Hubli violence ಪೊಲೀಸ್ ಕಾರಿನ ಮೇಲೆ ಹತ್ತಿ ನಿಂತು ಹುಬ್ಬಳ್ಳಿ ಉದ್ರಿಕ್ತ ಕೇಕೆ!
- ವಾಹನದ ಮೇಲಿಂದಲೇ ಪ್ರಚೋದನಾಕಾರಿ ಭಾಷಣ ಮಾಡಿದ್ದ ‘ಮೌಲ್ವಿ’
- ಗಲಭೆ ವೇಳೆಯ ವಿಡಿಯೋ ವೈರಲ್, ಭಾಷಣಕಾರನಿಗಾಗಿ ತೀವ್ರ ಶೋಧ
- ಲಭೆ ಸ್ಥಳದಲ್ಲಿದ್ದ 7 ಸಿಸಿಟೀವಿ ಕೆಮೆರಾಗಳೇ ನಾಪತ್ತೆ:
ಹುಬ್ಬಳ್ಳಿ(ಏ.19): ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಡೆದ ದಾಂಧಲೆ ಕುರಿತು ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ. ಪೊಲೀಸ್ ಠಾಣೆ ಮುಂಭಾಗದಲ್ಲೇ ಪೊಲೀಸ್ ವಾಹನದ (ಇನ್ನೋವಾ ಕಾರು) ಮೇಲೆ ಹತ್ತಿ ನಿಂತು ಮೌಲ್ವಿಯನ್ನು ಹೋಲುವ ವ್ಯಕ್ತಿಯೊಬ್ಬ ಪ್ರಚೋದನಾಕಾರಿ ಭಾಷಣ ಮಾಡಿರುವ ಸಂದೇಶದ ವಿಡಿಯೋ ಹರಿದಾಡುತ್ತಿದೆ. ವಿಡಿಯೋದಲ್ಲಿರುವುದು ಮೌಲ್ವಿಯಲ್ಲ, ಮುಸ್ಲಿಂ ಸಮಾಜಕ್ಕೆ ಸೇರಿದ ಸ್ಥಳೀಯ ವ್ಯಕ್ತಿ ಎಂದು ಮೂಲಗಳು ತಿಳಿಸಿದ್ದು ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ.
ಗಲಾಟೆ ನಡೆದ ದಿನ ಡಿಸಿಪಿ ವಾಹನದ ಮೇಲೆ ನಿಂತು ಮುಸ್ಲಿಂ ಸಮಾಜದ ವ್ಯಕ್ತಿಯೊಬ್ಬ ‘ಬಂಧಿತನನ್ನು ನಮಗೆ ಒಪ್ಪಿಸಿ, ನಾವು ನೋಡಿಕೊಳ್ಳುತ್ತೇವೆ. ನಮ್ಮ ಸಮುದಾಯಕ್ಕೆ ಅಪಮಾನ ಮಾಡಿರುವವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದ ಎಂದು ಹೇಳಲಾಗಿದೆ. ಹೀಗೆ ಭಾಷಣ ಮಾಡಿರುವಾತ ಮೌಲ್ವಿಯಂತೆ ಹೋಲುತ್ತಿದ್ದ. ಹೀಗಾಗಿ ಮೌಲ್ವಿ ಎಂದು ವಿಡಿಯೋ ವೈರಲ್ ಆಗಿದೆ.
News Hour ಬಂಧಿತ ಹುಬ್ಬಳ್ಳಿ ಗಲಭೆಕೋರರಿಗೆ ಅಮಾಯಕ ಸರ್ಟಿಫಿಕೇಟ್, ರಾಜಕೀಯ ಆಟ ಜೋರು!
ಆದರೆ ಆಗ ಮಾತನಾಡಿರುವಾತ ಮೌಲ್ವಿ ಅಲ್ಲ. ಆದರೆ ಮೌಲ್ವಿ ತರಹ ಗಡ್ಡ ಬಿಟ್ಟಿದ್ದಾನಷ್ಟೇ. ಆಗ ಆತ ಬಂಧಿತನನ್ನು ನನಗೆ ಒಪ್ಪಿಸಿ ಎಂದು ಹೇಳುತ್ತಿದ್ದ. ಆತನ ಹೆಸರು ವಸೀಂ ಎಂಬುದಾಗಿ ‘ಕನ್ನಡಪ್ರಭ’ಕ್ಕೆ ಮೂಲಗಳು ತಿಳಿಸಿವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಸೀಂ ಎಂದು ಹೇಳಲ್ಪಡುವ ಈ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವೈರಲ್ ವಿಡಿಯೋದಲ್ಲಿ ಏನಿದೆ?:
ವಿಡಿಯೋದಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯೆದುರು ಪೊಲೀಸ್ ವಾಹನದ ಮೇಲೆ ಹತ್ತಿರುವುದು. ಹ್ಯಾಶ್ ಟ್ಯಾಗ್ ಬಳಸಿ ‘ಲಬ್ಬಾಯಿ ಕ್ಯಾ ರಸೂಲಲ್ಲಾ ಹಾಗೂ ಗುಸ್ತಾಕೆ ರಸೂಲ್ ಕಿ ಏಕ್ ಸಝಾ ಸರ್ ತನ್‌ಸೆ ಜುದಾ’ ಎಂಬ ಬರಹ, ಕತ್ತಿ ಹಾಗೂ ಇನ್ನೊಂದು ಇಮೋಜಿ ಚಿತ್ರವಿದೆ. ಮೌಲ್ವಿ ಮಾತನಾಡಿರುವ ಆಡಿಯೋ ಇಲ್ಲ. ಬದಲಾಗಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಇದೆ.
Pramod Muthalik: ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರು ಯಾರು ಅಮಾಯಕರಲ್ಲ: ಇದು ಪ್ರೀ ಪ್ಲಾನ್ ಗಲಾಟೆ
10 ಆರೋಪಿಗಳ ಸೆರೆ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವ ಪೊಲೀಸರು ಮಂಗಳವಾರ ಮತ್ತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನೂರು ಮೀರಿದೆ. ಇನ್ನು ವಿವಾದಿತ ಪೋಸ್ಟ್ ಹಾಕಿದ ಯುವಕ ಹಾಗೂ ತಡರಾತ್ರಿ ದಾಂಧಲೆ ಮಾಡಿದ 88 ಆರೋಪಿಗಳಿಗೆ ಇಲ್ಲಿನ 4ನೇ ಜೆಎಂಎಫ್‌ಸಿ ಕೋರ್ಚ್ ಏ.30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಎಡಿಜಿಪಿ ಪ್ರತಾಪ್ ರೆಡ್ಡಿ ಇಲ್ಲಿನ ಕಮೀಷನರ್ ಕಚೇರಿಯಲ್ಲಿ ಮೊಕ್ಕಾಂ ಹೂಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೇಳಿಕೆಯನ್ನು ಪಡೆಯಲಾಗಿದ್ದು, ಪಂಚನಾಮಾ ಪ್ರಕ್ರಿಯೆ ನಡೆಸಲಾಗಿದೆ. ದಾಂಧಲೆ ನಡೆಸಿ ತಲೆತಪ್ಪಿಸಿಕೊಂಡವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಸುತ್ತಮುತ್ತಲ ಅಂಗಡಿ ಮುಂಗಟ್ಟು, ಮನೆ, ದೇವಸ್ಥಾನಗಳ ಸಿಸಿ ಕ್ಯಾಮೆರಾ ಚಿತ್ರಾವಳಿ ಸೇರಿ ಇನ್ನಿತರ ಮಹತ್ವದ ಡಿಜಿಟಲ್ ಸಾಕ್ಷ್ಯ ಸಂಗ್ರಹಣೆ ಮಾಡಿದ್ದಾರೆ.
ಘಟನೆ ಹಿಂದಿನ ಕೈವಾಡ, ಹೊರಗಿನಿಂದ ಬಂದಿದ್ದರೆ ಎಂಬುದು ಸೇರಿ ಹಲವು ದೃಷ್ಟಿಕೋನದಿಂದ ತನಿಖೆ ನಡೆಸಲಾಗುತ್ತಿದೆ. ಸದ್ಯ ಬಂಧಿತರಲ್ಲಿ 6 ರೌಡಿಶೀಟರ್‌ಗಳು ಇದ್ದಾರೆ. ಎಐಎಂಐಎಂ ಮುಖಂಡ ಇರ್ಫಾನ್ ನಲವತ್ವಾಡ ಮೇಲೆ ಹಿಂದೆ ಮೀಟರ್ ಬಡ್ಡಿ, ದ್ವಿಚಕ್ರ ವಾಹನ ಕಳವು ಸೇರಿ ಪ್ರಕರಣ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.