Asianet Suvarna News Asianet Suvarna News

ಎಚ್‌ಡಿಕೆ ಪರವಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ತಾರೆ: ಸಂಸದೆ ಸುಮಲತಾ ಆಪ್ತ ಮಂಜುನಾಥ್ ಗೌಡ ಹೇಳಿಕೆ

ಮಂಡ್ಯದಲ್ಲಿ ಸುಮಲತಾ ಅವರು ಒಳ್ಳೆಯ ನಿರ್ಧಾರ ಮಾಡಲಿದ್ದಾರೆ. ರಾಜಕೀಯದಲ್ಲಿ ಕಾಂಪ್ರಮೈಸ್ ನೇಚರ್ ಇರಲೇಬೇಕು, ಜಿದ್ದು ಸಾಧಿಸೋದು ಬೈದುಕೊಂಡು ತಿರುಗಾಡೋದು ಮಾಡಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋಲಾರದಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ತಿಳಿಸಿದರು.

Lok sabha election 2024 Former MLA Manjunath gowda reaction about HD Kumarswamy and sumalath met at kolar rav
Author
First Published Apr 2, 2024, 8:20 PM IST

ಕೋಲಾರ (ಏ.2): ಮಂಡ್ಯದಲ್ಲಿ ಸುಮಲತಾ ಅವರು ಒಳ್ಳೆಯ ನಿರ್ಧಾರ ಮಾಡಲಿದ್ದಾರೆ ಎಂದು ಕೋಲಾರದಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ತಿಳಿಸಿದರು.

ಇಂದು ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸುಮಲತಾ ಭೇಟಿ ಮಾಡಿದ ವಿಚಾರ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಸಹ ಕುಮಾರಸ್ವಾಮಿ ಭೇಟಿ ವೇಳೆ ಇದ್ದೆ. ಅಲ್ಲಿ ಏನಾಗಿದೆ ಎಂದು ಹೇಳುವುದು ಬೇಡ ಆದರೆ ಒಳ್ಳೆಯದೆ ಆಗುತ್ತದೆ ಎಂದರು.

 

ಮೊದಲು ಬಾಯಿಗೆ ಬಂದಂಗೆ ಬೈತಿದ್ದ ಸಿದ್ದರಾಮಯ್ಯ ಈಗ ಸೋನಿಯಾ ಮುಂದೆ ನಡು ಬಗ್ಗಿಸಿ ನಿಲ್ತಾರೆ: ಎಚ್‌ಡಿ ಕುಮಾರಸ್ವಾಮಿ

 ಇನ್ನೂ ರಾಜಕೀಯದಲ್ಲಿ ಕಾಂಪ್ರಮೈಸ್ ನೇಚರ್ ಇರಲೇಬೇಕು, ಜಿದ್ದು ಸಾಧಿಸೋದು ಬೈದುಕೊಂಡು ತಿರುಗಾಡೋದು ಮಾಡಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಹೀಗಾಗಿ ಮಂಡ್ಯದಲ್ಲಿ ಸಹ ಒಳ್ಳೆಯದೆ ಆಗುತ್ತದೆ. ಭೇಟಿ, ಚರ್ಚೆ ಸಹ ಪಾಸಿಟೀವ್ ಆಗಿದೆ. ಮಂಡ್ಯ ಕಾರ್ಯಕರ್ತರನ್ನ ಕೇಳಿ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ ಹೀಗಾಗಿ ಅವರ ನಿರ್ಧಾರವನ್ನ ಪಾಸಿಟೀವ್ ಆಗಿ ತಿಳಿಸುತ್ತಾರೆ ಎಂದರು.

ಇದೇ ವೇಳೆ ಕೋಲಾರದ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಮುಂದಾದ ವಿಚಾರಕ್ಕೆ ಸಂಬಂದಿಸಿದಂತೆ ಮಾತನಾಡಿದ ಅವರು, ನಾವು ರಾಜಕಾರಣಿಗಳು ನಮ್ಮನ್ನ ಜನರು ಗಮನಿಸುತ್ತಿರುತ್ತಾರೆ, ನಾವು ಕಾಮಿಡಿ ಪೀಸ್ ಗಳಾಗಿ ನಡೆದುಕೊಳ್ಳಬಾರದು. ಅವರಿಗೆ ಕೋಪ ಇದ್ದರೆ ತಡೆದುಕೊಳ್ಳಬೇಕು ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಳ್ಳಬೇಕು, ಇಲ್ಲವಾದಲ್ಲಿ ಹೊರಗೆ ಬಂದುಬಿಡಬೇಕು ಇಲ್ಲವಾದಲ್ಲಿ ಒಂದೇ ಹೇಳಿಕೆಗೆ ಸ್ಟಿಕನ್ ಆಗಿರಬೇಕು ಎಂದರು. 

ಯಾವ ರಾಜಕೀಯ ನಾಯಕರೂ ಮಂಡ್ಯದಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ: ಎಚ್‌ಡಿ ಕುಮಾರಸ್ವಾಮಿ

ಕೋಲಾರ ಕಾಂಗ್ರೆಸ್ ನ ಬಣ ರಾಜಕೀಕಯ ಭುಗಿಲೆದ್ದಿದೆ. ಈ ಬಗ್ಗೆ ಮಾತನಾಡಿದ ಅವರು, ಕಳೆದ ಬಾರಿ ಕಾಂಗ್ರೆಸ್ ಬಿಜೆಪಿಗೆ ಸಪೋರ್ಟ್ ಮಾಡಿತ್ತು. ಈ ಬಾರಿಯೂ ಸಹ ಕಾಂಗ್ರೆಸ್‌ ನಲ್ಲಿ ಎರಡು ಗುಂಪು ಇದೆ. ಅಸಮಧಾನದ ಒಂದು ಗುಂಪನ್ನ ನಾವು ಬಳಸಿಕೊಳ್ಳುತ್ತೇವೆ. ಅವರನ್ನ ಸಂಪರ್ಕ ಮಾಡಿ ಅಸಮಧಾನ ಇದ್ದ ಕಡೆ ಅಡ್ವಾಂಟೇಜ್ ತೆಗೆದುಕೊಳ್ಳುತ್ತೇವೆ ಎಂದರು. ಈ ಬಾರಿ ನಮ್ಮ‌ ಜೆಡಿಎಸ್ ಬಿಜೆಪಿ ಗುಂಪು ಸದೃಢವಾಗಿದೆ‌. ಕಾಂಗ್ರೆಸ್ ನಲ್ಲಿ ಗೌತಮ್ ಅವರನ್ನ ಬಲಿಪಶು ಮಾಡಲಿದ್ದಾರೆ ಅನಿಸುತ್ತದೆ ಎಂದು ಎಂದರು.

Follow Us:
Download App:
  • android
  • ios