ಜನ ಸೇರಿರೋದು ನೋಡಿದ್ರೆ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿನೇ ಗೆಲ್ಲೋದು: ಸಿಎಂ

ನೀವೆಲ್ಲ ಇಂದು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮನ್ನ ನೋಡಿದ್ರೆ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಅನ್ನೋ ವಿಶ್ವಾಸ ಮೂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

Lok sabha 2024 Karnataka CM Siddaramaiah speech at KR Pete congress workers convention rav

ಕೆಆರ್ ಪೇಟೆ (ಏ.20): ನೀವೆಲ್ಲ ಇಂದು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮನ್ನ ನೋಡಿದ್ರೆ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಅನ್ನೋ ವಿಶ್ವಾಸ ಮೂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಇಂದು ಕೆಆರ್‌ ಪೇಟೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತಾನಾಡಿದ ಸಿಎಂ, ಕೆಆರ್ ಪೇಟೆ ಕೃಷ್ಣ ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿ. ನಾನು ಜೆಡಿಎಸ್‌ನ ಅಧ್ಯಕ್ಷ ಆಗಿದ್ದಾಗ ದೇವೇಗೌಡರು ಕೃಷ್ಣರನ್ನ ಮಂತ್ರಿ ಮಾಡಲು ಒಪ್ಪಿರಲಿಲ್ಲ. ನಾನು ಅವರನ್ನ ಮನವೊಲಿಸಿ ಸ್ಪೀಕರ್ ಮಾಡಲು ಒಪ್ಪಿಸಿದ್ದೆ. ಕೃಷ್ಣ ಅವರು ಕೆ.ಆರ್.ಪೇಟೆ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದಾರೆ. ಆದರೆ ಇಂದು ಇಲ್ಲಿ ಜೆಡಿಎಸ್‌ ಶಾಸಕ ಗೆದ್ದಿದ್ದಾರೆ ಅಷ್ಟೇ, ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಮತ್ತೆ ಆ ತಪ್ಪನ್ನು ಮಾಡಬೇಡಿ. ಕೃಷ್ಣ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧವಾಗಿದ್ದರು.  ಹಾಗಾಗಿ ದೇವೇಗೌಡರು ಅವರಿಗೆ 2004ರಲ್ಲಿ ಮಂತ್ರಿ ಮಾಡಲು ಬಿಡಲಿಲ್ಲ ಎಂದು ಆರೋಪಿಸುವ ಜೊತೆಗೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರ ಒಡನಾಟ ನೆನೆದರು.

ದೇಶದಲ್ಲಿ ಮೋದಿ ಅಲೆ ಇದ್ಯಾ? ಈ ಬಾರಿ ಹಾಗೇನು ಕಾಣ್ತಿಲ್ಲ ಎಂದ ಜಮೀರ್ ಅಹ್ಮದ್

ಇಲ್ಲಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ, ಸ್ವಾಗತಾರ್ಹ. ಈ ಬಾರಿ ನೀವು ಹೆಚ್ಚಿನ ಲೀಡ್ ಕೊಡಿಸ್ತೀರಿ ಅಲ್ವಾ. ನೀವು ಓಟ್ ಹಾಕೇ ಹಾಕ್ತೀರಿ. ಮನೆಯವರಿಗೆಲ್ಲ ಹೇಳಿ ಓಟ್ ಹಾಕಿಸಿ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಮನವೊಲಿಸಿ. ನಮ್ಮ ಗ್ಯಾರಂಟಿಗಳನ್ನ ಮನವರಿಕೆ ಮಾಡಿಕೊಟ್ಟು ಹೆಚ್ಚು ಓಟ್ ಹಾಕಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ನುಡಿದಂತೆ ನಡೆದಿದೆ. ಯಾವುದೇ ಪಕ್ಷ, ಜಾತಿ, ಧರ್ಮ ನೋಡದೆ ಎಲ್ಲಾ ಬಡವರಿಗೂ ಯೋಜನೆ ಜಾರಿಗೊಳಿಸಿದ್ದೇವೆ. ಎಲ್ಲ ಬಡವರು ಮುಖ್ಯ ವಾಹಿನಿಗೆ ಬರಬೇಕು ಅನ್ನೋದು ಕಾಂಗ್ರೆಸ್‌ ಉದ್ದೇಶ. ಅದೇ ಮೋದಿ 10 ವರ್ಷದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. 15 ಲಕ್ಷ ಹಾಕಲಿಲ್ಲ, ಕಪ್ಪು ಹಣ ತರಲಿಲ್ಲ, ಉದ್ಯೋಗ ಸೃಷ್ಟಿ ಮಾಡಲಿಲ್ಲ, ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ, ಬೆಲೆ ಏರಿಕೆ ನಿಯಂತ್ರಣ ಮಾಡಲಿಲ್ಲ. ಒಂದೂ ಭರವಸೆಯನ್ನ ಮೋದಿ ಈಡೇರಿಸಲಿಲ್ಲ. ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚಿ ಒಡೆದಾಡುವ ಕೆಲಸ ಮಾಡಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. 

ಇನ್ನು ದೇವೇಗೌಡ, ಕುಮಾರಸ್ವಾಮಿ ಕೊನೆಯ ದಿನ ಸಭೆ ಇಟ್ಕೊಂಡಿದ್ದಾರಂತೆ. ಆ ದಿನ ಬಂದು ಅಳೋಕೆ ಸಭೆ ನಡೆಸ್ತಾರೆ. ಅಳೋದೇ ಅವರ ಕೊನೆಯ ಅಸ್ತ್ರ. ನೀವುಗಳು ಅವರು ಅಳೋದನ್ನ ನಂಬೋಕೆ ಹೋಗಬೇಡಿ. ರೈತರ ಮಗ, ಮಣ್ಣಿನ ಮಗ ಅಂತೀರಲ್ಲ, ರೈತರಿಗೆ ಏನು ಮಾಡಿದ್ರಿ? ಮೇಕೆದಾಟು ಪಾದಯಾತ್ರೆಯನ್ನ ಟೀಕೆ ಮಾಡಿದ್ದು ಇದೇ ದೇವೇಗೌಡ, ಕುಮಾರಸ್ವಾಮಿ. ಮೋದಿ ಜೊತೆ ಚೆನ್ನಾಗಿದ್ರೂ ಮೇಕೆದಾಟು ಯೋಜನೆ ಬಗ್ಗೆ ದನಿ ಎತ್ತಲಿಲ್ಲ. ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಮಾತಾಡಲಿಲ್ಲ. ಮೋದಿ ಅನ್ಯಾಯ ಸಹಿಸಿಕೊಂಡಿರುವ ಇವರನ್ನ ಒಪ್ಪಿಕೊಳ್ಳಬೇಕ? ಎಂದ ಪ್ರಶ್ನಿಸಿದರು.

ಮೋದಿಗೆ ಚೊಂಬು ತೋರಿಸಲು ಹೋಗಿ ಜೈಲು ಸೇರಿದ್ದ ನಲಪಾಡ್ ಬೇಲ್ ಪಡೆದು ಹೊರಬಂದು ಹೇಳಿದ್ದೇನು?

ಇನ್ನು ಸುಮಲತಾರನ್ನ ನೀವು ಗೆಲ್ಲಿಸಿದ್ರಿ, ಆಯಮ್ಮ ಕೂಡ ಬಿಜೆಪಿ ಸೇರಿದ್ರು. ಪ್ರವಾಹ ಆದಾಗ, ಬರಗಾಲ ಬಂದಾಗ ಎಂದೂ ಬಾರಲಿಲ್ಲ. ಈಗ ಚುನಾವಣೆ ಬಂದಾಗ ಮಾತ್ರ ಕೇಂದ್ರದವರು ಕರ್ನಾಟಕಕ್ಕೆ ಬರ್ತಾರೆ. ಜನರ ಕಷ್ಟ, ಸುಖ ಕೇಳೋಕೆ ಬರಲಿಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ ದೇವೇಗೌಡರು ಏನು ಹೇಳಿದ್ರು ನೆನಪು ಮಾಡಿಕೊಳ್ಳಿ. ಮೋದಿ ಮತ್ತೆ ಪ್ರಧಾನಿ ಆದ್ರೆ ದೇಶ ಬಿಡ್ತೇನೆ ಅಂದ್ರು. ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿ ಹುಟ್ತೀನಿ ಅಂದಿದ್ರು. ಇವಾಗ ಕೋಮುವಾದಿ ಬಿಜೆಪಿ ಜೊತೆ ಸೇರಿದ್ದೀರಲ್ಲ ನಿಮಗೆ ನಾಚಿಕೆ ಆಗಲ್ವಾ? ಸಿದ್ದರಾಮಯ್ಯನ ಗರ್ವಭಂಗ ಮಾಡ್ತಾನೆ ಅಂತಾರೆ. ನನಗೆ ಗರ್ವನೇ ಇಲ್ಲವಲ್ಲ, ಭಂಗ ಮಾಡೋದು ಎಲ್ಲಿಂದ ದೇವೇಗೌಡರೆ? ಕೋಮುವಾದಿ ಜೊತೆ ಸೇರಿರುವ ನೀವು ಜಾತ್ಯಾತೀತರಲ್ಲ. ಇಡೀ ರಾಜ್ಯಕ್ಕೆ ಜೆಡಿಎಸ್‌, ಬಿಜೆಪಿ ಕೊಡುಗೆ ಶೂನ್ಯ ಎಂದರು.

Latest Videos
Follow Us:
Download App:
  • android
  • ios