Asianet Suvarna News Asianet Suvarna News

'ಯತ್ನಾಳ್ ಎಂದರೆ ಕಾಮಿಡಿ ಮುತ್ಯಾ, ಹುಚ್ಚು ಮುತ್ಯಾ, ಪಾಗಲ್ ಮುತ್ಯಾ..' ವಚನಾನಂದಶ್ರೀ ವ್ಯಂಗ್ಯ

ಯತ್ನಾಳ್ ಎಂದರೇ ಕಾಮಿಡಿ ಮುತ್ಯಾ(ಸಿಎಂ), ಹುಚ್ಚು ಮುತ್ಯಾ(ಹೆಚ್‌ಎಂ), ಪಾಗಲ್ ಮುತ್ಯಾ(ಪಿಎಂ) ಆಗಲಿ ಎಂದು ಪಂಚಮಸಾಲಿ ಪೀಠದ ವಚನಾನಂದಶ್ರೀಗಳು ವ್ಯಂಗ್ಯ ಮಾಡಿದರು.

Lok sabha election 2024 in karnataka Vachananandashree outraged agains basangowda patil yatnal at davanagere rav
Author
First Published May 6, 2024, 7:01 PM IST

ದಾವಣಗೆರೆ (ಮೇ.6): ಯತ್ನಾಳ್ ಎಂದರೇ ಕಾಮಿಡಿ ಮುತ್ಯಾ(ಸಿಎಂ), ಹುಚ್ಚು ಮುತ್ಯಾ(ಹೆಚ್‌ಎಂ), ಪಾಗಲ್ ಮುತ್ಯಾ(ಪಿಎಂ) ಆಗಲಿ ಎಂದು ಪಂಚಮಸಾಲಿ ಪೀಠದ ವಚನಾನಂದಶ್ರೀಗಳು ವ್ಯಂಗ್ಯ ಮಾಡಿದರು.

ಇಂದು ದಾವಣಗೆರೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಮುಂದಿನ ದಿನಗಳಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಅವರನ್ನು ಸಿಎಂ, ಪಿಎಂ, ಹೆಚ್‌ಎಂ ಮಾಡಲಿ ಎಂದು ಹಾರೈಸುವೆ. ಲಡ್ಡುಮುತ್ಯಾ ಬೈಯುವುದರಲ್ಲಿ ಬಹಳ ಪ್ರಚಲಿತ. ಯತ್ನಾಳ್ ಯಾರಿಗೆಲ್ಲ ಬೈದಿದ್ದಾರೋ ಅವರಿಗೆಲ್ಲ ಒಳ್ಳೆಯದೇ ಆಗಿದೆ. ಆದ್ದರಿಂದ ನಮಗೆ ಬೈಯುವದನ್ನು ಮುಂದುವರಿಸಲಿ ಅದರಿಂದ ನಮಗು ಒಳ್ಳೆದಾಗಲಿದೆ ಎನ್ನುವ ಮೂಲಕ ಬಾಗಲಕೋಟೆ ಭಾಗದ ದೈವೀ ಸ್ವರೂಪ ಲಡ್ಡು ಮುತ್ಯಾರಿಗೆ ಹೋಲಿಕೆ ಮಾಡಿದ ವಚನಾನಂದ ಸ್ವಾಮೀಜಿಗಳು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಎಲ್ಲ ಕೈ ನಾಯಕರು ಚೊಂಬು ಹಿಡ್ಕೊಂಡು ಹೋಗ್ತಾರೆ: ಯತ್ನಾಳ್ ವಾಗ್ದಾಳಿ

ಕಳ್ಳಸ್ವಾಮಿ ಮಾತು ಕೇಳಬೇಡಿ ಎಂದಿದ್ದ ಯತ್ನಾಳ್

ಪಂಚಮಸಾಲಿ ಸಮಾಜ ಕೂಡಲ ಸಂಗಮ‌ ಶ್ರೀಗಳಿಗೆ ಋಣಿಯಾಗಿರಬೇಕು. ಬಿಜೆಪಿಗೆ ವೋಟ್ ಹಾಕಬೇಡ ಎಂದು ಇವರಿಗೆ ಯಾರ ಪರ್ಮಿಷನ್ ಕೊಟ್ಟಿದ್ದಾರೆ. ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದು ಹೇಳುವ ಮೂಲಕ ಹರಿಹರ ವಚನಾನಂದ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ವಾಗ್ದಾಳಿ ನಡೆಸಿದ್ದರು.

ಸ್ಮಶಾನದಲ್ಲಿ ಅಡ್ಡಾಡಿದ ಸತೀಶ, ಚುನಾವಣೆಯಲ್ಲಿ ದೇವಸ್ಥಾನಕ್ಕೆ ಬಂದಿದ್ಯಾಕೆ? ಯತ್ನಾಳ್ ಕಿಡಿ

ಅಲ್ಲದೇ ಬಿಜೆಪಿ ಸರ್ಕಾರವಿದ್ದಾಗ ಹಣ ಪಡೆದು ಈಗ ಕಾಂಗ್ರೆಸ್‌ಗೆ ಓಟು ಹಾಕುವಂತೆ ಪ್ರಚಾರ ಮಾಡುತ್ತಿದ್ದಾನೆ. ನಕಲಿ ಸ್ವಾಮಿ, ಬುಕ್ಕಿಂಗ್ ಸ್ವಾಮಿ ಎಂದು ಕಿಡಿಕಾರಿದ್ದರು.

ಒಟ್ಟಿನಲ್ಲಿ ಶಾಸಕ ಯತ್ನಾಳ್ ಹಾಗೂ ವಚನಾನಂದಶ್ರೀಗಳು ನಡುವೆ ಮಾತಿನ ಸಮರ ಮುಂದುವರಿದಿದ್ದು, ಪರಸ್ಪರ ಏಟು-ಎದಿರೇಟು ಎಂಬಂತೆ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

Latest Videos
Follow Us:
Download App:
  • android
  • ios