ಫೆಬ್ರವರಿ ಅಂತ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಹೊಸಬರು, ಹಳಬರು ಇಬ್ಬರಿಗೂ ಟಿಕೆಟ್‌ ನೀಡಲಾಗುವುದು. 

ವಿಜಯಪುರ (ಫೆ.12): ಫೆಬ್ರವರಿ ಅಂತ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಹೊಸಬರು, ಹಳಬರು ಇಬ್ಬರಿಗೂ ಟಿಕೆಟ್‌ ನೀಡಲಾಗುವುದು. ಬರೀ ಹೊಸಬರಿಗಷ್ಟೇ ಟಿಕೆಟ್‌ ಕೊಡುವುದಿಲ್ಲ. ಗೆಲ್ಲುವವರು ಹಳಬರಿದ್ದರೂ ಅವರಿಗೂ ಟಿಕೆಟ್‌ ನೀಡುತ್ತೇವೆ. 3 ಬಾರಿ ಸಮೀಕ್ಷೆ ಮಾಡಿಸಲಾಗಿದೆ. ಯಾರು ಗೆಲ್ಲುತ್ತಾರೆ, ಗೆಲ್ಲುವ ಸಾಧ್ಯತೆ ಇದೆ ಎಂಬುದನ್ನು ನೋಡಿಕೊಂಡು ಅಂಥವರಿಗೆ ಟಿಕೆಟ್‌ ನೀಡಲಾಗುವುದು ಎಂದರು. 

ಹಂಚಿಕೆ ವೇಳೆ ಸಾಮಾಜಿಕ ನ್ಯಾಯ ಪಾಲಿಸಲಾಗುವುದು. ಅಲ್ಪಸಂಖ್ಯಾತರು ಗೆಲ್ಲುವ ಕಡೆಗೆ ಅವರಿಗೂ ಟಿಕೆಟ್‌ ನೀಡಲಾಗುವುದು. ಎಸ್ಸಿ, ಎಸ್ಟಿ51 ಸೀಟು ಇವೆ. ಅಲ್ಲಿಯೂ ಗೆಲ್ಲುವವರನ್ನು ಪರಿಗಣಿಸಲಾಗುವುದು. ಹಿಂದುಳಿದವರು ಗೆಲ್ಲುವ ಕಡೆಗೆ ಅವರಿಗೂ ಟಿಕೆಟ್‌ ನೀಡಲಾಗುವುದು. ಯುವಕರಿಗೆ ಆದ್ಯತೆ ನೀಡುತ್ತೇವೆ. ಬರೀ ಯುವಕರಿಗೆ ಟಿಕೆಟ್‌ ಕೊಡುವುದಿಲ್ಲ. ವಯಸ್ಸಾದಂತಹ ಅರ್ಹರಿಗೂ ಟಿಕೆಟ್‌ ಕೊಡುತ್ತೇವೆ. ಗೆಲ್ಲುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ರಾಜ್ಯದಲ್ಲಿ ಈ ಬಾರಿ 130ರಿಂದ 150 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ರಾಜ್ಯಪಾಲರಿಂದ ಸುಳ್ಳು ಹೇಳಿಸಿದ ಬಿಜೆಪಿ ಸರ್ಕಾರ: ಸಿದ್ದರಾಮಯ್ಯ ಆರೋಪ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಎಷ್ಟೇ ಬಾರಿ ಕರ್ನಾಟಕಕ್ಕೆ ಬಂದರೂ ಬಿಜೆಪಿಗೆ ಏನೂ ಪ್ರಯೋಜನವಾಗಲ್ಲ. ಯಾರೇ ಬಂದರೂ ಈ ಬಾರಿ ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ಮತ ಹಾಕಲು ನಿರ್ಧರಿಸಿದ್ದಾರೆ ಎಂದರು. ಬಿಜೆಪಿ ಕೇಂದ್ರ ನಾಯಕರಿಗೆ ಭ್ರಷ್ಟಾಚಾರ ತಡೆಯಲು ಆಗಲ್ಲ. ಬೆಲೆ ಏರಿಕೆ ನಿಯಂತ್ರಣ ಮಾಡಲು ಆಗಲ್ಲ. ಯುವಕರು, ಮಹಿಳೆಯರ ಸಮಸ್ಯೆಗೆ ಸ್ಪಂದಿಸಲು ಆಗಲ್ಲ. 2017ರಲ್ಲಿಯೇ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಐದು ವರ್ಷ ಮುಗಿದು ಹೋಯಿತು, ರೈತರ ಸಾಲ ದುಪ್ಪಟ್ಟು ಆಗಿದೆ. ರೈತರ ಆದಾಯ ಮಾತ್ರ ಹೆಚ್ಚಾಗಲಿಲ್ಲ. 

ಕೊಡಗಿಗೆ ಬರಲು ಹೆದರಿದ್ರಾ ಸಿದ್ದು, ಡಿಕೆಶಿ ಜೋಡಿಯ ಪ್ರಜಾಧ್ವನಿ ಯಾತ್ರೆ!

ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ದರ ಹೆಚ್ಚಳದ ಬಗ್ಗೆ ಸಹಮತವಿದ್ದರೆ ಬಿಜೆಪಿ ಪರವಾಗಿ ಮಾತನಾಡಿ. ಸಹಮತ ಇಲ್ಲ ಎನ್ನುವುದಾದರೆ ಬಿಜೆಪಿ ವಿರುದ್ಧ ಮಾತನಾಡಬೇಕು ಎಂದು ಹೇಳಿದರು. ನಮ್ಮ ಸರ್ಕಾರದ ಮೇಲೆ ಬಿಜೆಪಿ ಮಾಡಿದ ಆರೋಪಗಳು ಸುಳ್ಳು ಎಂದು ಸಿಬಿಐ ವರದಿ ನೀಡಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಆರೋಪ ಕೇಳಿ ಬಂದಾಗ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇವೆ. ಆದರೆ, ನಾವು ಮಾಡಿದ ಆರೋಪಗಳನ್ನು ಬಿಎಸ್‌ವೈ, ಬೊಮ್ಮಾಯಿಯವರು ಸಿಬಿಐಗೆ ಕೊಟ್ಟರಾ?. ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಮೂಲಕ ನಮ್ಮ, ನಿಮ್ಮ ಅವಧಿಯ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಿಸಿ ಎಂದು ಹೇಳಿದ್ದೇವೆ. ಆದರೆ, ಮಾಡಿಸಿಲ್ಲ, ಯಾಕೆಂದರೆ ಅವರಿಗೆ ಧಮ್‌ ಎಲ್ಲ ಎಂದು ವ್ಯಂಗ್ಯವಾಡಿದರು.