ದಲಿತ ಕೇರಿಗೆ ಆಗಮಿಸಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಪರವಾಗಿ ಮೈಸೂರು ಮಹಾರಾಜ ಯದುವೀರ್ ಒಡೆಯರ ಮತಯಾಚನೆ ಮಾಡಿದರು. ಜಿಲ್ಲೆಯ ದಲಿತ ಕೇರಿಗೆ ಆಗಮಿಸಿ ಮನೆಮನೆಗೆ ಓಡಾಡಿ ಮತಯಾಚನೆ ಮಾಡಿದರು. ಈ ವೇಳೆ ದಲಿತರ ಮನೆಯಲ್ಲೇ ಎಳನೀರು ಸೇವನೆ ಮಾಡಿ ಸರಳತೆ ಮೆರೆದರು.
ಬಳ್ಳಾರಿ (ಮೇ.4): ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಪರವಾಗಿ ಮೈಸೂರು ಮಹಾರಾಜ ಯದುವೀರ್ ಒಡೆಯರ ಮತಯಾಚನೆ ಮಾಡಿದರು. ಜಿಲ್ಲೆಯ ದಲಿತ ಕೇರಿಗೆ ಆಗಮಿಸಿ ಮನೆಮನೆಗೆ ಓಡಾಡಿ ಮತಯಾಚನೆ ಮಾಡಿದರು. ಈ ವೇಳೆ ದಲಿತರ ಮನೆಯಲ್ಲೇ ಎಳನೀರು ಸೇವನೆ ಮಾಡಿ ಸರಳತೆ ಮೆರೆದರು.
ಮತಯಾಚನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಒಡೆಯರ್, ನಾನು ಹಂಪಿ, ಅಂಜನಾದ್ರಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಆದರೆ ಇದೇ ಮೊದಲ ಬಾರಿ ಚುನಾವಣಾ ಪ್ರಚಾರಕ್ಕಾಗಿ ಬಂದಿರುವೆ. ಅಭ್ಯರ್ಥಿ ಪರವಾಗಿ ಜೈನ್ ಮಾರುಕಟ್ಟೆ, ಗೋನಾಳ ದಲಿತ ಕೇರಿಯಲ್ಲಿ ಪ್ರಚಾರ ಮಾಡಿದ್ದೇವೆ. ದಲಿತರ ಜೊತೆಗೆ ನಾವಿದ್ದೇವೆ ಎಂದರು.
Interview: ವರ್ಷದ ಹಿಂದೆ ಸೋತಿರಬಹುದು, ಆದರೆ ಈ ಚುನಾವಣೆ ಗೆಲ್ಲುತ್ತೇನೆ -ಶ್ರೀರಾಮುಲು
ಮೈಸೂರಿನ ಸಂಸ್ಥಾನಕ್ಕೂ, ಸಂವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ಅಂಬೇಡ್ಕರ್ ಸಂವಿಧಾನ ರಚನೆ ವೇಳೆ ಮೈಸೂರಿನ ಪ್ರಜಾ ಪ್ರತಿನಿಧಿ ಸಮಯ ಉಲ್ಲೇಖಿಸಿದ್ದರು. ಅಂದಿನ ಕಾಲದಿಂದಲೂ ದಲಿತರಿಗೆ ಸಮಾನ ಅವಕಾಶ ನೀಡುತ್ತ ಬಂದಿದ್ದೇವೆ. ಸಾಮಾನ್ಯ ಜನರ ಜೊತೆಗೆ ಮೈಸೂರಿನ ಮಹಾರಾಜರು ಸದಾಕಾಲವೂ ಇದ್ದಾರೆ. ಮಹಾರಾಜರ ಕುಟುಂಬ ಎಲ್ಲಾ ವರ್ಗದ ಜೊತೆಗೆ ಇದ್ದಾರೆ. ಅಂದು ಮೈಸೂರಿನವರಾಗಿ ಇದೀಗ ಭಾರತೀಯರಾಗಿ ಇದ್ದೇವೆ. ಮೇಲು-ಕೀಳು ಎನ್ನದೇ ಎಲ್ಲರೂ ಭಾರತೀಯರಾಗಿ ಒಗ್ಗಟ್ಟಾಗಿ ಇರೋಣ ಎಂದರು.
ರಣರಣ ಬಳ್ಳಾರಿಯಲ್ಲಿ ಕಾವೇರಿದ ಲೋಕಸಭೆ ಎಲೆಕ್ಷನ್..! ಯಾರ ಪಾಲಾಗುತ್ತೆ ಬಿಜೆಪಿ ಭದ್ರ ಕೋಟೆ..?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. ಮೈಸೂರಿನಲ್ಲಿ ನಾನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.