ಜೂ.11ರಂದು ಸಚಿನ್ ಪೈಲಟ್‌ರಿಂದ ಹೊಸ ಪಕ್ಷ ಸ್ಥಾಪನೆ?
ಜೂ.11ರಂದು ಸಚಿನ್ ಪೈಲಟ್ ಅವರ ತಂದೆ ದಿ. ರಾಜೇಶ್ ಪೈಲಟ್ ಅವರ ಜನ್ಮದಿನಾಚರಣೆ ನಡೆಯಲಿದ್ದು, ಅದೇ ದಿನವೇ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ. ಹೊಸ ಪಕ್ಷ ಸ್ಥಾಪನೆಗೆ ಈಗಾಗಲೇ ತಳಮಟ್ಟದ ಕೆಲಸಗಳು ಆರಂಭವಾಗಿದ್ದು, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಸ್ಥೆ ಇದಕ್ಕೆ ಸಹಾಯ ಮಾಡುತ್ತಿದೆ.

ಜೈಪುರ(ಜೂ.07): ರಾಜಸ್ಥಾನದಲ್ಲಿ ತನ್ನದೇ ಪಕ್ಷದ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪಕ್ಷದಿಂದ ಹೊರನಡೆದು, ಜೂ.11ರಂದು ಹೊಸ ಪಕ್ಷ ಸ್ಥಾಪನೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಜೂ.11ರಂದು ಸಚಿನ್ ಪೈಲಟ್ ಅವರ ತಂದೆ ದಿ. ರಾಜೇಶ್ ಪೈಲಟ್ ಅವರ ಜನ್ಮದಿನಾಚರಣೆ ನಡೆಯಲಿದ್ದು, ಅದೇ ದಿನವೇ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ. ಹೊಸ ಪಕ್ಷ ಸ್ಥಾಪನೆಗೆ ಈಗಾಗಲೇ ತಳಮಟ್ಟದ ಕೆಲಸಗಳು ಆರಂಭವಾಗಿದ್ದು, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಸ್ಥೆ ಇದಕ್ಕೆ ಸಹಾಯ ಮಾಡುತ್ತಿದೆ. ಇದರೊಂದಿಗೆ ರಾಜಸ್ಥಾನದಲ್ಲಿರುವ 3ನೇ ಮೈತ್ರಿಕೂಟ ಹನುಮಾನ್ ಬೆನಿವಾಲ್ ಅವರ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ ಮತ್ತು ಆಪ್ ಜೊತೆ ಸೇರ್ಪಡೆಯಾಗುವ ಕುರಿತಾಗಿಯೂ ಸಚಿನ್ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಸುಭದ್ರ ಸರ್ಕಾರ ರಚನೆ ಬೆನ್ನಲ್ಲೇ ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!
ಆದಾಗ್ಯೂ ದಿಲ್ಲಿಯಲ್ಲಿನ ಪಕ್ಷದ ವರಿಷ್ಠರು ತಮ್ಮ ಈ ನಡೆಗೆ ಯಾವ ಪ್ರತಿಕ್ರಿಯೆ ನೀಡಬಹುದು ಎಂಬುದನ್ನು ಪೈಲಟ್ ಗಮನಿಸುತ್ತಿದ್ದಾರೆ ಹಾಗೂ ಹಿಂದಿನ ರಾಜೇ ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಪ್ರಕರಣಗ ತನಿಖೆ ಕೋರಿರುವ ತಮ್ಮ ಬೇಡಿಕೆಗೆ ಗೆಹ್ಲೋಟ್ ಯಾವ ಕ್ರಮ ಕೈಗೊಳುಾ್ಳ$್ತರೆ ಎಂಬುದನ್ನು ಆಧರಿಸಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಅವು ಹೇಳಿವೆ.
ಇದೀಗ ಪೈಲಟ್ ಜೊತೆಗೆ ಎಷ್ಟುಮಂದಿ ಶಾಸಕರು ಪಕ್ಷ ತೊರೆಯಬಹುದು ಎಂಬ ಆತಂಕ ಪಕ್ಷವನ್ನು ಕಾಡಿದ್ದು, ಇದು ರಾಜಸ್ಥಾನದಲ್ಲಿ ಕಾಂಗ್ರೆಸ್ ಉಳಿವಿನ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಚಿನ್ ಪೈಲಟ್ 5 ದಿನಗಳ ಪಾದಯಾತ್ರೆ, 1ದಿನ ಉಪವಾಸ ಸತ್ಯಾಗ್ರಹಗಳನ್ನು ಸಹ ಮಾಡಿದ್ದಾರೆ. ಕಳೆದ 2 ವರ್ಷದಿಂದ ಅವರು ಮುಖ್ಯಮಂತ್ರಿ ಗೆಹ್ಲೋಟ್ ಜತೆ ಸಂಘರ್ಷಕ್ಕಿಳಿದಿದ್ದಾರೆ. ಹೈಕಮಾಂಡ್ ಅನೇಕ ಬಾರಿ ಸಂಧಾನಕ್ಕೆ ಯತ್ನಿಸಿದರೂ ಫಲಿಸುತ್ತಿಲ್ಲ.