'ಯುದ್ಧ ಭೂಮಿಯಲ್ಲಿ ಯಾರಿದ್ದಾರೆಂಬುದು ಮುಖ್ಯವಲ್ಲ' ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಮತ್ತೆ ವಾಗ್ದಾಳಿ!
ಪ್ರಹ್ಲಾದ್ ಜೋಶಿ ಅವರು ಸ್ವಾಮೀಜಿಗಳ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ. ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಅಂತ ಮುರುಘ ಮಠ ಸ್ವಾಮೀಜಿಗಳೇ ಹೇಳಿದ್ದಾರೆ.
ಕೆಲ ಲೀಡರ್ ಗಳನ್ನು ಜೋಶಿ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಹರಿಹಾಯ್ದರು.
ಹುಬ್ಬಳ್ಳಿ (ಏ.5): ಯುದ್ಧ ಭೂಮಿಯಲ್ಲಿ ಯಾರಿದ್ದಾರೆಂಬುದು ಮುಖ್ಯವಲ್ಲ, ಅರ್ಜುನ ಮತ್ತು ಕೃಷ್ಣ ಇಬ್ಬರೂ ಇದ್ದರು ಅನ್ನೋದೇ ಇತಿಹಾಸ ಎಂದು ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಹರಿಹಾಯ್ದರು.
ಇಂದು ಹುಬ್ಬಳ್ಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ವಾಮೀಜಿಗಳ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ. ನನ್ನ ಮೇಲೆನೂ ದಬ್ಬಾಳಿಕೆ ಮಾಡಿದ್ದಾರೆ ಎಂದು ಮುರುಘಾ ಮಠದ ಸ್ವಾಮೀಜಿಗಳೇ ಹೇಳಿದ್ದಾರೆ. ಸಮುದಾಯದ ಕೆಲ ಲೀಡರ್‌ಗಳು ಜೋಶಿ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಪ್ರಹ್ಲಾದ್ ಜೋಶಿ ಅವರು ಸ್ವಾಮೀಜಿಗಳ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದಾರೆ. ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಅಂತ ಮುರುಘ ಮಠ ಸ್ವಾಮೀಜಿಗಳೇ ಹೇಳಿದ್ದಾರೆ.
ಕೆಲ ಲೀಡರ್ ಗಳನ್ನು ಜೋಶಿ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಸ್ವಾಮೀಜಿಗಳು ರಾಜಕೀಯಕ್ಕೆ ಬರಬಾರದು ಅನ್ನೋದು ಜೋಶಿ ಅಭಿಮಾನಿಗಳ ಮಾತಾಗಿದೆ. ಆದ್ರೆ ಯಾರೂ ಪ್ರಜ್ಞಾವಂತರು ಈ ಮಾತು ಹೇಳಿಲ್ಲ. ರಾಜಕೀಯಕ್ಕೆ ಬರಬೇಕೆಂಬುದು ನನ್ನ ಆಸಕ್ತಿ ಅಲ್ಲ. ನನ್ನ ಆಸಕ್ತಿ ಇತ್ತೆಂದರೆ ಇಷ್ಟು ಸುಧೀರ್ಘ ಅವಧಿ ತೆಗೆದುಕೊಳ್ಳುತ್ತಿದ್ದಿಲ್ಲ. ಉತ್ತರ ಭಾರತದಲ್ಲಿ ಸಾಕಷ್ಟು ಸ್ವಾಮೀಜಿಗಳು ರಾಜಕಾರಣದಲ್ಲಿದ್ದಾರೆ. ಆ ಭಾಗದಲ್ಲಿ ಜನ ಕಲ್ಯಾಣ ಮಾಡ್ತಿದ್ದಾರೆ ಕರ್ನಾಟಕದ ಜನ ದಿಂಗಾಲೇಶ್ವರ ಸ್ವಾಮೀಜಿಯಂಥವರು ರಾಜಕೀಯಕ್ಕೆ ಬಂದ್ರೆ ನಮಗೂ ಒಳ್ಳೆಯದಾಗುತ್ತೆ ಅನ್ನೋ ಭಾವನೆ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳು ರಾಜಕೀಯಕ್ಕೆ ಬರಬಾರದು ಅನ್ನೋರು, ಮಾಠಾಧೀಶರನ್ನು ಏಕೆ ರಾಜಕೀಯ ಕಾರ್ಯಕ್ರಮಕ್ಕೆ ಕರೀತಾರೆ? 120 ಜನ ಸ್ವಾಮೀಜಿಗಳನ್ನು ಪಕ್ಷದ ಕಚೇರಿ ಉದ್ಘಾಟನೆಗೆ ಕರೆದೊಯ್ದದ್ದು ಸರಿಯೇ? ಕಲಘಟಗಿ ಗೆ ಕರೆದೊಯ್ದು ಖುದ್ದು ಕೇಂದ್ರ ಸಚಿವರೇ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಗಿಯದ ವೀಣಾ ಕಾಶೆಪ್ಪನವರ ಮುನಿಸು; ಮತ್ತೊಮ್ಮೆ ಬೆಂಬಲಿಗರ ಸಭೆ ನಡೆಸಲು ಸಜ್ಜು!
ನಮ್ಮ ಸಮಾಜದ ಮಠಾದೀಶರು ಜೋಶಿ ವಿರುದ್ಧ ನಿಂತಿದ್ದಾರೆ. ಹೀಗಾಗಿ ಅವರ ನಿಲುವನ್ನು ಸಮಾಜಕ್ಕೆ ಮುಟ್ಟಿಸಲು ನಾನು ಗಟ್ಟಿಯಾಗಿ ನಿಂತಿದ್ದೇನೆ. ನಮ್ಮ ಹಿಂದೆ ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷದವರು ಇದಾರೆ. ಆದ್ರೆ ಅವರ ಹಿಂದೆ ಯಾರು ಇದ್ದಾರೆ ಅನ್ನೋ ಪ್ರಶ್ನೆಗೆ ಇಷ್ಟು ಗೊಂದಲ ಸೃಷ್ಟಿಯಾಗಿದೆ. ವ್ಯವಸ್ಥೆ ಅಸ್ಥಿರಗೊಂಡಾಗ ಮಾಠಾಧೀಶರು ಬರಬೇಕೆಂದು ಜನ ಬಯಸುತ್ತಿದ್ದಾರೆ. ನಾನು ರಾಜಕೀಯಕ್ಕೆ ಬರಬೇಕೆಂಬುದು ಜನರ ಬಯಕೇ ಹೊರತು, ನನ್ನದಲ್ಲ. ಎಲ್ಲ ಪಕ್ಷದವರು ನಮ್ಮನ್ನು ಸಂಪರ್ಕಿಸಿದ್ದಾರೆ. ನಾನು ಸ್ಪರ್ಧಿಸಬೇಕು ಅನ್ನೋದನ್ನ ಜನರೇ ತೀರ್ಮಾನಿಸಿದ್ದಾರೆ. ಸ್ಪರ್ಧಿಸಬೇಕೋ ಅಥವಾ ಬೇಡವೋ ಅನ್ನೋದು ನಮ್ಮ ಹಿತೈಷಿಗಳ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ತೀರ್ಮಾನವಾಗುತ್ತೆ. ಜನ ಆಫರ್ ಕೊಟ್ಟಿದ್ದಾರೆ, ಪಕ್ಷ ಆಫರ್ ಕೊಟ್ರೆ ಮುಂದೆ ತೀರ್ಮಾನಿಸುತ್ತೇನೆ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಲ್ಲ ಎಂದರು.