ಸುಮಲತಾ ಸಭೆ ನಡೆಸಿದ ಬೆನ್ನಲ್ಲೇ, ಮಂಡ್ಯ ಪ್ರವಾಸ ಹೊರಟ ಹೆಚ್‌ಡಿಕೆ

ಸಂಸದೆ ಸುಮಲತಾ ಮಹತ್ವದ ಸಭೆ ನಡೆಸಿದ ಬೆನ್ನಲ್ಲೇ  ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮಂಡ್ಯ ಪ್ರವಾಸ ಕೈಗೊಂಡಿದ್ದಾರೆ.

Lok Sabha Election 2024 HD Kumaraswamy Mandya constituency tour gow

ಮಂಡ್ಯ (ಎ.3): ಸಂಸದೆ ಸುಮಲತಾ ಮಹತ್ವದ ಸಭೆ ನಡೆಸಿದ ಬೆನ್ನಲ್ಲೇ  ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮಂಡ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದೇ ಮಂಡ್ಯ ಪ್ರವಾಸ ಕೈಗೊಂಡಿರುವ ಹೆಚ್ಡಿಕೆ. ದಿ.ಅಂಬರೀಶ್ ಸಮಾಧಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಅಂಬಿ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

ಮಂಡ್ಯದ ಎಂಪಿ ಟಿಕೆಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತೇನೆ: ಸ್ಪರ್ಧೆ ಮಾಡೊಲ್ಲವೆಂದು ಘೋಷಿಸಿದ ಸಂಸದೆ ಸುಮಲತಾ

ಮಧ್ಯಾಹ್ನ‌ 3 ಗಂಟೆಗೆ ಪಾಂಡವಪುರದ  ಕ್ಯಾತನಹಳ್ಳಿಗೆ ಆಗಮಿಸಿ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ಹೊಳಲು ಗ್ರಾಮಕ್ಕೆ ತೆರಳಿ ಹೆಚ್.ಡಿ.ಚೌಡಯ್ಯ ಸಮಾಧಿಗೆ ಕುಮಾರಸ್ವಾಮಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಮಧ್ಯಾಹ್ನ 3.30 ಕ್ಕೆ ಕೀಲಾರ ಗ್ರಾಮಕ್ಕೆ ಭೇಟಿ. ಕೀಲಾರದ ನಿತ್ಯ ಸಚಿವ ದಿ.ಶಂಕರೇಗೌಡರ ಸಮಾಧಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಬಳಿಕ ಸುನ್ಗಹಳ್ಳಿಯ ದಿವಂಗತ ಎಸ್.ಡಿ.ಜಯರಾಂ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಎಸ್.ಡಿ.ಜಯರಾಂ ಅವರು ಮಾಜಿ ಸಚಿವರಾಗಿದ್ದರು.

ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ರಾಜ್ಯದ ಅಭಿವೃದ್ಧಿ: ಎಚ್.ಡಿ.ಕುಮಾರಸ್ವಾಮಿ

ಬಳಿಕ ಮಧ್ಯಾಹ್ನ 4.30 ಕ್ಕೆ ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರ ಸಮಾಧಿಗೆ ಪೂಜೆ ಸಲ್ಲಿಸಲಿದ್ದು, ನಂತರ 4.45 ಕ್ಕೆ ಅಂಬರೀಶ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ಹೀಗೆ ಚುನಾವಣಾ ಕಣದಲ್ಲಿರುವ ಮಾಜಿ ಸಿಎಂ ಹೆಚ್‌ಡಿಕೆ ಮಂಡ್ಯ ಹೋರಾಟಗಾರರು, ನಾಯಕರ ಸಮಾಧಿಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಮಂಡ್ಯ ಮಹಾನ್ ನಾಯಕರ ಕುಟುಂಬಸ್ಥರ, ಬೆಂಬಲಿಗರ ವಿಶ್ವಾಸಗಳಿಸಲು ಯತ್ನಿಸಲಿದ್ದಾರೆ.

ಹೃದಯ ಚಿಕಿತ್ಸೆ ಬಳಿಕ ವಿಶ್ರಾಂತಿಯಲ್ಲಿದ್ದ ಕುಮಾರಸ್ವಾಮಿ ಕೆಲ ದಿನಗಳ ಹಿಂದೆ ಸುಮಲತಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಂಡ್ಯ ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಸುಮಲತಾ ಇಂದು ಬೆಂಬಲಿಗರ ಸಭೆ ನಡೆಸಿ ಸಾಧನೆಗಳ ಬಗ್ಗೆ ವಿವರವಾಗಿ ಬಿಚ್ಚಿಟ್ಟರು. ತದ ನಂತರ ಬಿಜೆಪಿಗೆ ಬೆಂಬಲ ಘೋಷಿಸಿದರು.

Latest Videos
Follow Us:
Download App:
  • android
  • ios