ಗೆದ್ದರೆ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ; 'ಹಿಂದಿ ಬರೊಲ್ಲ' ಎಂದ ಹೆಗ್ಡೆಗೆ ಕೋಟ ಶ್ರೀನಿವಾಸ ತಿರುಗೇಟು!

ನಾನು ಪ್ರಮಾಣವಚನವನ್ನು ಕನ್ನಡದಲ್ಲೆ ತೆಗೆದುಕೊಳ್ಳುತ್ತೇನೆ. ಸದನಕ್ಕೆ ಪ್ರವೇಶ ಮಾಡಿದ ಆರು ತಿಂಗಳಲ್ಲಿ ಹಿಂದಿ ಕಲಿಯುತ್ತೇನೆ. ಹೆಗ್ಡೆಯವರಿಗೆ ಸಮಾಧಾನ ಆಗುವಷ್ಟು ಹಿಂದಿಯಲ್ಲಿ ಭಾಷಣ ಮಾಡಿ ಬರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಚಾಲೆಂಜ್ ಮಾಡಿದರು.

Lok sabha election 2024  BJP Candidate Kota shrinivas pujary reaction about jayaprakash hegde statement rav

ಚಿಕ್ಕಮಗಳೂರು (ಮಾ.24): ನಾನೊಬ್ಬ ಸಾಮಾನ್ಯ ಬಡ ಕೂಲಿ ಮಾಡುವ ಕುಟುಂಬದಲ್ಲಿ ಹುಟ್ಟಿದವನು. ಹಾಗಾಗಿ ಜಯಪ್ರಕಾಶ್ ಹೆಗ್ಡೆಯಷ್ಟು ಹಿಂದಿ, ಇಂಗ್ಲಿಷ್ ಮಾತಾಡಲು ನನಗೆ ಬರೊಲ್ಲ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

'ಕೋಟ ಶ್ರೀನಿವಾಸ ಪೂಜಾರಿಗೆ ಹಿಂದಿ ಬರೊಲ್ಲ' ಎಂಬ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಸಂಬಂಧ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಹಿಂದಿ ಬರೊಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ‌. ಹೆಗ್ಡೆಯವರು ನನ್ನ ಮೇಲಿನ ಅಭಿಮಾನ, ಪ್ರೀತಿಯಿಂದ ಮುಂದೆ ಮುಜುಗರ ಆಗಬಾರದು ಎಂಬ ದೃಷ್ಟಿಯಿಂದ ಹಾಗೆ ಹೇಳಿದ್ದಾರೆ ಎಂದರು. 

ವ್ಯಕ್ತಿಗತವಾಗಿ ಯಾವತ್ತೂ ಮೋದಿಗೆ ಬೈದಿಲ್ಲ, ಕೇಳಿದ ಪ್ರಶ್ನೆಗೆ ಉತ್ತರ ಕೊಡಲಾಗದೆ ದಿಕ್ಕು ತಪ್ಪಿಸುತ್ತಿದ್ದಾರೆ: ಸಂತೋಷ್ ಲಾಡ್

ನಾನು ಹೆಗ್ಡೆಯವರಿಗೆ ಮನವಿ ಮಾಡುತ್ತೇನೆ. ಹೆಗ್ಡೆಯವರಿಗೆ ನನ್ನ ಮೇಲಿನ ಪ್ರೀತಿ ಅರ್ಥವಾಗಿದೆ. ನಾನು ಪ್ರಮಾಣವಚನವನ್ನು ಕನ್ನಡದಲ್ಲೆ ತೆಗೆದುಕೊಳ್ಳುತ್ತೇನೆ. ಸದನಕ್ಕೆ ಪ್ರವೇಶ ಮಾಡಿದ ಆರು ತಿಂಗಳಲ್ಲಿ ಹಿಂದಿ ಕಲಿಯುತ್ತೇನೆ. ಹೆಗ್ಡೆಯವರಿಗೆ ಸಮಾಧಾನ ಆಗುವಷ್ಟು ಹಿಂದಿಯಲ್ಲಿ ಭಾಷಣ ಮಾಡಿ ಬರುತ್ತೇನೆ ಎಂದು ಚಾಲೆಂಜ್ ಮಾಡಿದರು.

ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈಯಲ್ಲಿದೆ ಅಂತಾ ಮೋದಿ ಹೇಳ್ತಾರೆ, ಆದ್ರೆ ರಾಜ್ಯ ಬಿಜೆಪಿ ಯಾರ ಕೈಯಲ್ಲಿದೆ? ಈಶ್ವರಪ್ಪ ವಾಗ್ದಾಳಿ!

Latest Videos
Follow Us:
Download App:
  • android
  • ios