Asianet Suvarna News Asianet Suvarna News

ಖರ್ಗೆ ರೀತಿ ಬಿಜೆಪಿಗರಿಗೂ ನೋಟಿಸ್‌ ನೀಡಿ ಎಂದ ಡಿಕೆಶಿ!

- ದಲಿತ ನಾಯಕ ಪ್ರಿಯಾಂಕ್‌ ಬಾಯಿಮುಚ್ಚಿಸಲು ಪೊಲೀಸರ ಯತ್ನ

- ಅಶ್ವತ್ಥನಾರಾಯಣ ಭ್ರಷ್ಟಾಚಾರಕ್ಕೆ ವಿಶ್ವಮಾನವ: ಡಿಕೆಶಿ

- ಸರ್ಕಾರ ಅರಗ ಜ್ಞಾನೇಂದ್ರಕ್ಕೆ ಯಾಕೆ ನೋಟಿಸ್ ನೀಡಿಲ್ಲ
 

Like Priyank Kharge Give notice to all BJP Leaders says KPCC President Congress Leader dk shivakumar san
Author
Bengaluru, First Published May 6, 2022, 1:07 AM IST | Last Updated May 6, 2022, 1:07 AM IST

ಬೆಂಗಳೂರು (ಮೇ.6): ದಲಿತ ನಾಯಕ (Dalith Leader) ಪ್ರಿಯಾಂಕ್‌ ಖರ್ಗೆ (priyank kharge) ಬಾಯಿ ಮುಚ್ಚಿಸಲು ನೋಟಿಸ್‌ ಜಾರಿ ಮಾಡುವ ‘ಉತ್ತಮ ಸಂಪ್ರದಾಯ’ವನ್ನು ಪೊಲೀಸರು ಹುಟ್ಟು ಹಾಕಿದ್ದಾರೆ. ಇದೇ ರೀತಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಬಿಜೆಪಿಯ ಬಸನಗೌಡ ಪಾಟಿಲ್‌ ಯತ್ನಾಳ್‌ (basanagouda patil yatnal), ಎಚ್‌.ವಿಶ್ವನಾಥ್‌ (h vishwanath), ಹಗರಣ ಮುಚ್ಚಿಡಲು ಯತ್ನಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (araga jnanendra) ಅವರಿಗೂ ನೋಟಿಸ್‌ ನೀಡಿ ವಿಚಾರಣೆಗೆ ಒಳಪಡಿಸಲಿ ಎಂದು ಹೀಗಂತ ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ. ಶಿವಕುಮಾರ್‌ (dk shivakumar) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಿಯಾಂಕ ಖರ್ಗೆ ಅವರಿಗೆ ಸಿಐಡಿ ನೀಡಿರುವ ಮೂರನೇ ನೋಟಿಸ್‌ ವಿಚಾರವಾಗಿ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು. ಪ್ರಿಯಾಂಕ ಖರ್ಗೆ ಅವರನ್ನು ವಿಚಾರಣೆಗೆ ಕಳುಹಿಸಬೇಕೆ ಅಥವಾ ಬೇಡವೇ ಎಂಬುದು ನಮಗೆ ಗೊತ್ತಿದೆ. ನಮ್ಮ ಪಕ್ಷದಿಂದಲೇ ನಿರ್ಧರಿಸುತ್ತೇವೆ ಎಂದು ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆಗೆ ನೋಟಿಸ್‌ ನೀಡಿರುವ ಪೊಲೀಸರು ಬಿಜೆಪಿಯವರಿಗೆ ಏಕೆ ನೀಡಿಲ್ಲ. ಬಸನಗೌಡ ಪಾಟಿಲ್‌ ಯತ್ನಾಳ್‌ ಅವರು ಕೆಪಿಎಸ್‌ಸಿ ಸದಸ್ಯರಾಗಲು 8-10 ಕೋಟಿ ರು. ನೀಡಬೇಕು ಎಂದಿದ್ದರು. ಎಚ್‌. ವಿಶ್ವನಾಥ್‌ ಸಹ ಟೆಂಡರ್‌ ಕಮಿಷನ್‌ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಯಾರಿಗೂ ನೋಟಿಸ್‌ ಜಾರಿ ಮಾಡಿಲ್ಲ. ಅವರಂತೆ ಪ್ರಿಯಾಂಕ ಖರ್ಗೆ ಅವರು ಸಹ ವಿಧಾನಮಂಡಲ ಸದಸ್ಯರು. ಅವರಿಗೆ ನೀಡದ ನೋಟಿಸ್‌ ಇವರಿಗೇಕೆ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಆರಗ ಜ್ಞಾನೇಂದ್ರಗೆ ನೋಟಿಸ್‌ ನೀಡಲಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ಅಕ್ರಮದ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದು ಐದು ಬಾರಿ ಉತ್ತರ ನೀಡಿದ್ದರು. ಈ ಮೂಲಕ ಆರೋಪಿಗಳನ್ನು ರಕ್ಷಿಸಲು, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ಹೀಗಾಗಿ ಮೊದಲು ಆರಗ ಜ್ಞಾನೇಂದ್ರ ಅವರಿಗೆ ನೋಟಿಸ್‌ ಜಾರಿ ಮಾಡಲಿ. ಸರ್ಕಾರವು ಮೊದಲು ತನ್ನ ಮುಖಕ್ಕೆ ಅಂಟಿರುವ ಕೊಳಕು, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸ್ವಚ್ಛ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು.


ಅಶ್ವತ್ಥನಾರಾಯಣ ಭ್ರಷ್ಟಾಚಾರಕ್ಕೆ ವಿಶ್ವಮಾನವ: ಡಿಕೆಶಿ
ಬೆಂಗಳೂರು (ಮೇ. 6):
ಪಿಎಸ್‌ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿಗಳ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ (ashwath narayan) ಭ್ರಷ್ಟಾಚಾರಕ್ಕೇ ವಿಶ್ವಮಾನವ. ಉನ್ನತ ಶಿಕ್ಷಣ ಇಲಾಖೆಯಲ್ಲಿನ ಅಕ್ರಮಗಳಿಗೂ ಇವರೇ ಪಿತಾಮಹ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪ ಮಾಡಿದ್ದಾರೆ.

ಮದ್ಯ ಪ್ರಿಯರಿಗೆ ಶಾಕ್: ರಾಜ್ಯಾದ್ಯಂತ ಮದ್ಯ ಖರೀದಿ ಸ್ಥಗಿತವಾಗುತ್ತೆ ಯಾಕೆ ಗೊತ್ತಾ?

ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್‌ ಅವರು ತಾನು ವಿಶ್ವಮಾನವ, ಒಕ್ಕಲಿಗ ಎಂದು ಹೇಳಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಅಶ್ವತ್ಥನಾರಾಯಣ್‌ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ರಾಮನಗರವನ್ನು ಕ್ಲೀನ್‌ ಮಾಡುತ್ತೇವೆ ಎಂದಿದ್ದರು. ಇದೀಗ ವಿಶ್ವಮಾನವ ಎಂದು ಹೇಳುತ್ತಿದ್ದಾರೆ. ಹೌದು ಅವರು ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ದೂರಿದರು.

BBMP ಮುಖ್ಯ ಆಯುಕ್ತ ಸೇರಿ 16 ಐಎಎಸ್ ಅಧಿಕಾರಿಗಳ ವರ್ಗಾವಣೆ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಇಲಾಖೆಯೇ ದೂರು ನೀಡಿದೆ. ಈ ಹಿಂದೆ ರಾಜೀವ್‌ಗಾಂಧಿ ಆರೋಗ್ಯ ಇಲಾಖೆ ಕುಲಸಚಿವರ ನೇಮಕದಲ್ಲಿ ಗೊಂದಲ ಸೃಷ್ಟಿಸಿದ್ದರು. ಯಾವ್ಯಾವ ಕುಲಸಚಿವರು ಏನೇನು ಅಕ್ರಮ ಮಾಡುತ್ತಿದ್ದಾರೆ. ಅಕ್ರಮ ಮಾಡುತ್ತಿರುವ ಕುಲ ಸಚಿವರು ಯಾರ ಮನೆಗೆ ಎಷ್ಟುಬಾರಿ ಹೋಗುತ್ತಿದ್ದಾರೆ. ಸಚಿವರೊಂದಿಗೆ ಅವರ ಒಡನಾಟ ಏನು? ಎಲ್ಲವೂ ಗೊತ್ತಿದೆ. ಎಲ್ಲ ಅಕ್ರಮಗಳಿಗೂ ಅವರೇ ಪಿತಾಮಹ. ಎಲ್ಲ ಭ್ರಷ್ಟಾಚಾರಗಳಿಗೂ ಅವರೇ ವಿಶ್ವಮಾನವ ಎಂದು ಕಿಡಿ ಕಾರಿದರು.

Latest Videos
Follow Us:
Download App:
  • android
  • ios