ಮೋದಿಗೆ ಚೊಂಬು ತೋರಿಸಲು ಹೋಗಿ ಜೈಲು ಸೇರಿದ್ದ ನಲಪಾಡ್ ಬೇಲ್ ಪಡೆದು ಹೊರಬಂದು ಹೇಳಿದ್ದೇನು?
ಇವತ್ತು ನರೇಂದ್ರ ಮೋದಿ ಸರ್ಕಾರ ಜನರಿಗೆ ಚೊಂಬು ನೀಡಿದೆ. ಉದ್ಯೋಗ ನೀಡುತ್ತೇವೆ ಎಂದು ಹೇಳಿ ಚೊಂಬು ನೀಡಿದೆ ಎಂದು ಕಾಂಗ್ರೆಸ್ ಯೂತ್ ಪ್ರೆಸಿಡೆಂಟ್ ಮೊಹಮ್ಮದ್ ನಲಪಾಡ್ ಹೇಳಿದರು.
ಬೆಂಗಳೂರು (ಏ.20): ಇವತ್ತು ನರೇಂದ್ರ ಮೋದಿ ಸರ್ಕಾರ ಜನರಿಗೆ ಚೊಂಬು ನೀಡಿದೆ. ಉದ್ಯೋಗ ನೀಡುತ್ತೇವೆ ಎಂದು ಹೇಳಿ ಚೊಂಬು ನೀಡಿದೆ ಎಂದು ಕಾಂಗ್ರೆಸ್ ಯೂತ್ ಪ್ರೆಸಿಡೆಂಟ್ ಮೊಹಮ್ಮದ್ ನಲಪಾಡ್ ಹೇಳಿದರು.
ಇಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಚೊಂಬು ಪ್ರದರ್ಶಿಸಿದ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಲಪಾಡ್, ಯುವಕರಿಗೆ ಉದ್ಯೋಗದ ಭರವಸೆ ನೀಡಿ ಚೊಂಬು ನೀಡಿದೆ. ಹೀಗಾಗಿ ಇಂದು ಮೋದಿಗೆ ಚೊಂಬು ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದೇವೆ. ಪೊಲೀಸರು ನನ್ನ ಅರೆಸ್ಟ್ ಮಾಡಿದ್ರು. ನನ್ನ ಮೇಲೆ ಎಫ್‌ಐಆರ್ ಕೂಡ ಹಾಕಿದ್ದಾರೆ. ಆದರೆ ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಜಗ್ಗೊಲ್ಲ, ಬಗ್ಗೋದಿಲ್ಲ ಎಂದರು.
EXCLUSIVE | ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಏನಂದ್ರು ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದ ವೇಳೆ ಮೇಖ್ರಿ ಸರ್ಕಲ್ ಬಳಿ ಚೊಂಬು ಪ್ರದರ್ಶನ ಮಾಡಲು ಯತ್ನಿಸಿದ್ದ ನಲಪಾಡ್ ಮತ್ತು ಕಾರ್ಯಕರ್ತರು. ಈ ವೇಳೆ ನಲಪಾಡ್ ಸೇರಿ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆಯುವ ವೇಳೆ ಪೊಲೀಸರೊಂದಿಗೆ ವಾಗ್ವಾದ ಕೂಡ ನಡೆಸಿದ್ದ ನಲಪಾಡ್. ಕೊನೆಗೂ ಪ್ರಿವೆನ್ಷನ್ ಆಫ್ ಆ್ಯಕ್ಟ್ ಅಡಿ ನಲಪಾಡ್ ವಶಕ್ಕೆ ಪಡೆದಿದ್ದ ಸದಾಶಿವನಗರ ಪೊಲೀಸರು.
ದಕ್ಷಿಣದಲ್ಲಿ ಬಿಜೆಪಿ ಏಕೈಕ ಅತೀ ದೊಡ್ಡ ಪಕ್ಷ, ವಿಶೇಷ ಸಂದರ್ಶನದಲ್ಲಿ ಮೋದಿ ಬಿಚ್ಚಿಟ್ಟ ಸೂತ್ರ!
ಸದ್ಯ ಸ್ಟೇಷನ್ ಬೇಲ್ ನೀಡಿ ನಲಪಾಡ್ ಮತ್ತು ಕಾರ್ಯಕರ್ತರನ್ನು ಬಿಟ್ಟು ಕಳಿಸಿರುವ ಪೊಲೀಸರು. ನಲಪಾಡ್ ವಿರುದ್ಧ ಎಫ್ಐಆರ್ ದಾಖಲಿಸುವ ಸಂಬಂಧ ಕೋರ್ಟ್ ಗೆ ಅರ್ಜಿ ಹಾಕಲು ತಯಾರಿ ನಡೆಸಿರುವ ಪೊಲೀಸರು. ಕೋರ್ಟ್‌ನಿಂದ ಅನುಮತಿ ಸಿಕ್ಕ ಬಳಿಕ ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಜರುಗಿಸಲಿದ್ದಾರೆ.