ಈ ಚುನಾವಣೆ ಧರ್ಮಯುದ್ಧ ಅಲ್ಲ: ಸರ್ವಜ್ಞನ ವಚನದ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್

ಈ ಚುನಾವಣೆ ಸತ್ಯಕ್ಕೂ ಸುಳ್ಳಿಗೂ ಇರುವ ಚುನಾವಣೆ. ಈ ಚುನಾವಣೆ ಧರ್ಮಯುದ್ಧ ಅಲ್ಲ ಎಂದು ಸರ್ವಜ್ಞನ ವಚನದ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಚಾರ ಸಭೆಯಲ್ಲಿ ಬಿಜೆಪಿಗೆ ಟಾಂಗ್ ಕೊಟ್ಟರು.

Lok Sabha Election 2024 DCM DK Shivakumar Slams On BJP At Mysuru gvd

ಮೈಸೂರು (ಏ.13): ಈ ಚುನಾವಣೆ ಸತ್ಯಕ್ಕೂ ಸುಳ್ಳಿಗೂ ಇರುವ ಚುನಾವಣೆ. ಈ ಚುನಾವಣೆ ಧರ್ಮಯುದ್ಧ ಅಲ್ಲ ಎಂದು ಸರ್ವಜ್ಞನ ವಚನದ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಚಾರ ಸಭೆಯಲ್ಲಿ ಬಿಜೆಪಿಗೆ ಟಾಂಗ್ ಕೊಟ್ಟರು. ನಾನು ಮತ್ತು ಸಿಎಂ ಇಬ್ಬರೂ ಈ ಕ್ಷೇತ್ರದ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೇವೆ ಎಂದು ಡಿಕೆಶಿ ಪಿರಿಯಾಪಟ್ಟಣದಲ್ಲಿ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿದರು. ಒಟ್ಟು 8 ಒಕ್ಕಲಿಗರಿಗೆ ನಮ್ಮ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಮೈಸೂರು ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯ ಗೆಲ್ಲಿಸಿ. ಕಮಲ‌ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ. ದಾನ ಧರ್ಮದ ಕೈ ಅಧಿಕಾರದಲ್ಲಿದ್ದರೆ ಚಂದ ಎಂದರು.

300 ಸೀಟ್ ಗೆದ್ದು ಮೋದಿ ಏನ್ ಮಾಡಿದ್ರು ಅಂತ ಪ್ರಶ್ನೆ ಕೇಳಿದ ಡಿಕೆಶಿ, ಈ ವೇಳೆ ಏನೂ ಮಾಡಿಲ್ಲ ಎಂದ ಕಾಂಗ್ರೇಸ್ ಕಾರ್ಯಕರ್ತರು ಆಗ ಏನಿಉ ಮಾಡಿದಾರೆ ಸುಳ್ಳು ಹೇಳ್ಬೇಡ ಅಂತ ಕಾರ್ಯಕರ್ತರಿಗೆ  ಡಿಕೆಶಿ ಹೇಳಿದರು. ಆದರೆ ಹೇಳಿದ ಯಾವುದೇ ಭರವಸೆ ಈಡೇರಿಲ್ಲ . ಐದು ಗ್ಯಾರಂಟಿ ಬಗ್ಗೆ ಕೊಟ್ಟ ಮಾತಂತೆ ನಾವು ನಡೆದುಕೊಂಡಿದ್ದೇವೆ. ಜೆಡಿಎಸ್ ಕಾರ್ಯಕರ್ತರಿಗೆ ನನ್ನ ಮನವಿ, ಈಗ ಜೆಡಿಎಸ್ ಎಲ್ಲಿದೆ, ಅಳಿಯನನ್ನೇ ಬಿಜೆಪಿ ಅಭ್ಯರ್ಥಿ ಮಾಡಿದ್ದಾರೆ. ಅವಕಾಶವಾದಿಗಳ ಪರ ಯಾಕೆ ಇದೀರ, ನಾವಿದೀವಿ ನಿಮ್ಮ ರಕ್ಷಣೆಗೆ ಇದ್ದೇವೆ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಬಿಗ್ ಆಫರ್ ಕೊಟ್ಟರು.

ಡಿವಿಎಸ್‌, ಪ್ರತಾಪ್ ಸಿಂಹ ಗೋವಿಂದಾ ಗೋವಿಂದಾ.: ಎಚ್ಡಿಕೆಯವರೇ ನಾನು ಯಾವ ವಿಷ ಹಾಕಿದ್ದೀನಿ ಹೇಳಿ ಎಂದ ಡಿಕೆಶಿ

ಜೆಡಿಎಸ್‌ ಅವರ ಕುಟುಂಬದವರೇ 3 ಜನ ಚುನಾವಣೆಗೆ ನಿಂತಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ. ನಮಗೆ ಬೆಂಬಲ ಕೊಡಿ ಅಂತ ಜೆಡಿಎಸ್ ಕಾರ್ಯಕರ್ತರಿಗೆ ಡಿಕೆಶಿ ಮನವಿ ಮಾಡಿದರು. ನಮ್ಮ ಹೋರಾಟ ಭಾವನೆಗೆ ಮತ್ತು ಬದುಕಿಗೆ ಸಂಬಂಧಿಸಿದ್ದು, ಬದುಕಿಗಾಗಿ ನಮಗೆ ಓಟ್ ಹಾಕಿ, ಟಿಕೇಟ್‌ ಆಕಾಂಕ್ಷಿಯಾಗಿದ್ದ ವಿಜಯ್ ಕುಮಾರ್‌ಗೆ ನಾನು ಅವಕಾಶ ಕೊಡ್ತೀವಿ ಎಂದು ಡಿಕೆಶಿ ಹೇಳಿದಾಗ ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು  ಶಿಳ್ಳೆ ಕೆಕೆ ಹಾಕಿದರು. ಪ್ರತಾಪ್ ಸಿಂಹನ ಮುಖ ಈ ಕ್ಷೇತ್ರದಲ್ಲಿ ನಡೆಯುತ್ತಿರಲಿಲ್ವಾ..? 14 ಜನರಿಗೆ ಟಿಕೇಟ್ ಯಾಕೆ ಕೊಡ್ಲಿಲ್ಲ..? ಅವರ ನಾಣ್ಯ ನಡೆಯುತ್ತಿಲ್ವಾ..? ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios