ಹುಬ್ಬಳ್ಳಿ: ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ!

: ರಾಜ್ಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿರುವ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಹೋಟೆಲ್‌ನ ಆವರಣದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಮಾರಾಮಾರಿಯೇ ನಡೆದಿದೆ. ಪರಸ್ಪರ ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಕೈ-ಕೈ ಮಿಲಾಯಿಸಿದ್ದಾರೆ.

Lok sabha election 2024 in Karnataka Congress JDS workers fight at hubballi rav

ಹುಬ್ಬಳ್ಳಿ (ಮೇ.1) : ರಾಜ್ಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿರುವ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಖಾಸಗಿ ಹೋಟೆಲ್‌ನ ಆವರಣದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಮಾರಾಮಾರಿಯೇ ನಡೆದಿದೆ. ಪರಸ್ಪರ ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು, ಕೈ-ಕೈ ಮಿಲಾಯಿಸಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್‌ ಕೋರ್‌ ಕಮಿಟಿ ಸಭೆ ಏರ್ಪಡಿಸಲಾಗಿತ್ತು. ಕೋರ್‌ ಕಮಿಟಿ ಸಭೆ ಮುಗಿಸಿ ಮಾಜಿ ಸಿಎಂ ಕುಮಾರಸ್ವಾಮಿ ಹೊರಬರುತ್ತಿದ್ದರು. ಈ ವೇಳೆ ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ನೇತೃತ್ವದಲ್ಲಿ ಐದಾರು ಜನ ಕಾರ್ಯಕರ್ತರ ತಂಡ ಜೆಡಿಎಸ್‌ಗೆ ಧಿಕ್ಕಾರ ಕೂಗಲು ಶುರು ಮಾಡಿತು.

 

ನೇಹಾ ಕೊಲೆ ಆರೋಪಿ ಫಯಾಜ್ ಸಿಐಡಿ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸಿಐಡಿ

ಈ ವೇಳೆ, ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಪ್ರತಿಭಟನೆಗೆ ಪ್ರತಿಯಾಗಿ ಪ್ರತಿಭಟನೆ ಶುರು ಮಾಡಿದರು. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಗ ಪರಸ್ಪರ ತಳ್ಳಾಟ, ನೂಕಾಟ, ಚಪ್ಪಲಿ ಪ್ರದರ್ಶನ ನಡೆಯಿತು. ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲನಿಗೆ ಜೆಡಿಎಸ್‌ನ ಒಂದಿಬ್ಬರು ಗೂಸಾ ಕೊಟ್ಟರೆ, ಇನ್ನೊಬ್ಬ ಕಾರ್ಯಕರ್ತ ಪ್ರೇಮನಾಥ ಚಿಕ್ಕತುಂಬಳನ ಶರ್ಟ್‌ ಕೂಡ ಹರಿಯಲಾಗಿದೆ. ಪೊಲೀಸರು ಆಗಮಿಸಿ, 20ಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿ ಕರೆದುಕೊಂಡು ಹೋದರು.

Latest Videos
Follow Us:
Download App:
  • android
  • ios