ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ರಾಯಚೂರಲ್ಲಿ ಬಿಜೆಪಿ ವಿರುದ್ಧ ಬಿವಿ ಶ್ರೀನಿವಾಸ ವಾಗ್ದಾಳಿ
ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ. ಬಿಜೆಪಿಯವರು ಹೇಳ್ತಾರೆ 'ಬೇಟಿ ಬಚಾವೋ, ಬೇಟಿ ಪಢಾವೋ' ಅಂತಾ ಆದ್ರೆ ಈಗ ಬಿಜೆಪಿ ಬೇಟಿ ಪಢಾವೋ, ಪ್ರಜ್ವಲ್ ರೇವಣ್ಣ ಬಚಾವ್ ಅಂತಿದೆ. ದಾವಣಗೆರೆಗೆ ಪ್ರಧಾನಿ ಮೋದಿ ಬಂದಾಗ ಪ್ರಜ್ವಲ್ ಪ್ರಕರಣದ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯಚೂರು (ಮೇ.5): ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ. ಬಿಜೆಪಿಯವರು ಹೇಳ್ತಾರೆ 'ಬೇಟಿ ಬಚಾವೋ, ಬೇಟಿ ಪಢಾವೋ' ಅಂತಾ ಆದ್ರೆ ಈಗ ಬಿಜೆಪಿ ಬೇಟಿ ಪಢಾವೋ, ಪ್ರಜ್ವಲ್ ರೇವಣ್ಣ ಬಚಾವ್ ಅಂತಿದೆ. ದಾವಣಗೆರೆಗೆ ಪ್ರಧಾನಿ ಮೋದಿ ಬಂದಾಗ ಪ್ರಜ್ವಲ್ ಪ್ರಕರಣದ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ರಾಯಚೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಪಿ ನಡ್ಡಾ ಅವರು ನೇಹಾ ಹಿರೇಮಠ(Neha hiremath) ಮನೆಗೆ ಹೋಗುತ್ತಾರೆ, ಕಣ್ಣೀರು ಹಾಕುತ್ತಾರೆ, ಪ್ರಲ್ಹಾದ್ ಜೋಶಿಯವರು ಯಾವುದೋ ಡ್ರಾಮಾ ಕಂಪನಿ ತರಾ ಡ್ರಾಮಾ ಮಾಡ್ತಾರೆ. ಆದರೆ ಅದೇ ಬಿಜೆಪಿಯವರು ನಾಲ್ಕು ನೂರು ಮಹಿಳೆಯರ ಬಗ್ಗೆ ಯಾಕೆ ಮಾತನಾಡ್ತಿಲ್ಲ, ಸಂತ್ರಸ್ತರ ಕುಟುಂಬಗಳನ್ನು ಯಾಕೆ ಭೇಟಿ ಮಾಡ್ತಿಲ್ಲ? ಇಷ್ಟೆಲ್ಲ ಆದ್ರೂ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಯಾಕೆ ಕ್ಯಾನ್ಸಲ್ ಮಾಡ್ತಿಲ್ಲ ಎಂದು ಪ್ರಶ್ನಿಸಿದರು.
ಮೋದಿಯವರ ಮನ್ ಕೀ ಬಾತ್ ಕೇಳಿ ಕಿವೀಲಿ ರಕ್ತ ಬಂದಿದೆ: ಬಿಜೆಪಿ ವಿರುದ್ಧ ಲಾಡ್ ವಾಗ್ದಾಳಿ
ಹುಬ್ಬಳ್ಳಿ ವಿಚಾರದಲ್ಲಿ ಬಿಜೆಪಿ ಯಾವ ರೀತಿ ಸ್ಟ್ಯಾಂಡ್ ತೆಗೆದುಕೊಂಡಿತ್ತು ಅದೇ ರೀತಿ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾಕೆ ತೆಗೆದುಕೊಳ್ತಿಲ್ಲ. ಇಂತಹ ಡಬಲ್ ಸ್ಟ್ಯಾಂಡರ್ಡ್ ಯಾಕೆ, ಇದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡುವ ನೀವು, ವಿಡಿಯೋ ಮಾಡಿದ್ದು ಯಾರು? ಅವರ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ? ಏಕೆಂದರೆ ಸ್ವತಃ ವಿಡಿಯೋ ಹಂಚಿರೋ ವ್ಯಕ್ತಿ ಹಾಸನ ಬಿಜೆಪಿ ಟಿಕೆಟ್ ಆಕಾಂಕ್ಷಿ. ಬಿಜೆಪಿ ಹೈಕಮಾಂಡ್ ನಾಯಕರಿಗೆ ಲೆಟರ್ ಲೇಟರ್ ಮುಖಾಂತರ ಪೆನ್ ಡ್ರೈವ್ ಬಗ್ಗೆ ಮಾಹಿತಿ ನೀಡಿದ್ರು. ಆದರೂ ಟಿಕೆಟ್ ಕ್ಯಾನ್ಸಲ್ ಮಾಡಲಿಲ್ಲ. ಆದರೀಗ ಡಿಕೆ ಶಿವಕುಮಾರ, ಸಿದ್ದರಾಮಯ್ಯರ ಹೆಸರು ಎಳೆದು ತರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕೊಪ್ಪಳದಲ್ಲಿ ಹಿಟ್ನಾಳ್ ಬ್ರದರ್ಸ್ ಬೆಂಬಲಿಗರ ರೌಡಿಸಂ! ಕಾಂಗ್ರೆಸ್ ಮತ ಹಾಕುವಂತೆ ಬಿಜೆಪಿ ಮುಖಂಡನ ಮೇಲೆ ಹಲ್ಲೆ!
ಈಗ ನೀವೂ ಏನೇ ಮಾಡಿದ್ರೂ ರಾಜ್ಯದ ಜನರು ಬಿಜೆಪಿ- ಜೆಡಿಎಸ್ ಗೆ ಚೆಂಬು ಕೊಡಲು ತೀರ್ಮಾನ ಮಾಡಿದ್ದಾರೆ. ಆ ಚೆಂಬು ತೆಗೆದುಕೊಂಡು ಕಾಶಿಗೆ ಹೋಗ್ತಿರಾ? ಇಲ್ಲಾ ಕರ್ನಾಟಕದಲ್ಲಿ ಎಲ್ಲಾದರೂ ಹೋಗಬೇಕಾ ಎಂದರೆ ನಮ್ಮ ಉಚಿತ ಬಸ್ ಇದೆ ಎಂದು ಲೇವಡಿ ಮಾಡಿದರು.