೋಸ ಆಗಿದ್ರೂ ಈ ಬಾರಿ ಶಿವಮೊಗ್ಗ ಲೋಕಸಭಾ ಎಂಪಿ ಆಗಬಹುದು. ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಲ್ಲಿ ನಾನು ಕೇಳಿಕೊಳ್ಳುತ್ತೇನೆ. ಕಾಂತೇಶ್ ಮಾಡಿರುವ ತಪ್ಪೇನು? ನಿಮ್ಮ ಮಗ ಒಬ್ಬ ಎಂಪಿ ಇದ್ದಾನೆ, ಇನ್ನೊಬ್ಬ ಶಾಸಕ, ರಾಜ್ಯಾಧ್ಯಕ್ಷನಾಗಿದ್ದಾನೆ. ನಿಮ್ಮ ಮಕ್ಕಳಿಗೆ ಅಧಿಕಾರ ಇರಲಿ ಪರವಾಗಿಲ್ಲ, ನಾನು ಮಾಡಿದ ತಪ್ಪಾದರೂ ಏನು? ದಯವಿಟ್ಟು ತಿಳಿಸಿ ಎಂದು ಬಿಎಸ್‌ವೈ ಕುಟುಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.