ಬೆಳಗಾವಿ ಅಖಾಡಕ್ಕೆ ಬಿಎಸ್‌ವೈ; ಬಿಜೆಪಿ ಅಭ್ಯರ್ಥಿ ಶೆಟ್ಟರ್ ಆಗಮನಕ್ಕೆ ಮುನ್ನವೇ ಯಡಿಯೂರಪ್ಪ ಎಂಟ್ರಿ!
ರಾಜ್ಯದಲ್ಲಿ ಎಲ್ಲಿ ಹೋದರೂ 'ಮೋದಿ.. ಮೋದಿ..' ಬೆಳಗಾವಿಯಲ್ಲಿ ಮೋದಿ ಅಲೆ ಇದೆ. ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಬೆಳಗಾವಿ ಸೇರಿ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ (ಮಾ.26): ರಾಜ್ಯದಲ್ಲಿ ಎಲ್ಲಿ ಹೋದರೂ 'ಮೋದಿ.. ಮೋದಿ..' ಬೆಳಗಾವಿಯಲ್ಲಿ ಮೋದಿ ಅಲೆ ಇದೆ. ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಬೆಳಗಾವಿ ಸೇರಿ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಆಗಮನಕ್ಕೂ ಮುನ್ನ ದಿನವೇ ಇಂದು ಯಡಿಯೂರಪ್ಪನವರು ಬೆಳಗಾವಿಗೆ ಆಗಮಿಸಿದರು. ಬೆಳಗಾವಿ ಕ್ಷೇತ್ರದ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್‌ವೈ, ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭ ಆಗಿದೆ. ಎಲ್ಲರ ಅಪೇಕ್ಷೆ ಮೇರೆಗೆ ಒಂದು ಬಾರಿ ಪ್ರಧಾನಿ ಮೋದಿ ಬೆಳಗಾವಿಗೆ ಬರಬೇಕು ಎನ್ನುವ ನಿರೀಕ್ಷೆ ಇದೆ. ಬೆಳಗಾವಿಗೆ ಸಾಧ್ಯವಾದರೆ ಮೋದಿ ಬರ್ತಾರೆ ಎಂದರು.
ಬಿಜೆಪಿಯಲ್ಲಿ ಇರೋರೆಲ್ಲ ನನ್ನ ಹಳೇ ಸ್ನೇಹಿತರು: ಅಶ್ವಥ್ ನಾರಾಯಣ ಭೇಟಿ ಬಳಿಕ ಎಚ್‌ಡಿಕೆ ಹೇಳಿಕೆ
ಇನ್ನು ಬೆಳಗಾವಿ ಬಿಜೆಪಿಯಲ್ಲಿ ಅಸಮಾಧಾನ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಬಿಜೆಪಿಯಲ್ಲಿ ಒಡಕು ಎನ್ನುವ ವಿಚಾರವೇ ಇಲ್ಲ. ಆ ಶಬ್ಧವನ್ನು ನೀವು(ಮಾಧ್ಯಮ) ಬಳಸಬೇಡಿ ಎಂದರು. ಮತ್ತೆ 'ಅಸಮಾಧಾನ ಶಮನ ಮಾಡೋಕೆ ಬೆಳಗಾವಿಗೆ ಬಂದಿರುವಿರಾ?' ಎಂಬ ಮಾಧ್ಯಮಗಳ ಪ್ರಶ್ನೆಗೆ,'ನಮ್ಮ ಕಾರ್ಯಕರ್ತರು ಇಲ್ಲಿದ್ದಾರೆ ಅವರ ಜೊತೆ ಸಭೆ ಮಾಡಿ, ಬೆರೆಯಲು ಬಂದಿದ್ದೇನೆ ಎಂದರು.
ಜಗದೀಶ್ ಶೆಟ್ಟರ್ ಅವರನ್ನ ನಾವೇ ಬಿಜೆಪಿಗೆ ಕರೆತಂದಿದ್ದೇವೆ. ಅವರ ಪರಿಷತ್ ಅವಧಿ ಇನ್ನೂ ಆರು ವರ್ಷ ಇತ್ತು. ಅವರನ್ನ ಒತ್ತಾಯ ಮಾಡಿ ನಾವೇ ಬಿಜೆಪಿಗೆ ಕರೆತಂದಿದ್ದೇವೆ ಎಂದರು. ಇನ್ನು ಮಂಗಳಾ ಅಂಗಡಿಗೆ ಟಿಕೆಟ್ ತಪ್ಪಿದ್ದರಿಂದ ಮಹಿಳಾ ಮತ ಮಿಸ್ ಆಗ್ತಾವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಿಎಸ್‌ವೈ ಮಹಿಳಾ ಮತದಾರರು ನಮ್ಮ ಜೊತೆಗೆ ಇದ್ದಾರೆ. ನೂರಕ್ಕೆ ತೊಂಬತ್ತರಷ್ಟು ಮಹಿಳೆಯರು ನಮ್ಮೊಂದಿಗಿದ್ದಾರೆ ಎಂದರು.
ಮಗ ಕಲಿತು ಫಾರಿನ್‌ಗೆ ಹೋಗ್ಬಹುದಿತ್ತು ಸಮಾಜ ಸೇವೆಗೆ ಬಂದಿದ್ದಾರೆ; ಮಗನ ಕೈ ಬಲಪಡಿಸಿ: ಲಕ್ಷ್ಮೀ ಹೆಬ್ಬಾಳ್ಕರ್
ಇನ್ನು ಬಿಜೆಪಿ ನಾಯಕರು ಜೆಡಿಎಸ್ ನಾಯಕರನ್ನು ಕಡೆಗಣಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೇನಂತೀರಿ ಎಂಬ ಪ್ರಶ್ನೆಗೆ, ಆ ರೀತಿ ಏನೂ ಇಲ್ಲ. ಜೆಡಿಎಸ್ ಮತ್ತು ನಾವು ಒಗ್ಗಟ್ಟಿನಿಂದ ಇದ್ದೇವೆ. ಒಗ್ಗಟ್ಟಿನಿಂದಲೇ ಚುನಾವಣೆ ಎದುರಿಸುತ್ತೇವೆ. ಜೆಡಿಎಸ್ ಬಿಜೆಪಿ ಸೇರಿ ರಾಜ್ಯದಲ್ಲಿ 28 ಕ್ಷೇತ್ರ ಗೆಲ್ಲುತ್ತೇವೆಂದು ಪುನರುಚ್ಚರಿಸಿದರು.