ಮಂಡ್ಯದ ಎಂಪಿ ಟಿಕೆಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತೇನೆ: ಸ್ಪರ್ಧೆ ಮಾಡೊಲ್ಲವೆಂದು ಘೋಷಿಸಿದ ಸಂಸದೆ ಸುಮಲತಾ

ರಾಜಕೀಯ ಅನಿವಾರ್ಯ ನನಗೆ ಯಾವತ್ತೂ ಇರಲಿಲ್ಲ. ಇವತ್ತೂ ಇಲ್ಲ. ನಾನು ಈ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಆದರೆ, ಮಂಡ್ಯವನ್ನು ನಾನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು

Mandya MP Sumalatha Ambareesh withdraw their lok sabha election contest sat

ಮಂಡ್ಯ  (ಏ.03): ರಾಜಕೀಯ ಅನಿವಾರ್ಯ ನನಗೆ ಯಾವತ್ತೂ ಇರಲಿಲ್ಲ. ಇವತ್ತೂ ಇಲ್ಲ. ನಾನು ಈ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಆದರೆ, ಮಂಡ್ಯವನ್ನು ನಾನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. 

ಮಂಡ್ಯದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಬುಧವಾರ ಮಾತನಾಡಿದ ಅವರು, ಎಂಪಿ ಚುನಾವಣೆ ಹುಡುಗಾಟವಲ್ಲ. ನಾನೇನೋ ದ್ವೇಷ ಅಥವಾ ಹಠಕ್ಕೆ ಸ್ಪರ್ಧೆ ಮಾಡಬೇಕು ಎಂದರೆ ನಾನು ಈಗಲೂ ಸ್ಪರ್ಧೆ ಮಾಡಬಹುದು. ಆದರೆ, ಇದರಿಂದ ಯಾರಿಗೆ ನಷ್ಟವಾಗುತ್ತದೆ ಎಂಬುದನ್ನೂ ಕೂಡ ಮುಲಾಜು ನೋಡಬೇಕು. ನಾನು ಸಂಸದೆ ಆಗಬೇಕೆಂದಿದ್ದರೆ ಬಿಜೆಪಿಯ ಗೆಲ್ಲುವ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬಹುದಿತ್ತು. ನಾನು ಟಿಪಿಕಲ್ ರಾಜಕಾರಣಿಯಲ್ಲ. ಆದರೆ, ನನಗೆ ರಾಜಕಾರಣ ಏನಿದ್ದರೂ ಅದು ಮಂಡ್ಯದಲ್ಲಿ ಮಾತ್ರ. ಇಲ್ಲದಿದ್ದರೆ ನನಗೆ ರಾಜಕೀಯವೇ ಬೇಡ. ಕಾರಣ ಅಂಬರೀಶ್ ಅವರ ಅಭಿಮಾನಿಗಳಿರುವ ಮಂಡ್ಯವನ್ನು ಬಿಟ್ಟು ನಾನೆಲ್ಲೂ ಹೋಗುವುದಿಲ್ಲ.

4 ಸಾವಿರ ಕೋಟಿ ರೂ. ಅನುದಾನವನ್ನು ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕೊಟ್ಟಿದೆ. ನನಗೆ ಸ್ಪರ್ಧೆ ಮಾಡಲು ಸ್ವಂತಂತ್ರ ಅಭ್ಯರ್ಥಿಯಾಗಿ ಅವಕಾಶವಿದೆ. ಆದರೆ, ಕಾಂಗ್ರೆಸ್‌ ಹಿರಿಯ ನಾಯಕರೊಬ್ಬರು ಸುಮಲತಾ ಅವರ ಅವಶ್ಯಕತೆ ಹಿಂದೆಯೂ ಇಲ್ಲ, ಮುಂದೆಯೂ ಬರೊಲ್ಲ ಹಾಗೂ ಇಂದಿಗೂ ಇಲ್ಲವೆಂದು ಹೇಳಿದರು. ಆದರೆ, ನನಗೆ ಗೌರವ ಇಲ್ಲದ ಕಡೆ ನಾನು ಹೋಗೋದಿಲ್ಲ. ಇನ್ನು ಬಿಜೆಪಿಯಿಂದ ಭಾರಿ ಗೌರವದಿಂದಲೇ ಬಿಜೆಪಿಗೆ ಬೆಂಬಲಿಸುವಂತೆ ಹೇಳಿದರು. ಇನ್ನು ನರೇಂದ್ರ ಮೋದಿ ಅವರು ಎಂದಿಗೂ ಸ್ವಾರ್ಥ ರಾಜಕಾರಣ ಮಾಡದೇ ಎಂದಿಗೂ ಅಭಿವೃದ್ಧಿಯ ಮೂಲಮಂತ್ರದ ನಿಟ್ಟಿನಲ್ಲಿ ದೇಶ ಮುನ್ನಡೆಸುತ್ತಿದ್ದಾರೆ. ಇವತ್ತು ಸಂಸದೆ ಇದ್ದೇನೆ. ನಾಳೆ ಇನ್ನೊಂದು ಸ್ಥಾನ ಪಡೆಯಬಹುದು.

Latest Videos
Follow Us:
Download App:
  • android
  • ios