Asianet Suvarna News Asianet Suvarna News

INDIA ಕೂಟ ಗೆದ್ದರೆ ಪ್ರಧಾನಿ ಆಗುವ ಯಾವುದೇ ಉದ್ದೇಶವಿಲ್ಲ: ಕೇಜ್ರಿವಾಲ್‌

ಇಂಡಿಯಾ ಕೂಟ ಗೆದ್ದರೆ ತಮಗೆ ಪ್ರಧಾನ ಮಂತ್ರಿ ಆಗುವ ಉದ್ದೇಶ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.  ಏಕೆಂದರೆ ಈ ಚುನಾವಣೆಯಲ್ಲಿ ಆಪ್‌ ಕೇವಲ 22 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದೆ. ನಮ್ಮದು ಚಿಕ್ಕ ಪಕ್ಷ’ ಎಂದಿದ್ದಾರೆ.

Lok sabha election 2024 Delhi CM Arvind kejriwal reacts aboui if INDIA alliance win who will be Prime minister rav
Author
First Published May 23, 2024, 11:17 AM IST

ನವದೆಹಲಿ (ಮೇ.23): ಇಂಡಿಯಾ ಕೂಟ ಗೆದ್ದರೆ ತಮಗೆ ಪ್ರಧಾನ ಮಂತ್ರಿ ಆಗುವ ಉದ್ದೇಶ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು,‘ನನಗೆ ಪ್ರಧಾನಿ ಆಗುವ ಯಾವುದೇ ಉದ್ದೇಶವಿಲ್ಲ. ಏಕೆಂದರೆ ಈ ಚುನಾವಣೆಯಲ್ಲಿ ಆಪ್‌ ಕೇವಲ 22 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದೆ. ನಮ್ಮದು ಚಿಕ್ಕ ಪಕ್ಷ’ ಎಂದರು. ಅಲ್ಲದೆ, ‘ನಾವು ಈ ಬಗ್ಗೆ ಚುನಾವಣೆ ಬಳಿಕ ಸಭೆ ನಡೆಸಿ, ಒಮ್ಮತದಿಂದ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಲಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ದೇಶದಲ್ಲಿ ಸರ್ವಾಧಿಕಾರ ತಲೆ ಎತ್ತಲಿದೆ. ಚುನಾವಣೆಗಳು ರದ್ದಾಗಲಿದೆ. ಒಂದು ವೇಳೆ ಚುನಾವಣೆ ನಡೆದರೆ ಅದು ರಷ್ಯಾ, ಚೀನಾದಲ್ಲಿ ನಡೆಯುವ ರೀತಿ ಇರುತ್ತದೆ’ ಎಂದು ಕಿಡಿಕಾರಿದರು.

ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !

ಕೇಜ್ರಿವಾಲ್ ಮತ ಕಾಂಗ್ರೆಸ್‌ಗೆ, ರಾಹುಲ್ ಮತ ಆಪ್‌ಗೆ

ಮೇ 25ರಂದು ಚುನಾವಣೆಗೆ ಮತ ಚಲಾಯಿಸಲು ಹೋದಾಗ ಆಪ್‌ ನಾಯಕ ಅರವಿಂದ್ ಕೇಜ್ರಿವಾಲ್ ತಮ್ಮ ಮತವನ್ನು ಕಾಂಗ್ರೆಸ್‌ಗೆ ನೀಡುತ್ತಾರೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪೊರಕೆ ಚಿಹ್ನೆ ಅಂದರೆ ಆಮ್‌ ಆದ್ಮಿ ಪಕ್ಷಕ್ಕೆ ಮತ ಚಲಾಯಿಸಲಿದ್ದಾರೆ. 

ದೇಶ ನಡೆಸೋದು ಮಕ್ಕಳಾಟ ಅಲ್ಲ: ರಾಹುಲ್ ಗಾಂಧಿ ವಿರುದ್ಧ ಮೋದಿ ವಾಗ್ದಾಳಿ

ಕೇಜ್ರಿವಾಲ್ ಮತ್ತು ರಾಹುಲ್ ಮತ ಚಲಾಯಿಸುವ ಕ್ಷೇತ್ರಗಳಲ್ಲಿ ಅವರ ಪಕ್ಷದ ಅಭ್ಯರ್ಥಿಗಳಿಲ್ಲ. ಏಕೆಂದರೆ ಇಂಡಿಯಾ ಕೂಟದ ಅಡಿ ದಿಲ್ಲಿಯ 7 ಕ್ಷೇತ್ರಗಳಲ್ಲಿ ಆಪ್ ಹಾಗೂ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಕೇಜ್ರಿವಾಲ್ ಮತದಾರ ಆಗಿರುವ ಕಡೆ ಕಾಂಗ್ರೆಸ್ ಅಭ್ಯರ್ಥಿ ನಿಂತಿದ್ದರೆ, ರಾಹುಲ್‌ ಮತದಾರ ಆಗಿರುವ ಕಡೆ ಆಪ್‌ ಅಭ್ಯರ್ಥಿ ನಿಂತಿದ್ದಾರೆ. ಹೀಗಾಗಿ ಮಿತ್ರಪಕ್ಷಗಳ ಅಭ್ಯರ್ಥಿಗಳಿಗೆ ಉಭಯ ನಾಯಕರು ಮತ ಹಾಕಲಿದ್ದಾರೆ.

Latest Videos
Follow Us:
Download App:
  • android
  • ios